Kabzaa: ಕಬ್ಜ ಇನಿಷಿಯಲ್ ಥಿಯೇಟರ್ ಲೀಸ್ಟ್ ರಿಲೀಸ್

ಕಬ್ಜ ಚಿತ್ರದ ಇನಿಷಿಯಲ್ ಥಿಯೇಟರ್ ಲೀಸ್ಟ್ ನ್ನು ಚಿತ್ರತಂಡ ಬಿಡುಗಡೆ ಮಾಡಿದೆ.

ಬೆಂಗಳೂರಿನ ಕೆಜಿ ರಸ್ತೆಯ ನರ್ತಕಿ ಚಿತ್ರಮಂದಿರ ಕಬ್ಜ ಚಿತ್ರಕ್ಕೆ ಮುಖ್ಯ ಚಿತ್ರಮಂದಿರವಾಗಿದೆ.

ನರ್ತಕಿ ಜತೆಗೆ ಲಾಲ್ ಬಾಗ್ ಬಳಿಯ ಊರ್ವಶಿ, ಸ್ಯಾಂಕಿ ರಸ್ತೆಯ ಕಾವೇರಿ, ಸೇವಾ ನಗರದ ಮುಕುಂದ, ಸಂಜಯ್ ನಗರದ ವೈಭವ್, ತಾವರೆಕೆರೆಯ ಬಾಲಾಜಿ, ಮಲ್ಲೇಶ್ವರದ ಸವಿತ, ಉತ್ತರಹಳ್ಳಿಯ ಮುಕ್ತ ಎ2, ನಗರದ ಎಲ್ಲಾ ಪಿವಿಆರ್, ಎಲ್ಲಾ ಐನಾಕ್ಸ್, ಗೋಪಾಲನ್ ಹಾಗೂ ಎಲ್ಲಾ ಸಿನಿಪೊಲಿಸ್‌ಗಳು ಕಬ್ಜ ಚಿತ್ರದ ಇನಿಷಿಯಲ್ ಥಿಯೇಟರ್ ಲಿಸ್ಟ್‌ನಲ್ಲಿವೆ.

ಉಳಿದಂತೆ ತುಮಕೂರು, ದೊಡ್ಡಬಳ್ಳಾಪುರ, ತಿಪಟೂರು, ಚನ್ನಪಟ್ಟಣ, ಮೈಸೂರು, ದಾವಣಗೆರೆ, ಹುಬ್ಬಳ್ಳಿ, ಬೆಳಗಾವಿ, ಕಲ್ಬುರ್ಗಿ, ರಾಯಚೂರು, ಬೀದರ್, ಶಿವಮೊಗ್ಗ, ಕುಂದಾಪುರ, ಮಣಿಪಾಲ ಹಾಗೂ ಮಂಗಳೂರಿನ ಕೆಲ ಚಿತ್ರಮಂದಿರಗಳು ಇನಿಷಿಯಲ್ ಥಿಯೇಟರ್ ಲಿಸ್ಟ್‌ನಲ್ಲಿವೆ. ಇನ್ನೂ ಹೆಚ್ಚು ಚಿತ್ರಮಂದಿರಗಳು ಮುಂದಿನ ಪಟ್ಟಿಯಲ್ಲಿ ಸೇರ್ಪಡೆಗೊಳ್ಳಲಿವೆ.

ಚಿತ್ರದಲ್ಲಿ ಉಪೇಂದ್ರ ಜತೆಗೆ, ಕಿಚ್ಚ ಸುದೀಪ್ ಹಾಗೂ ಶಿವ ರಾಜ್‌ಕುಮಾರ್ ಸಹ ನಟಿಸಿದ್ದು, ದೊಡ್ಡ ಮಟ್ಟದ ಕ್ರೇಜ್ ಹುಟ್ಟು ಹಾಕಿದೆ. ಈ ಮೂವರೂ ನಟರ ಅಭಿಮಾನಿಗಳೂ ಸಹ ಚಿತ್ರಮಂದಿರಗಳಿಗೆ ನುಗ್ಗಲಿದ್ದು, ಹೆಚ್ಚು ಚಿತ್ರಮಂದಿರಗಳಲ್ಲಿ ಚಿತ್ರ ತೆರೆಗೆ ಬರಲಿದೆ. ಮೊದಲ ದಿನ ದಾಖಲೆಯ ಗಳಿಕೆ ಮಾಡುವ ನಿರೀಕ್ಷೆ ಇದೆ.

ಚಿತ್ರ ಮಾರ್ಚ್ 17 ರಂದು ಬಿಡುಗಡೆಯಾಗಲಿದೆ. ಚಿತ್ರದ ಅಡ್ವಾನ್ಸ್ ಬುಕಿಂಗ್ ಮಾರ್ಚ್ 12 ಅಥವಾ ಮಾರ್ಚ್ 13ರ ಸೋಮವಾರದಿಂದ ತೆರೆಯಲಿದೆ. ಚಿತ್ರ ಮಾರ್ಚ್ 17ರ ಬೆಳಗಿನ ಜಾವವೇ ಆರಂಭಗೊಳ್ಳಲಿದೆ.

ನಾಯಕನಾಗಿ ಉಪೇಂದ್ರ, ನಾಯಕಿಯಾಗಿ ಶ್ರೇಯಾ ಶರಣ್ ತಾರಾಗಣದಲ್ಲಿದ್ದಾರೆ. ಕಿಚ್ಚ ಸುದೀಪ್ ಹಾಗೂ ಶಿವ ರಾಜ್‌ಕುಮಾರ್ ಪ್ರಮುಖ ಪಾತ್ರಗಳನ್ನು ನಿರ್ವಹಿಸಲಿದ್ದಾರೆ.

ಇನ್ನುಳಿದಂತೆ ಮುರಳಿ ಶರ್ಮಾ, ನವಾಬ್ ಶಾ, ಕೋಟ ಶ್ರೀನಿವಾಸ್ ರಾವ್, ಪೊಸಾನಿ ಕೃಷ್ಣ ಮುರಳಿ, ಸುಧಾ, ಕಬೀರ್ ದುಹಾನ್ ಸಿಂಗ್, ಜಾನ್ ಕೊಕ್ಕೆನ್, ದೇವ್ ಗಿಲ್, ಕಾಮರಾಜನ್, ದನೀಶ್ ಅಖ್ತರ್, ಲಕ್ಕಿ ಲಕ್ಷ್ಮಣ್, ಪ್ರಮೋದ್ ಶೆಟ್ಟಿ, ತಾಹಾ ಶಾ, ಅವಿನಾಶ್, ಸುನಿಲ್ ಪಟ್ನಾಯಕ್, ಅನೂಪ್, ಬಿ ಸುರೇಶ್, ಅಶ್ವತ್ಥ್ ನೀನಾಸಂ, ಸಂದೀಪ್ ಮಲಾನಿ, ಮಾಸ್ಟರ್ ಚಿರು ಹಾಗೂ ಮಾಸ್ಟರ್ ಜ್ಞಾನ್ ನಟಿಸಿದ್ದಾರೆ.
___

Be the first to comment

Leave a Reply

Your email address will not be published. Required fields are marked *

Translate »
error: Content is protected !!