ನಿರ್ದೇಶಕ: ರಂಜಿತ್ ಕುಮಾರ್ ಗೌಡ
ನಿರ್ಮಾಣ: ಅರುಣ್ ಕುಮಾರ್
ತಾರಾಗಣ: ಆದಿತ್ಯ ಕೆರೇಗೌಡ, ಅಂಕಿತಾ ಜಯರಾಮ್, ನೇಹಾ ಪಾಟೀಲ್ ಇತರರು
ರೇಟಿಂಗ್: 3.5
ಗೌಡರ ಹುಡುಗ, ಮುಸ್ಲಿಂ ಹುಡುಗಿ ಇವರಿಬ್ಬರ ನಡುವಣ ಮೊಬೈಲ್ ಇಲ್ಲದ ಕಾಲದ ಲವ್ ಸ್ಟೋರಿ ಹೊಂದಿದ ಸಿನಿಮಾ ” ಕಾಗದ ” ಈ ವಾರ ತೆರೆಗೆ ಬಂದಿದೆ.
ಕನ್ನಡದಲ್ಲಿ ಹಿಂದೂ ಹಾಗೂ ಮುಸ್ಲಿಂ ನಡುವಣ ಸಾಕಷ್ಟು ಲವ್ ಸ್ಟೋರಿ ಕಥೆಗಳು ಬಂದಿವೆ. ಈ ಚಿತ್ರದ ಚಿತ್ರಕಥೆ, ನಿರೂಪಣೆ ಬೇರೆ. ಹಾಗಾಗಿ ಇದು ಬೇರೆ ಚಿತ್ರದಂತೆ ಪ್ರೇಕ್ಷಕರಿಗೆ ಅನಿಸುತ್ತದೆ.
ಒಟ್ಟಿಗೆ ಓದುವ ಗೌಡರ ಹುಡುಗನಿಗೂ, ಮುಸ್ಲಿಂ ಹುಡುಗಿಗೂ ಕಲಿಕೆಯಲ್ಲಿ ಆಸಕ್ತಿ ಚೆನ್ನಾಗಿರುತ್ತದೆ. ಇದು ಅವರ ನಡುವೆ ಸ್ನೇಹ ಮೂಡಿಸಿ ಮುಂದಕ್ಕೆ ಪ್ರೇಮಕ್ಕೆ ಕರೆದೊಯ್ಯುತ್ತದೆ. ಮುಸ್ಲಿಂ ಹುಡುಗಿಯನ್ನು ಶಾಲೆಗೆ ಸೇರಿಸಿದ ಚಿಕ್ಕಮ್ಮ ಟೀಚರ್ ಆಗಿದ್ದು ಲವ್ ಮಾಡಿ ಮದುವೆ ಆದ ಅವಳ ಡೈವೋರ್ಸ್ ಕಥೆ ಇವರಿಬ್ಬರ ಪ್ರೇಮಕ್ಕೆ ತೊಂದರೆ ನೀಡುತ್ತದೆಯೇ ಎನ್ನುವುದಕ್ಕೆ ಚಿತ್ರವನ್ನು ನೋಡಬೇಕಿದೆ.
ಗೌಡರ ಹುಡುಗನ ಪಾತ್ರದಲ್ಲಿ ಆದಿತ್ಯ ಉತ್ತಮವಾಗಿ ನಟಿಸಿದ್ದಾರೆ. ಮುಸ್ಲಿಂ ಹುಡುಗಿಯ ಪಾತ್ರದಲ್ಲಿ ನಟಿಸಿರುವ ಅಂಕಿತಾ ಜಯರಾಮ್ ಗಮನ ಸೆಳೆಯುತ್ತಾರೆ. ಟೀಚರ್ ಪಾತ್ರದಲ್ಲಿ ನೇಹಾ ಪಾಟೀಲ್ ಕಾಣಿಸಿಕೊಂಡಿದ್ದು ಮತ್ತೆ ಸಿನಿಮಾಕ್ಕೆ ರೀಎಂಟ್ರಿ ಕೊಟ್ಟಿದ್ದಾರೆ.
ಸಿನಿಮಟೋಗ್ರಾಫರ್ ವೀನಸ್ ನಾಗರಾಜ್ ಮೂರ್ತಿ ಅವರ ಕೈ ಚಳಕ ಚಿತ್ರದ ಹೈಲೈಟ್ ಆಗಿದೆ. ಹಾಡುಗಳು ಚಿತ್ರದ ಕಥೆಗೆ ಪೂರಕ ಆಗಿದೆ. ಹಿನ್ನೆಲೆ ಸಂಗೀತ ಗಮನ ಸೆಳೆಯುತ್ತದೆ.
ಅನ್ಯ ಧರ್ಮದ ಲವ್ ಸ್ಟೋರಿ ಆಗಿರುವ ಕಾರಣ ಇದು ಪ್ರೇಕ್ಷಕರ ಗಮನ ಸೆಳೆಯುತ್ತದೆ. ಲವ್ ಸ್ಟೋರಿ ಚಿತ್ರ ನೋಡುವವರಿಗೆ ಈ ಚಿತ್ರ ಇಷ್ಟ ಆಗಬಹುದು.
____
Be the first to comment