ಜೂನ್ 10ಕ್ಕೆ ‘ಕಲ್ಕಿ 2898’ ಟ್ರೈಲರ್

ಪ್ರಭಾಸ್ ಅಭಿನಯದ ಬಹುನಿರೀಕ್ಷಿತ ‘ಕಲ್ಕಿ 2898’ ಚಿತ್ರದ ಟ್ರೈಲರ್ ಜೂನ್ 10 ರಂದು ರಿಲೀಸ್ ಮಾಡುವುದಾಗಿ  ಸೋಶಿಯಲ್ ಮೀಡಿಯಾದಲ್ಲಿ ಚಿತ್ರತಂಡ ಘೋಷಣೆ ಮಾಡಿದೆ.

ಪ್ರಭಾಸ್ ಈ ಚಿತ್ರದಲ್ಲಿ ಭೈರವ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಅಮಿತಾಬ್ ಬಚ್ಚನ್ ಸೇರಿದಂತೆ ಕಮಲಹಾಸನ್, ದೀಪಿಕಾ ಪಡುಕೋಣೆ, ದಿಶಾ ಪಟಾನಿ, ರಾಜೇಂದ್ರ ಪ್ರಸಾದ್, ಬ್ರಹ್ಮಾನಂದಂ ಹಾಗೂ ಪಶುಪತಿ ತೆರೆ ಹಂಚಿಕೊಂಡಿದ್ದಾರೆ.

ವೈಜಯಂತಿ ಮೂವೀಸ್ ಬ್ಯಾನರ್ ನಲ್ಲಿ ಅಶ್ವಾನಿ ದತ್ ಈ ಸಿನಿಮಾ ನಿರ್ಮಾಣ ಮಾಡಿದ್ದು, ಸಂತೋಷ್ ನಾರಾಯಣನ್ ಸಂಗೀತ ಸಂಯೋಜನೆ ನೀಡಿದ್ದಾರೆ. ಇನ್ನುಳಿದಂತೆ ಕೋಟಗಿರಿ ವೆಂಕಟೇಶ್ವರ ರಾವ್ ಸಂಕಲನವಿದೆ.

ನಾಗ್ ಅಶ್ವಿನ್ ನಿರ್ದೇಶನದ  ‘ಕಲ್ಕಿ 2898’ ಜೂನ್ 27ಕ್ಕೆ ವಿಶ್ವಾದ್ಯಂತ ತೆರೆ ಮೇಲೆ ಬರಲು ಸಜ್ಜಾಗಿದೆ. ‘ಕಲ್ಕಿ 2898 ಎಡಿ’ ಸಿನಿಮಾಗೆ ಸುಮಾರು 500 ಕೋಟಿ ರೂಪಾಯಿಗಳಿಗೂ ಅಧಿಕ ಬಜೆಟ್‌ ಹಾಕಲಾಗಿದೆ. 5-6 ಭಾಷೆಗಳಲ್ಲಿ ಈ ಸೈನ್ಸ್ ಫಿಕ್ಷನ್ ಮಾದರಿಯ ಸಿನಿಮಾ ತೆರೆಗೆ ಬರಲಿದೆ.

ಕೆಲ ದಿನಗಳ ಹಿಂದಷ್ಟೇ  ಸಿನಿಮಾದಲ್ಲಿ ಬುಜ್ಜಿ ಅನ್ನೋ ಪಾತ್ರ ಇದೆ ಎಂದು ಚಿತ್ರತಂಡ ಹೇಳಿಕೊಂಡಿತ್ತು. ಅದರ ತಲೆ ಬುರುಡೆಯನ್ನು ಕೂಡ ಚಿತ್ರತಂಡ ತೋರಿಸಿತ್ತು. ‘ಕಲ್ಕಿ 2989 ಎಡಿ’ ಸಿನಿಮಾಕ್ಕಾಗಿ ಒಂದು ವಿಶೇಷ ಕಾರನ್ನು ಚಿತ್ರತಂಡ ರೆಡಿ ಮಾಡಿದೆ. ಅದು ಹೀರೋ ಭೈರವಗೆ ಸಹಾಯ ಮಾಡಲಿದೆ. ಹೈದರಾಬಾದ್‌ನಲ್ಲಿ ಟೀಸರ್ ರಿಲೀಸ್ ಮಾಡುವ ಕಾರ್ಯಕ್ರಮದಲ್ಲಿ ಅದರ ಪೂರ್ಣ ರೂಪವನ್ನು ಅದ್ದೂರಿಯಾಗಿ ಜಗಜ್ಜಾಹೀರು ಮಾಡಲಾಗಿದೆ.

—-

Be the first to comment

Leave a Reply

Your email address will not be published. Required fields are marked *

Translate »
error: Content is protected !!