“ಕಲಿ ಕುಡುಕರು” ಟ್ರೈಲರ್ ಬಿಡುಗಡೆ

ಮಹೇಶ್ ಎನ್ ನಿರ್ಮಾಣ, ಕರಣ್ ಸವ್ಯಸಾಚಿ ಆಕ್ಷನ್ ಕಟ್ ಹೇಳಿರುವ ” ಕಲಿ ಕುಡುಕರು” ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ.

ಆಟೋ ಡ್ರೈವರ್,  ಉಂಡಾಡಿ ಗುಂಡ, ರಿಯಲ್ ಎಸ್ಟೇಟ್ ಬ್ರೋಕರ್, ಅನಾಥ ನಿರುದ್ಯೋಗಿ ಹೀಗೆ ನಾಲ್ಕು ನಾಯಕರು ಮತ್ತು ಮತ್ತೊಬ್ಬನ ಸುತ್ತ ಸಾಗುವ ಕಥೆ ಚಿತ್ರ ಒಳಗೊಂಡಿದೆ.

ತಮ್ಮ ಕುಟುಂಬದಲ್ಲಿ ಆಗುವ ಅನಾಹುತಗಳಿಗೆ ಸಮಸ್ಯೆಗಳಿಗೆ ಒಳಗಾಗಿ ಕುಡಿತಕ್ಕೆ ದಾಸರಾಗುತ್ತಾರೆ. ನಿರುದ್ಯೋಗಿ ಯುವಕನನ್ನು ಆಗರ್ಭ ಯುವತಿಯನ್ನು ಪ್ರಿತಿಸುತ್ತಾಳೆ. ಆದರೆ ಹುಡುಗಿ ರೌಡಿಗಳಿಗೆ ಸಿಕ್ಕಿ ಅತ್ಯಾಚಾರಕ್ಕೆ ಒಳಗಾಗುತ್ತಾಳೆ. ರೌಡಿಗಳು ಆಕೆಯನ್ನು ನೇಣು ಹಾಕುತ್ತಾರೆ. ರೌಡಿಗಳಿಗೆ ಇನ್ಸ್ ಪೆಕ್ಟರ್ ಸಹಾಯ ಇರುತ್ತದೆ. ಹೀಗಿರುವಾಗ ನಾಲ್ಕು ಜನ ನಾಯಕರು ಮತ್ತು ಸ್ನೇಹಿತ ಸೇರಿ ರೌಡಿಗಳನ್ನು ಮತ್ತು ಇನ್ಸ್ ಪೆಕ್ಟರ್ ನ್ನು ಹೇಗೆ ಸಾಯಿಸುತ್ತಾರೆ ಎನ್ನುವುದು ಚಿತ್ರದ ಕಥಾಹಂದರ.

ಚಿತ್ರದ ಕುರಿತು ಮಾಹಿತಿ ಹಂಚಿಕೊಂಡ ನಿರ್ಮಾಪಕ ಮಹೇಶ್ ಎನ್., ಸಿನಿಮಾ ನಾಲ್ಕು ಜನರ ಪಾತ್ರದ ಸುತ್ತ ಸಾಗಲಿದೆ, ರಿಯಾಲಿಟಿ ಶೋ ಗೆ ನೃತ್ಯ ನಿರ್ದೇಶಕನಾಗಿ ಕೆಲಸ ಮಾಡಿದ್ದೇನೆ. ಚಿತ್ರದ ಮೂಲಕ ಕುಡಿಯುವುದರಿಂದ ಏನೆಲ್ಲಾ ಆಗಲಿದೆ ಎನ್ನುವುದನ್ನು ತೋರಿಸಿದ್ದೇವೆ. ಬೆಂಗಳೂರು ಸುತ್ತಮುತ್ತ ಮುತ್ತ ಚಿತ್ರೀಕರಣ ಮಾಡಲಾಗಿದ್ದು ಈ ತಿಂಗಳ ಅಂತ್ಯದಲ್ಲಿ ಚಿತ್ರ ಬಿಡುಗಡೆ ಮಾಡುವ ಉದ್ದೇಶವಿದೆ ಎಂದರು.

ನಾಗೇಂದ್ರ ಅರಸ್ ಮಾತನಾಡಿ, ಟೈಟಲ್ ಮಜವಾಗಿದೆ. ಪಾತ್ರಕ್ಕೆ ನ್ಯಾಯ ಒದಗಿಸಿದ್ದೇನೆ. ಹೊಸ ತಂಡಕ್ಕೆ ಸಹಕಾರ ಯಾವತ್ತೂ ಇದ್ದೇ ಇರುತ್ತೆ  ಎಂದರು.

ಸೋನು ಗೌಡ , ರಿತ್ಯಾ, ಹಿರಿಯ ಕಲಾವಿದೆ ಮಂಜುಳಾ ರೆಡ್ಡಿ , ಲೋಹಿತ್, ರವೀಶ್, ಮುರುಳಿ ಮಾಹಿತಿ ಹಂಚಿಕೊಂಡರು

ಮಹೇಶ್ ಎನ್, ಅಶೋಕ್, ರವೀಶ್, ಶರತ್, ಕೆ.ಜಿ ಲೋಹಿತ್ ,ರಿತ್ಯಾ ,ಸೋನು ದೀಪು, ಶೃತಿ , ಅರ್ಚನಾ, ನಾಗೇಂದ್ರ ಅರಸ್, ಮಾನ್ ಮೋಹನ್ ಮಂಜುಳಾ ರೆಡ್ಡಿ ಮುರುಳಿ ಮತ್ತಿತರರು ಚಿತ್ರದಲ್ಲಿದ್ದಾರೆ. ಚಿತ್ರಕ್ಕೆ ಸನ್ನಿ ಮಾಧವನ್ ಸಂಗೀತವಿದ್ದು ಎರಡು ಹಾಡುಗಳಿವೆ. ಚಿತ್ತೋರ್ ಸೂರಿ ಕ್ಯಾಮರ ,ಶ್ರೀರಂಗ ಹಾಲುವಾಗಿಲು ಸಾಹಿತ್ಯ, ಸುಪ್ರೀಂ ಸುಬ್ಬ ಸಾಹಸ ಚಿತ್ರಕ್ಕಿದೆ.

—–

Be the first to comment

Leave a Reply

Your email address will not be published. Required fields are marked *

Translate »
error: Content is protected !!