ಕಬ್ಜ ಟೀಸರ್​ ರಿಲೀಸ್​ ಗೆ ಶಿವಣ್ಣ, ದಗ್ಗುಬಾಟಿ

ಬಹುನಿರೀಕ್ಷೆಯ ಕಬ್ಜ ಚಿತ್ರದ ಟೀಸರ್​ ರಿಲೀಸ್​ ಕಾರ್ಯಕ್ರಮ ಇಂದು ನಡೆಯುಲಿದೆ. ಅದ್ದೂರಿಯಾಗಿ ನಡೆಯುತ್ತಿರುವ ಟೀಸರ್ ರಿಲೀಸ್ ಕಾರ್ಯಕ್ರಮಕ್ಕೆ ವಿಶೇಷ ಅತಿಥಿಗಳು ಭಾಗಿಯಾಗುತ್ತಿದ್ದಾರೆ.

ಸ್ಯಾಂಡಲ್ ವುಡ್ ನಿಂದ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮುಖ್ಯ ಅತಿಥಿಯಾಗಿ ಆಗಮಿಸಲಿದ್ದಾರೆ. ಟಾಲಿವುಡ್‌ನಿಂದ ರಾಣಾ ದಗ್ಗುಬಾಟಿ ಭಾಗಿ ಆಗಲಿದ್ದಾರೆ.

ಇಂದು ಸಂಜೆ ಬೆಂಗಳೂರಿನ ಓರಾಯನ್​ ಮಾಲ್​ನಲ್ಲಿ ಟೀಸರ್​ ರಿಲೀಸ್​ ಕಾರ್ಯಕ್ರಮ ನಡೆಯಲಿದೆ. 5 ಭಾಷೆಗಳಲ್ಲಿ ಟೀಸರ್​ ಬಿಡುಗಡೆ ಆಗುತ್ತಿದ್ದು, ಹೊರರಾಜ್ಯಗಳಿಂದಲೂ ಪತ್ರಕರ್ತರು ಆಗಮಿಸಲಿದ್ದಾರೆ. ಕನ್ನಡ ಚಿತ್ರರಂಗದ ಅನೇಕ ಸೆಲೆಬ್ರಿಟಿಗಳು ಕೂಡ ಕಾರ್ಯಕ್ರಮಕ್ಕೆ ಬಂದು ಶುಭ ಹಾರೈಸಲಿದ್ದಾರೆ. ಟೀಸರ್​ ಹೇಗಿರಲಿದೆ ನೋಡಲು ಅಭಿಮಾನಿಗಳು ಕಾತರರಾಗಿದ್ದಾರೆ.

ಸೆಪ್ಟಂಬರ್ 18 ರಿಯಲ್ ಸ್ಟಾರ ಉಪೇಂದ್ರ ಅವರ ಹುಟ್ಟುಹಬ್ಬ. ಅವರ ಜನ್ಮದಿನದ ಒಂದು ದಿನಕ್ಕೂ ಮೊದಲೇ ಬಹುನಿರೀಕ್ಷೆಯ ಸಿನಿಮಾದ ಟೀಸರ್ ರಿಲೀಸ್ ಮಾಡುವ ಮೂಲಕ ಅಭಿಮಾನಿಗಳಿಗೆ ಗಿಫ್ಟ್ ನೀಡಲು ನಿರ್ಧರಿಸಲಾಗಿದೆ. ಸುಮಾರು 3 ವರ್ಷಗಳಿಂದ ಈ ಸಿನಿಮಾಗಾಗಿ ಅಭಿಮಾನಿಗಳು ಕಾಯುತ್ತಿದ್ದರು. ಪೋಸ್ಟರ್ ಗಳು ಬಿಟ್ಟರೆ ಸಿನಿಮಾದಿಂದ ಬೇರೆ ಯಾವುದೇ ಮಾಹಿತಿ ಬಹಿರಂಗವಾಗಿರಲಿಲ್ಲ.

ಕಬ್ಜ ಪ್ಯಾನ್​ ಇಂಡಿಯಾ ಸಿನಿಮಾ ಆಗಿದೆ. ಕನ್ನಡದ ಜೊತೆಗೆ ತೆಲುಗು, ಮಲಯಾಳಂ, ತಮಿಳು, ಹಿಂದಿ ಮುಂತಾದ ಭಾಷೆಗಳಲ್ಲಿ ಈ ಸಿನಿಮಾ ಬಿಡುಗಡೆ ಆಗಲಿದೆ. ಉಪೇಂದ್ರ ಮತ್ತು ಕಿಚ್ಚ ಸುದೀಪ್​ ಕರ್ನಾಟಕ ಮಾತ್ರವಲ್ಲದೇ ಇಡೀ ದೇಶಾದ್ಯಂತ ಅಭಿಮಾನಿಗಳನ್ನು ಹೊಂದಿದ್ದಾರೆ. ಮೇಕಿಂಗ್ ಮೂಲಕ ಸದ್ದು ಮಾಡುತ್ತಿದ್ದ ಕಬ್ಜ ಟೀಸರ್ ಹೇಗಿರಲಿದೆ ಎನ್ನುವುದಕ್ಕೆ ಸಧ್ಯವೇ ಉತ್ತರ ಸಿಗಲಿದೆ.
___

Be the first to comment

Leave a Reply

Your email address will not be published. Required fields are marked *

Translate »
error: Content is protected !!