kabzaa2: 6 ಭಾಷೆಯಲ್ಲಿ ‘ಕಬ್ಜ 2’

ಒಟ್ಟು 6 ಭಾಷೆಯಲ್ಲಿ ‘ಕಬ್ಜ 2’ ಪ್ಯಾನ್‌ ಇಂಡಿಯಾ ಸಿನಿಮಾ ಮಾಡಲು ನಿರ್ದೇಶಕ ಆರ್.ಚಂದ್ರು ಸಿದ್ಧತೆ ನಡೆಸಿದ್ದಾರೆ.

ಖಾಸಗಿ ಹೊಟೇಲ್​ನಲ್ಲಿ ಕಬ್ಜ ಸಿನಿಮಾದ 25 ದಿನದ ಗ್ರ್ಯಾಂಡ್ ಸಕ್ಸಸ್ ಸೆಲೆಬ್ರೇಷನ್ ಸಂದರ್ಭದಲ್ಲಿ ಮಾಜಿ ಸಚಿವ ಹೆಚ್.ಎಂ.ರೇವಣ್ಣ ಅವರ ಮೂಲಕ 6 ಭಾಷೆಯ ಕಬ್ಜ 2 ಸಿನಿಮಾದ ಫಸ್ಟ್ ಲುಕ್ ಪೋಸ್ಟರ್ ರಿಲೀಸ್ ಮಾಡಲಾಯಿತು.

ಪೋಸ್ಟರ್ ಅನಾವರಣ ಮಾಡಿ ಮಾತನಾಡಿದ ಹೆಚ್.ಎಂ.ರೇವಣ್ಣ, ನನಗೆ ಚಿತ್ರರಂಗದ ನಂಟು ಮೊದಲಿನಿಂದಲೂ ಇದೆ. ಕಬ್ಜ ಸಿನಿಮಾ ಮಾಡಿ ದೊಡ್ಡ ಗೆಲುವನ್ನು ಚಂದ್ರು ಪಡೆದಿದ್ದಾರೆ. ಕಬ್ಜ ಐತಿಹಾಸಿಕ ದಾಖಲೆ ಮಾಡಿದ ಸಿನಿಮಾ. ಕಬ್ಜ 2 ಸಿನಿಮಾ ಕೂಡ ದೊಡ್ಡ ಯಶಸ್ಸು ಪಡೆಯುತ್ತದೆ ಎಂದು ಭವಿಷ್ಯ ನುಡಿದರು.

ನಂತರ ಮಾತನಾಡಿದ ನಿರ್ದೇಶಕ ಚಂದ್ರು, ಮೂರು ವರ್ಷಗಳ ದೊಡ್ಡ ಜರ್ನಿ ಕಬ್ಜ. ಸಿನಿಮಾಗೆ ತುಂಬಾ ದೊಡ್ಡ ಬಂಡವಾಳ ಹಾಕಿದ್ದೀವಿ. ಶಿವಣ್ಣ ನನ್ನ ಮನೆ ಮಗನ ಹಾಗೆ ನೋಡಿ‌ಕೊಳ್ಳುತ್ತಾರೆ. ಕಬ್ಜ ಅನ್ನೋ ಹೈವೇ ಈಗಾಗಲೇ ಹಾಕಿದ್ದು, ಅದರಲ್ಲಿ ಪ್ರಯಾಣ ಮಾಡಬೇಕು. ಕಬ್ಜ ಚಿಕ್ಕ ಸಸಿಯಾಗಿದ್ದು ಈಗ ಹೆಮ್ಮರವಾಗಿ ಬೆಳೆದಿದೆ. ಕಬ್ಜ 2 ಸಿನಿಮಾದಲ್ಲಿ ಬೇರೆ ಥರದ ಕಥೆ ಇರುತ್ತೆ. ಈ ಸಿನಿಮಾ ಕೂಡ ಪ್ಯಾನ್ ಇಂಡಿಯಾ ಮಟ್ಟದಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತೆ ಎಂದು ಹೇಳಿದರು.

ಸಕ್ಸಸ್ ಖುಷಿಯಲ್ಲಿ ನಟರಾದ ಅನೂಪ್ ರೇವಣ್ಣ, ಸುರೇಶ್ ಹೆಬ್ಳಿಕರ್, ಸುನೀಲ್ ಪುರಾಣಿಕ್, ನೀನಾಸಂ ಅಶ್ವಥ್, ಕೋಟೆ ಪ್ರಭಾಕರ್ ಇಡೀ ಕಬ್ಜ ಸಿನಿಮಾದ ತಂತ್ರಜ್ಙನರು ಉಪಸ್ಥಿತರಿದ್ದರು.

ಕಬ್ಜ ಕನ್ನಡ ಚಿತ್ರೋದ್ಯಮವಲ್ಲದೇ ಇಡೀ ಭಾರತೀಯ ಚಿತ್ರರಂಗದಲ್ಲಿ ಅದ್ದೂರಿ ಮೇಕಿಂಗ್‌ನಿಂದ ಆರ್ಭಟಿಸಿತ್ತು. ರಿಯಲ್ ಸ್ಟಾರ್ ಉಪೇಂದ್ರ ಹಾಗು ಕಿಚ್ಚ ಸುದೀಪ್, ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಒಳಗೊಂಡ ಕಬ್ಜ 4000 ಸಾವಿರ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿತ್ತು. ರೌಡಿಸಂ ಕಥೆ ಆಧರಿಸಿದ ಕಬ್ಜ ಬಾಕ್ಸ್ ಆಫೀಸ್​ನಲ್ಲಿ 200 ಕೋಟಿ ಕಲೆಕ್ಷನ್ ಮಾಡಿತ್ತು.
—-

Be the first to comment

Leave a Reply

Your email address will not be published. Required fields are marked *

Translate »
error: Content is protected !!