ಜನಪ್ರಿಯ ನಟಿ ಕಾಜಲ್ ಅಗರ್ವಾಲ್ ಬಿಗ್ ಬಜೆಟ್ ಚಿತ್ರ ರಾಮಾಯಣದಲ್ಲಿ ಯಶ್ ಪತ್ನಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಬಾಲಿವುಡ್ ನಿರ್ದೇಶಕ ನಿತೀಶ್ ತಿವಾರಿ ನಿರ್ದೇಶನ ಮಾಡುತ್ತಿರುವ ಚಿತ್ರ ರಾಮಾಯಣದಲ್ಲಿ ರಾವಣನ ಪತ್ನಿ ಮಂಡೋದರಿ ಪಾತ್ರದಲ್ಲಿ ಕಾಜಲ್ ಅಗರ್ವಾಲ್ ಕಾಣಿಸಿಕೊಳ್ಳಲಿದ್ದಾರೆ.
ಈ ವಿಷಯದ ಬಗ್ಗೆ ಚಿತ್ರತಂಡದಿಂದ ಇನ್ನೂ ಅಧಿಕೃತ ಹೇಳಿಕೆ ಹೊರಬಿದ್ದಿಲ್ಲ. ರಾಮಾಯಣದಲ್ಲಿ ರಾಮ ಆಗಿ ರಣಬೀರ್ ಕಪೂರ್ ಮತ್ತು ಸೀತಾ ಪಾತ್ರದಲ್ಲಿ ಸಾಯಿ ಪಲ್ಲವಿ ಕಾಣಿಸಿಕೊಳ್ಳಲಿದ್ದಾರೆ.
ಕಾಜಲ್ ಅಗರ್ವಾಲ್ ಅವರು ತಮ್ಮ ನಟನೆಗೆ ಹೆಸರುವಾಸಿಯಾಗಿದ್ದಾರೆ. ‘ಮಗಧೀರ’, ‘ಡಾರ್ಲಿಂಗ್’, ಮತ್ತು ‘ಬೃಂದಾವನಂ’ ತೆಲುಗು ಚಿತ್ರಗಳಲ್ಲಿ, ‘ಸಿಂಗಂ’ ಮತ್ತು ‘ಸ್ಪೆಷಲ್ 26’ ಹಿಂದಿ ಚಿತ್ರಗಳಲ್ಲಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದ್ದಾರೆ.
ಕಾಜಲ್ ಅಗರ್ವಾಲ್ ಮದುವೆಯ ನಂತರ ಸಿನಿಮಾಗಳಿಂದ ವಿರಾಮ ತೆಗೆದುಕೊಂಡರು. ಬಹಳ ದಿನಗಳ ನಂತರ ಅವರು ಇತ್ತೀಚೆಗೆ ಸತ್ಯಭಾಮ ಆಗಿ ಉತ್ತಮ ಯಶಸ್ಸನ್ನು ಪಡೆದರು. ‘ರಾಮಾಯಣ’ ಚಿತ್ರದಲ್ಲಿ ಮಂಡೋದರಿ ಪಾತ್ರದಲ್ಲಿ ಕಾಜಲ್ ಅಗರ್ವಾಲ್ ಅವರು ಹೇಗೆ ಪ್ರಭಾವ ಬೀರುತ್ತಾರೆ ಎಂಬುದನ್ನು ಕಾದು ನೋಡಬೇಕಾಗಿದೆ.
ನಿತೀಶ್ ತಿವಾರಿ ಅವರ ‘ರಾಮಾಯಣ’ 2 ಭಾಗಗಳಲ್ಲಿ ನಿರ್ಮಾಣವಾಗಲಿದೆ ಎಂದು ವರದಿಯಾಗಿದೆ.
—-

Be the first to comment