Kabzaa ಫೆ.4ಕ್ಕೆ ಕಬ್ಜ ಮೊದಲ ಲಿರಿಕಲ್​ ಸಾಂಗ್​

ಫೆಬ್ರವರಿ 4ರಂದು ಹೈದರಾಬಾದ್​ನಲ್ಲಿ ‘ಕಬ್ಜ’ ಚಿತ್ರದ ಮೊದಲ ಲಿರಿಕಲ್​ ಸಾಂಗ್​ ಅನಾವರಣ ಆಗಲಿದೆ.

ಈ ಕುರಿತು ಮಾಹಿತಿ ನೀಡಲು ಆರ್​. ಚಂದ್ರು ಅವರು ಸುದ್ದಿಗೋಷ್ಠಿ ನಡೆಸಿದ್ದಾರೆ.

ಇದು ಪ್ಯಾನ್​ ಇಂಡಿಯಾ ಸಿನಿಮಾ ಆದ್ದರಿಂದ ದೇಶದ ಹಲವು ನಗರಗಳಲ್ಲಿ ಒಂದೊಂದು ಸಾಂಗ್​ ರಿಲೀಸ್​ ಮಾಡಬೇಕು ಎಂದು ಆರ್​. ಚಂದ್ರು ಪ್ಲ್ಯಾನ್​ ಮಾಡಿಕೊಂಡಿದ್ದಾರೆ. ದೊಡ್ಡ ಮಟ್ಟದಲ್ಲಿ ಟ್ರೇಲರ್​ ಬಿಡುಗಡೆ ಮಾಡಲು ಅವರು ತಯಾರಿ ನಡೆಸುತ್ತಿದ್ದಾರೆ.

‘ಕನ್ನಡ ಚಿತ್ರರಂಗದಲ್ಲಿ ಈಗ ಪಾಸಿಟಿವ್​ ವಾತಾವರಣ ಇದೆ. ಒಂದು ಸಿನಿಮಾದ ಗೆಲುವಿಗೆ ಎಲ್ಲರೂ ಹಾರೈಸುತ್ತಿದ್ದಾರೆ’ ಎಂದು ಚಂದ್ರು ಹೇಳಿದ್ದಾರೆ.

‘ಕನ್ನಡದಲ್ಲಿ ಈಗಾಗಲೇ ಬಂದಿರುವ ಪ್ಯಾನ್​ ಇಂಡಿಯಾ ಸಿನಿಮಾಗಳು ಒಂದು ಹೆದ್ದಾರಿ ನಿರ್ಮಿಸಿವೆ. ಅದರಲ್ಲಿ ನಾವು ಸಾಗಬೇಕು. ಆಗಲೇ ಆ ಹೈವೇ ನಿರ್ಮಿಸಿದವರಿಗೆ ಗೌರವ ಸಿಕ್ಕಂತೆ ಆಗುತ್ತದೆ. ಯಾರಾದರೂ ಫಸ್ಟ್​ ರ‍್ಯಾಂಕ್ ಬಂದರೆ ನಾನೂ ಕೂಡ ರ‍್ಯಾಂಕ್ ಬರಬೇಕು ಅಂತ ಓದುತ್ತೇನೆ. ಸುಮ್ಮನೆ ಫಸ್ಟ್​ ರ‍್ಯಾಂಕ್ ಬರಬೇಕು ಅಂತ ಕನಸು ಕಾಣಲ್ಲ. ನನ್ನ ಜೊತೆ ಇಡೀ ತಂಡ ಕಷ್ಟಪಟ್ಟಿದೆ’ ಎಂದಿದ್ದಾರೆ ಚಂದ್ರು.

‘ಕಬ್ಜ’ ಘೋಷಣೆ ಮಾಡಿದ್ದು 3 ವರ್ಷಗಳ ಹಿಂದೆ. ಆದರೆ ಆ ಬಳಿಕ ಕೊರೊನಾ ಹಾವಳಿ ಶುರುವಾಯಿತು. ಹಲವಾರು ಅಡೆತಡೆಗಳು ಬಂದವು. ಅದನ್ನೆಲ್ಲ ಎದುರಿಸಿ, ಹತ್ತಾರು ಬಗೆಯಲ್ಲಿ ಸೆಟ್​ ಹಾಕಿ ಚಿತ್ರೀಕರಣ ಮಾಡಲಾಯಿತು. ಇದೆಲ್ಲ ಸಾಧ್ಯವಾಗಿದ್ದು ಒಂದು ಟೀಮ್​ ವರ್ಕ್​ ಕಕಾರಣದಿಂ. ಎಲ್ಲರಿಂದಾಗಿ ಇದು ಪ್ಯಾನ್​ ಇಂಡಿಯಾ ಸಿನಿಮಾ ಆಗಿದೆ’ ಎಂದು ಅವರು ಹೇಳಿದ್ದಾರೆ.

‘ಪುನೀತ್​ ರಾಜ್​ಕುಮಾರ್​ ಅವರು ಅಭಿಮಾನಿಗಳ ಪಾಲಿನ ದೇವರು. ಅನೇಕ ಬಾರಿ ಅವರು ನನ್ನನ್ನು ಹುರಿದುಂಬಿಸಿದ್ದರು. ಹುಷಾರಾಗಿ ಸಿನಿಮಾ ಮಾಡು ಅಂತ ಮಾರ್ಗದರ್ಶನ ನೀಡುತ್ತಿದ್ದರು. ಹಾಗಾಗಿ ಅವರ ಬರ್ತ್​ಡೇ ದಿನವೇ ಕಬ್ಜ ಬಿಡುಗಡೆ ಮಾಡುತ್ತಿದ್ದೇವೆ’ ಎಂದು ಚಂದ್ರು ಹೇಳಿದ್ದಾರೆ.

ಕಬ್ಜ ಸಾಕಷ್ಟು ನಿರೀಕ್ಷೆ ಮೂಡಿಸಿದೆ. ಚಿತ್ರದಲ್ಲಿ ಉಪೇಂದ್ರ ಮತ್ತು ಕಿಚ್ಚ ಸುದೀಪ್​ ಅವರು ಅಭಿನಯಿಸಿದ್ದಾರೆ. ನಾಯಕಿಯಾಗಿ ಶ್ರೀಯಾ ಶರಣ್​ ನಟಿಸಿದ್ದಾರೆ. ಮಾರ್ಚ್​ 17ರಂದು ಪುನೀತ್​ ರಾಜ್​ಕುಮಾರ್​ ಅವರ ಜನ್ಮದಿನದಂದು ‘ಕಬ್ಜ’ ಬಿಡುಗಡೆ ಆಗಲಿದೆ.
___

Be the first to comment

Leave a Reply

Your email address will not be published. Required fields are marked *

Translate »
error: Content is protected !!