ಬರಲಿದೆ ‘ಕಬ್ಜ 2’

ಕಬ್ಜ ಟೀಸರ್ ಎರಡು ಕೋಟಿ ವೀವ್ಸ್​ ಪಡೆದ ಬೆನ್ನಲ್ಲೇ ‘ಕಬ್ಜ 2’ ಸಿನಿಮಾಗೆ ಕಥೆ ಸಿದ್ಧ ಮಾಡಿಕೊಂಡಿರುವ ಬಗ್ಗೆ ನಿರ್ದೇಶಕ ಆರ್​.ಚಂದ್ರು ಹೇಳಿದ್ದಾರೆ.

ಸಿನಿಮಾದ ಮೇಕಿಂಗ್ ಎಲ್ಲರ ಗಮನ ಸೆಳೆದಿದ್ದು, ಕಬ್ಜ 2′ ಸಿನಿಮಾ ತಯಾರಿ ಆಗುವ ಬಗ್ಗೆ ಫ್ಯಾನ್ಸ್ ಸಂತಸ ವ್ಯಕ್ತಪಡಿಸಿದ್ದಾರೆ.

ಉಪೇಂದ್ರ ಹಾಗೂ ಸುದೀಪ್ ಈ ಚಿತ್ರದಲ್ಲಿ ಮುಖ್ಯಪಾತ್ರ ನಿರ್ವಹಿಸಿದ್ದಾರೆ. ಕೆಜಿಎಫ್ ಚಾಪ್ಟರ್ 2 ಬಳಿಕ ಮೊದಲ 24 ಗಂಟೆಗಳಲ್ಲಿ ಅತಿಹೆಚ್ಚು ವೀಕ್ಷಣೆ ಪಡೆದ ಕನ್ನಡ ಚಲನಚಿತ್ರರಂಗದ ಟೀಸರ್ ಎನ್ನುವ ಹೆಗ್ಗಳಿಕೆಗೆ ಕಬ್ಜ ಪಾತ್ರವಾಗಿದೆ.

‘ಕಬ್ಜ’ ಟೀಸರ್ನಲ್ಲಿ ಪ್ರತಿ ಫೇಮ್ನಲ್ಲೂ ಶ್ರೀಮಂತಿಕೆ ಕಾಣುತ್ತಿದೆ. ರವಿ ಬಸ್ರೂರು ಅವರ ಹಿನ್ನೆಲೆ ಸಂಗೀತ, ಎ.ಜೆ. ಶೆಟ್ಟಿ ಅವರ ಛಾಯಾಗ್ರಹಣಕ್ಕೆ ಎಲ್ಲರಿಂದ ಮೆಚ್ಚುಗೆ ಕೇಳಿ ಬಂದಿದೆ.

ಕನ್ನಡ, ಹಿಂದಿ, ಮಲಯಾಳಂ, ತಮಿಳು, ತೆಲುಗು ಮುಂತಾದ ಭಾಷೆಗಳಲ್ಲಿ ‘ಕಬ್ಜ’ ಸಿನಿಮಾ ಬಿಡುಗಡೆ ಆಗಲಿದೆ. ಚಿತ್ರದ ಟೀಸರ್ ಚಿತ್ರಪ್ರಿಯರಲ್ಲಿ ಭಾರೀ ನಿರೀಕ್ಷೆ ಹುಟ್ಟಿಸಿದೆ.

ಎಂ.ಟಿ.ಬಿ ನಾಗರಾಜ್ ಅವರು ‘ಕಬ್ಜ’ ಚಿತ್ರ ಅರ್ಪಿಸುತ್ತಿದ್ದಾರೆ. ಶ್ರೀ ಸಿದ್ದೇಶ್ವರ ಎಂಟರ್ ಪ್ರೈಸಸ್ ಲಾಂಛನದಲ್ಲಿ ಆರ್. ಚಂದ್ರು ಅವರು ಈ ಸಿನಿಮಾ ನಿರ್ಮಿಸುತ್ತಿದ್ದಾರೆ.

ಕಾರ್ಯಕಾರಿ ನಿರ್ಮಾಪಕರಾಗಿ ಮುನೀಂದ್ರ ಹಾಗೂ ಲೈನ್ ಪ್ರೊಡ್ಯೂಸರ್ ಆಗಿ ರಾಜಶೇಖರ್ ಕಾರ್ಯನಿರ್ವಹಿಸುತ್ತಿದ್ದಾರೆ. ಎ.ಜೆ.ಶೆಟ್ಟಿ ಛಾಯಾಗ್ರಹಣ, ಮಹೇಶ್ ಸಂಕಲನ, ರಾಜು ಸುಂದರಂ, ಗಣೇಶ್, ಶೇಖರ್ ನೃತ್ಯ ನಿರ್ದೇಶನ, ರವಿವರ್ಮ, ವಿಕ್ರಂಮೋರ್, ವಿಜಯ್ ಸಾಹಸ ನಿರ್ದೇಶನ ಇದೆ.

ಅಂಡರ್ ವರ್ಲ್ಡ್ ಕಥೆ ಇರುವ ಈ ಚಿತ್ರದ ತಾರಾಬಳಗದಲ್ಲಿ ಉಪೇಂದ್ರ, ಕಿಚ್ಚ ಸುದೀಪ್ ಜೊತೆಗೆ ಕಾಮರಾಜನ್(ಐ ಸಿನಿಮಾ ಖ್ಯಾತಿ), ಜಗಪತಿ ಬಾಬು, ರಾಹುಲ್ ಜಗತಪ್, ಅನೂಪ್ ರೇವಣ್ಣ, ರಾಹುಲ್ ದೇವ್, ನವೀನ್, ಕೋಟ ಶ್ರೀನಿವಾಸ್, ಜಯಪ್ರಕಾಶ್, ಕಾಟ್ ರಾಜು, ಸುಬ್ಬರಾಜು ಮುಂತಾದವರು ಇದ್ದಾರೆ.
__

Be the first to comment

Leave a Reply

Your email address will not be published. Required fields are marked *

Translate »
error: Content is protected !!