ಯಾವುದೇ ಹೊಸ, ಹಳೇ ಕಲಾವಿದರು ಚಿತ್ರರಂಗಕ್ಕೆ ಬಂದಲ್ಲಿ ಕಲಾವಿದರ ಸಂಘದಲ್ಲಿ ನೊಂದಣಿ ಮಾಡಿಸಿಕೊಂಡರೆ ಉಪಯೋಗವಾಗುತ್ತದೆಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎಸ್.ಎ.ಚಿನ್ನೆಗೌಡ ‘ಲಂಬೋದರ’ ಚಿತ್ರದ ಧ್ವನಿಸಾಂದ್ರಿಕೆಯನ್ನು ಅನಾವರಣಗೊಳಿ
ಮಾಡಿಸಿಲ್ಲವೆಂದು ಹೇಳಿದುದನ್ನು ನೆನಪಿಸಿಕೊಂಡು, ಯೋಗಿ ಬೆಳದ ಪರಿಯನ್ನು ವಿವರಿಸುತ್ತಾ ಸಿನಿಮಾಕ್ಕೆ ಶುಭ ಹಾರೈಸಿದರು.
ಕಳೆದ ವರ್ಷ ಇದೇ ತಿಂಗಳು ಮಹೂರ್ತ ಆಚರಿಸಿಕೊಳ್ಳಲಾಗಿತ್ತು. ಈಗ ಆಡಿಯೋ ಸಿಡಿ ಹೊರಬರುತ್ತಿರುವುದು ಖುಷಿಯಾಗಿದೆ. ಸಂಪೂರ್ಣ ಕಾಮಿಡಿಯಾಗಿದ್ದು, ಯೋಗಿ ಅವರಿಗೆ ಅಂತಲೇ ಕತೆ ಬರೆಯಲಾಗಿತ್ತು. ಅಡಿಬರಹದಲ್ಲಿ ಬಸವನಗುಡಿ ಬೆಂಗಳೂರು ಎಂದು ಹೇಳಲಾಗಿದ್ದು, ಸಿನಿಮಾವು ಇದೇ ಭಾಗದಲ್ಲಿ ನಡೆಯುತ್ತದೆ. ಎರಡು ಹಾಡುಗಳನ್ನು ಪುನೀತ್‍ರಾಜ್‍ಕುಮಾರ್, ಶ್ರೀಮುರಳಿ ಬಿಡುಗಡೆ ಮಾಡಿದ್ದಾರೆ. ಕೇರಳದ ಅಂದ ಪ್ರತಿಭೆ ವೈಕಮ್‍ವಿಜಯಲಕ್ಷೀ ಟೈಟಲ್ ಸಾಂಗ್‍ಗೆ ಧ್ವನಿಯಾಗಿದ್ದಾರೆ ಎಂದು ನಿರ್ದೇಶಕ ಕೆ.ಕೃಷ್ಣರಾಜು ಮಾಹಿತಿ ನೀಡಿದರು.
ಮದುವೆಯಾಗಿ ಮೂರೇ ದಿನಕ್ಕೆ ನಿರ್ದೇಶಕರು ವರಾತ ಮಾಡಿ ಚಿತ್ರೀಕರಣಕ್ಕೆ ಕರೆಸಿಕೊಂಡರು. ಮೂರು ಶೇಡ್‍ಗಳಲ್ಲಿ ಕಾಣಿಸಿಕೊಂಡಿದ್ದೇನೆ. ಮದ್ಯಮ ವರ್ಗದ ಪ್ರತಿಯೊಂದು ಮನೆಯಲ್ಲಿ ನಡೆಯುವ ಕತೆಯಾಗಿದೆ. ಆಗ ತಾನೇ ಕಾಲೇಜು ಮುಗಿಸಿ ಏನು ಐಡಿಯಾ ಇಲ್ಲದೆ ಯಾವ ರೀತಿ ಇರುತ್ತಾನೆಂದು ತೋರಿಸಲಾಗಿದೆ. ಹಾಡುಗಳು ಚೆನ್ನಾಗಿ ಬಂದಿರುವುದರಿಂದ ಮುಂದಿನ ಚಿತ್ರಕ್ಕೂ ಇದೇ ಸಂಗೀತ ನಿರ್ದೇಶಕರು ಕೆಲಸ ಮಾಡುತ್ತಾರೆಂದು ನಾಯಕ ಯೋಗಿ ಹೇಳಿದರು.
ಗೆಳಯನನ್ನು ಗೊಂದಲಕ್ಕೆ ತಂದು ಹಾಕಿ ತಮಾಷೆ ನೋಡುವ ಪಾತ್ರದಲ್ಲಿ ನಟನೆ ಮಾಡಿರುವುದು ಧರ್ಮಣ್ಣ. ಗುಂಡು ಹಾಕುವವರಿಗೆ ‘ಓ ಮನಸೇ’ ಹಾಡು ಕಿಕ್ ಕೊಡುತ್ತದೆಂದು ಯೋಗಿ ತಂದೆ ಟಿ.ಪಿ.ಸಿದ್ದರಾಜು ಬಣ್ಣನೆ ಮಾಡಿದರು.ಪುಟ್ಟಗೌರಿಮದುವೆ, ಕಿನ್ನರಿ ಧಾರವಾಹಿ ಹಾಡುಗಳಿಗೆ ಸಂಗೀತ ಸಂಯೋಜಿಸಿದ್ದು, ಮೊದಲ ಬಾರಿ ಕಮರ್ಷಿಯಲ್ ಚಿತ್ರಕ್ಕೆ ಅವಕಾಶ ಸಿಕ್ಕಿದೆ. ಓ ಮನಸೇ ಗೀತೆಯನ್ನು ಹಾಡಿದ್ದೇನೆಂದು ಕಾರ್ತಿಕ್‍ಶರ್ಮ ಸಂತಸ ಹಂಚಿಕೊಂಡರು. ಸಾಹಿತಿ ಹರ್ಷಪ್ರಿಯಾ, ಸಂಕಲನಕಾರ ಹರೀಶ್, ಕರಿಸುಬ್ಬು, ನಿರ್ಮಾಪಕರಲ್ಲಿ ಒಬ್ಬರಾದ ಉಡುಪಿಯ ರಾಘವೇಂದ್ರಭಟ್ ಚುಟುಕು ಮಾತನಾಡಿದರು. ನಾಯಕಿ ಆಕಾಂಕ್ಷ ಪೋಸ್ಟರ್‍ನಲ್ಲಿ ಕಾಣಿಸಿಕೊಂಡರು.
Be the first to comment