ಕಾವ್ಯ ಶೆಟ್ಟಿ ಕನ್ನಡದ ಸಂವೇದನಾಶೀಲ ನಟಿಯಲ್ಲೊಬ್ಬರು. ಪಾತ್ರ ಪ್ರಧಾನ ಚಿತ್ರಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಅವರು ನಟಿಯರ ಸ್ಥಾನಮಾನ, ಸಂಭಾವನೆ ಹಾಗೂ ಪಾತ್ರದ ಮಹತ್ವದ ಕುರಿತು ಬಿ ಸಿನಿಮಾಸ್ ನೋಂದಿಗೆ ಮಾತಾಡಿದ್ದಾರೆ,
ತೊಂಬತ್ತರ ದಶಕದಲ್ಲಿ ಚಿತ್ರರಂಗವು ನಾಯಕನ ಜನಪ್ರಿಯತೆ ಬೆನ್ನಟ್ಟಿತ್ತು. ಅಂದರೆ ನಾಯಕಿಗೆ ಏನೋ ಆಪತ್ತು ಬರುತ್ತದೆ. ನಾಯಕ ಆಕೆಯನ್ನು ಕಾಪಾಡುತ್ತಾನೆ. ಪ್ರೇಕ್ಷರಿಗೂ ಒಂದು ಹಂತದವರೆಗೆ ಇದು ರುಚಿ ಹತ್ತಿಸಿತ್ತು. ನಿರ್ಮಾಪಕರಿಗೆ ಗೆಲುವಿನ ಫಾರ್ಮುಲಾ ಸಿಕ್ಕಂತಾಗಿತ್ತು. ನಾಯಕಿಯರು ತೆರೆಯ ಮೇಲೆ ಬರುವುದು, ಮೂರು ಹಾಡುಗಳಲ್ಲಿ ಕಾಣಿಸಿಕೋಳ್ಳಲಷ್ಟೇ ಸೀಮಿತವಾಗುತ್ತಿದ್ದರು. ಕ್ರಮೇಣ ಸಮಾಜದಲ್ಲಿ ಮಹಿಳೆಯರ ಸ್ಥಾನ ಬದಲಾಗಿ ಬೇರೆ ಬೇರೆ ಹುದ್ದೆಗಳಲ್ಲಿ ತೊಡಗಿಕೊಳ್ಳುತ್ತಿದ್ದಂತೆ, ಅವರ ಅಭಿರುಚಿಗೆ ತಕ್ಕಂತೆಯೂ ಸಿನಿಮಾಗಳು ಬರಲು ತೊಡಗಿದವು. ಇದರ ಫಲವಾಗಿ ನಾಯಕಿಯನ್ನೂ ಪಾತ್ರಗಳ ಮೂಲಕ ಗುರ್ತಿಸುವಂಥ ಸಿನಿಮಾಗಳು ನಿರ್ಮಾಣವಾಗತೊಡಗಿದವು. ಆದರೆ ಅದರ ಪ್ರಮಾಣ ಕಡಿಮೆಯಿದೆ. ಈ ಪರಿಸ್ಥಿತಿ ಇನ್ನಷ್ಟು ಸಿಧಾರಿಸಲು ಇಚ್ಛಾಶಕ್ತಿ ಇರುವ ನಿರ್ದೇಶಕರು, ನಿರ್ಮಾಪಕರು, ಬರಹಗಾರರು ಮತ್ತು ಪಾತ್ರವನ್ನು ದಕ್ಷವಾಗಿ ನಿರ್ವಹಿಸುವ ಸಾಮರ್ಥವುಳ್ಳ ನಟಿ –ಇವರೆಲ್ಲ ಒಟ್ಟಿಗೆ ಸೇರಬೇಕು.
ಮಂಗಳೂರು ಮೂಲದ ಈ ಬೆಡಗಿ ಇಂಜಿನಿಯರಿಂಗ್ ಪದವೀಧರೆ. ‘ನಮ್ ದುನಿಯಾ ನಮ್ ಸ್ಟೈಲ್’ ಚಿತ್ರದಿಂದ ಕಾವ್ಯಳ ಸಿನಿ ಜರ್ನಿ ಆರಂಭವಾಯ್ತು. ಮಾಡೆಲಿಂಗನಲ್ಲಿ ಸಿಕ್ಕ ಅವಕಾಶಗಳು ಕಾವ್ಯಳಿಗೆ ಸಿನಿಮಾ ತನಕ ಕರೆದುಕೊಂಡು ಬಂತು. ಈ ಕುರಿತು ಮಾತನಾಡುವ ಕಾವ್ಯ ಕಾಲೇಜ್ ಡೇಸ್ ನಲ್ಲಿಯೇ ಮಾಡೆಲಿಂಗ್ ಲೋಕಕ್ಕೆ ಎಂಟ್ರಿ ಕೊಟ್ಟೆ. ನನ್ನ ನಟನೆಯ ಕನಸಿಗೆ ಇನ್ನಷ್ಟು ಜೀವ ತುಂಬಿದ್ದು ಮಾಡೆಲಿಂಗ್. ನನ್ನ ಮೊದಲ ಸಿನಿಮಾ ನಮ್ ದುನಿಯಾ ನಮ್ ಸ್ಟೈಲ್ ಚಿತ್ರ ಸದ್ದು ಮಾಡದಿದ್ದರೂ, ಸಾಕಷ್ಟು ಅವಕಾಶ ಸೃಷ್ಟಿಸಿದೆ.
ಕಳೆದ ವರ್ಷ ಕಾವ್ಯ ಶೆಟ್ಟಿ ಅಭಿನಯದ ಎರಡು ಚಿತ್ರಗಳು ಬಿಡುಗಡೆಯಾಗಿವೆ. ಒಂದು ನಾಗತಿಹಳ್ಳಿ ಚಂದ್ರಶೇಖರ್ ರವರ ‘ಇಷ್ಟಕಾಮ್ಯ’ ಮತ್ತು ಗಣೇಶ್ ಅಭಿನಯದ ‘ಜೂಮ್’ನಲ್ಲಿ ಗೆಸ್ಟ್ ಅಪಿಯರೆನ್ಸ್. ಈ ವರ್ಷ ನಾಲ್ಕು ಸಿನಿಮಾಗಳಿವೆ, ‘ಸೈಲ್ ಪ್ಲೀಸ್’ ‘ಸಿಲಿಕಾನ್ ಸಿಟಿ’ ಬಿಡುಗಡೆಯಾಯಿತು. ‘3ಗಂಟೆ 30ದಿನ 30ಸೆಕೆಂಡ್’ ‘ಸಂಹಾರ’ ಬಿಡುಗಡೆಯಾಗಿದೆ.ಸದ್ಯ ಸೋಲ್ಡ್ ಸಿನಿಮಾದ ಶೂಟಿಂಗ್ ನಲ್ಲಿ ಇದ್ದಾರೆ.
Pingback: web cpns 2020