ಉಪೇಂದ್ರ ಅಭಿನಯದ ಪಾನ್ ಇಂಡಿಯಾ ಸಿನಿಮಾ ‘ಕಬ್ಜ’ ದ ಟ್ರೈಲರ್ ಇಂದು ರಿಲೀಸ್ ಆಗಲಿದೆ.
ಟ್ರೈಲರ್ ಬಿಡುಗಡೆಗೆ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಸಂಜೆ 5:02 ಕ್ಕೆ ಯೂಟ್ಯೂಬ್ ನಲ್ಲಿ ಟ್ರೈಲರ್ ಬಿಡುಗಡೆಯಾಗಲಿದೆ.
ಪುನೀತ್ ರಾಜಕುಮಾರ್ ಅವರ ನೆನಪಿನಲ್ಲಿ ಅವರ ಹುಟ್ಟು ಹಬ್ಬವಾದ ಮಾರ್ಚ್ 17ರಂದು ಈ ಚಿತ್ರ ವಿಶ್ವದಾದ್ಯಂತ ತೆರೆ ಕಾಣಲಿದೆ. ಇದು ಕನ್ನಡ, ತಮಿಳು, ತೆಲುಗು, ಮಲಯಾಳಂ ಹಾಗೂ ಹಿಂದಿ ಭಾಷೆಯಲ್ಲಿ ನಿರ್ಮಾಣಗೊಂಡಿದೆ.
1940 ರ ಮಾಫಿಯಾ ಜಗತ್ತಿನ ಕಥೆಯನ್ನು ಈ ಚಿತ್ರ ಒಳಗೊಂಡಿದೆ ಎನ್ನಲಾಗಿದೆ. ಉಪೇಂದ್ರ ಅವರೊಂದಿಗೆ ಕಿಚ್ಚ ಸುದೀಪ್, ಶಿವಣ್ಣ ಕೂಡಾ ನಟಿಸಿರುವುದು ವಿಶೇಷ ಆಗಿದೆ.
ಸಿನಿಮಾದಲ್ಲಿ ಶ್ರೀಯಾ ಸರನ್ ನಾಯಕಿಯಾಗಿದ್ದು, ತಾನ್ಯಾ ಹೋಪ್ ಹಾಡೊಂದಕ್ಕೆ ಹೆಜ್ಜೆ ಹಾಕಿದ್ದಾರೆ. ಜಗಪತಿ ಬಾಬು, ರಾಹುಲ್ ದೇವ್, ದಾನಿಶ್ ಅಕ್ತರ್ ಸೈಫಿ, ಕಬೀರ್ ದುಬಾನ್ ಸಿಂಗ್, ಅನುಪ್ ರೇವಣ್ಣ ಮತ್ತು ಕೋಟ ಶ್ರೀನಿವಾಸ್ ಸೇರಿದಂತೆ ಪ್ರಮುಖ ಕಲಾವಿದರು ಅಭಿನಯಿಸಿದ್ದಾರೆ.
ಆರ್ ಚಂದ್ರು ಚಿತ್ರವನ್ನು ನಿರ್ದೇಶನ ಮಾಡುವ ಜೊತೆಗೆ ನಿರ್ಮಾಣ ಮಾಡಿದ್ದಾರೆ.
___





Be the first to comment