ಧನ್ವೀರ್ ಅಭಿನಯದ ಕೈವ ಸಿನಿಮಾದ ಚಿತ್ರೀಕರಣ ಕಂಪ್ಲೀಟ್ ಆಗಿದೆ.
ಕೈವ ಸಿನಿಮಾದ ಚಿತ್ರೀಕರಣ ಬೆಂಗಳೂರಿನ ತಿಗಳರ ಪೇಟೆಯ ಸುತ್ತಮುತ್ತ ಮಾಡಲಾಗಿದೆ. ಈಗಾಗಲೇ ನಿರ್ದೇಶಕರು ಹೇಳಿರುವಂತೆ “ಕೈವ” ಚಿತ್ರದ ಕಥೆಗೂ ಕರಗ ಉತ್ಸವಕ್ಕೂ ನಂಟಿದೆ. ಹಾಗಾಗಿ ಬೆಂಗಳೂರಿನಲ್ಲಿಯೇ ಚಿತ್ರೀಕರಣ ಕಂಪ್ಲೀಟ್ ಮಾಡಲಾಗಿದೆ.
ಸದ್ಯ ಚಿತ್ರೀಕರಣ ಮುಗಿಸಿರುವ ಚಿತ್ರತಂಡ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಬಿಸಿಯಾಗಿದೆ. ಆದಷ್ಟು ಬೇಗ ಪೋಸ್ಟ್ ಪ್ರೊಡಕ್ಷನ್ ಕೆಲಸ ಮುಗಿಸಿ ಚಿತ್ರವನ್ನ ಪ್ರೇಕ್ಷಕರ ಮುಂದೆ ಪ್ರಸೆಂಟ್ ಮಾಡಲು ನಿರ್ದೇಶಕ ಜಯತೀರ್ಥ ಮುಂದಾಗಿದ್ದಾರೆ.
ಮೊದಲ ಬಾರಿಗೆ ಧನ್ವೀರ್ ಜೋಡಿಯಾಗಿ ಮೇಘಾ ಶೆಟ್ಟಿ ಕಾಣಿಸಿಕೊಳ್ಳುತ್ತಿದ್ದಾರೆ. ಜಯತೀರ್ಥ ಮತ್ತು ಧನ್ವೀರ್ ಕಾಂಬಿನೇಷನ್ ನ ಈ ಸಿನಿಮಾವನ್ನು ಅಭುವನಸ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ರವೀಂದ್ರ ಕುಮಾರ್ ನಿರ್ಮಿಸಿ ದ್ದಾರೆ.
‘ಕೈವ’ಚಿತ್ರಕ್ಕೆ 1983 ಅನ್ನೋ ಟ್ಯಾಗ್ ಲೈನ್ ಕೂಡ ಇದೆ. ಈ ಸಿನಿಮಾದಲ್ಲಿ ರೆಟ್ರೋ ಕಾಲದ ಕಥೆ ಇರಲಿದೆ ಎಂದು ಹೇಳಲಾಗಿದೆ.
___

Be the first to comment