ಕಾಲಾಂತಕ’ ಸಧ್ಯದಲ್ಲೇ ಬಿಡುಗಡೆ

ಸದ್ದಿಲ್ಲದೆ ಶೂಟಿಂಗ್ ಮುಗಿಸಿ ತೆರೆಗೆ ಬರಲು ಸಜ್ಜಾಗಿರುವ ‘ಕಾಲಾಂತಕ’ ಸಿನಿಮಾದಲ್ಲಿ ಕೆಜಿಎಫ್ ಸಿನಿಮಾ ಖ್ಯಾತಿಯ ಅರ್ಚನಾ ಜೋಯಿಸ್ ಕಥೆ ಬರೆಯುವ ರೈಟರ್ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇದೀಗ ಚಿತ್ರದ ಟೀಸರ್ ಬಿಡುಗಡೆಯಾಗಿದ್ದು ಮರ್ಡರ್ ಮಿಸ್ಟರಿ ಕಥೆ ಹೊಂದಿರಬಹುದು ಎಂಬ ಸುಳಿವು ಕನ್ನಡ ಪ್ರೇಕ್ಷಕರನ್ನು ಸೆಳೆಯುತ್ತಿದೆ

ಮೊದಲ ಟೀಸರ್ನಲ್ಲೇ ‘ಕಗ್ಗತ್ತಲಿನ ಮಳೆಯಲಿ, ಹೆಜ್ಜೆ ಗುರುತುಗಳು ಕಾಣದೆ ಇರಬಹುದು. ಕರ್ಮ-ಧರ್ಮದ ಗುರುತುಗಳು ಕಾಡ್ತಾನೆ ಇರ್ತಾವೆ’ ಎಂಬ ಆಕರ್ಷಕ ಸಂಭಾಷಣೆ ನೋಡುಗರ ಮನಕಲುಕಿದೆ. ಈ ಹಿಂದೆ ‘ಜ್ವಲಂತ’ ಚಿತ್ರ ನಿರ್ದೇಶನ ಮಾಡಿ, ಗಮನ ಸೆಳೆದಿದ್ದ ಅಂಬರೀಶ್ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ

ಇದು ಡ್ರಗ್ ಮಾಫಿಯಾ ಜೊತೆಗೆ ಥ್ರಿಲ್ಲರ್ ಕಥಾನಕವುಳ್ಳ ಸಿನಿಮಾ. ಜೊತೆಗೆ ಅಬಾಚೂರ್ ಎಂಬ ಸಣ್ಣ ಗ್ರಾಮದಲ್ಲಿ ನಡೆಯುವ ಕಥೆಯಂತೆ. ಕೆಜಿಎಫ್ ಸಿನಿಮಾ ಖ್ಯಾತಿಯ ಅರ್ಚನಾ ಜೋಯಿಸ್ ಈ ಸಿನಿಮಾದಲ್ಲಿ ಮಿಂಚಿದ್ದಾರೆ. ಅರ್ಚನಾ ಜೋಯಿಸ್ ಈ ಸಿನಿಮಾದಲ್ಲಿ ಕಥೆ ಬರೆಯುವ ರೈಟರ್ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಯಶವಂತ್ ಶೆಟ್ಟಿ ಡ್ರಗ್ ಮಾಫಿಯಾ ಲೀಡರ್ ಆಗಿ ಕಾಣಿಸಿಕೊಂಡಿದ್ದಾರೆ. ಕಿರುತೆರೆಯಲ್ಲಿ ಮಿಂಚಿರುವ ಕಾರ್ತಿಕ್ ಸಮಾಗ ಈ ಚಿತ್ರದಲ್ಲಿ ನಾಯಕನ ಪಾತ್ರದಲ್ಲಿ ನಟಿಸುತ್ತಿದ್ದಾರೆ.

ಈ ಚಿತ್ರದಲ್ಲಿ ಎಸ್ ಕೆ ಶ್ರೀಧರ್ ವಿಶೇಷ ಪಾತ್ರದಲ್ಲಿ ನಟಿಸಿದ್ದಾರೆ. ಜುಡಾಸ್ಯಾಂಡಿ ಈ ಚಿತ್ರದ ಹಾಡುಗಳಿಗೆ ಸಂಗೀತ ಸಂಯೋಜಿಸುತ್ತಿದ್ದು, ಎಸ್. ಹಾಲೇಶ್ ಕ್ಯಾಮೆರಾ ವರ್ಕ್ ಮಾಡಿದ್ದಾರೆ.ಈ ಸಸ್ಪೆನ್ಸ್ ಥ್ರಿಲ್ಲರ್ ಚಿತ್ರಕ್ಕೆ, ಶಾಂತಕುಮಾರ್ ಬಂಡವಾಳ ಹಾಕಿದ್ದಾರೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!