ಕೆನಡಾದಲ್ಲಿ ಕಬ್ಜ ಚಿತ್ರ ಒಂದು ದಿನ ಮುನ್ನವೇ ರಿಲೀಸ್ ಆಗಲಿದೆ.
ಕಬ್ಜ ಸಿನಿಮಾ ಕೆನಡಾದಲ್ಲಿ ಒಂದು ದಿನದ ಮುಂಚೇನೆ ರಿಲೀಸ್ ಆಗುತ್ತಿದೆ. ಮಾರ್ಚ್ 16 ರಂದು ಇಲ್ಲಿ ಪ್ರಿಮಿಯರ್ ಶೋ ಆಯೋಜನೆ ಆಗಿದೆ.
ವಿಲೇಜ್ ಗ್ರೂಪ್ ಉಪ್ಪಿಯ ಕಬ್ಜ ಚಿತ್ರವನ್ನು ಕೆನಡಾದಲ್ಲಿ ರಿಲೀಸ್ ಮಾಡುತ್ತಿದೆ. ಇದರೊಟ್ಟಿಗೆ ಬೇರೆ ಬೇರೆ ದೇಶಗಳಲ್ಲೂ ಕಬ್ಜ ಸಿನಿಮಾ ರಿಲೀಸ್ ಆಗುತ್ತಿದೆ.
ಕಬ್ಜ ಚಿತ್ರದಲ್ಲಿ ಮೂವರು ಸ್ಟಾರ್ಗಳಿದ್ದಾರೆ. ಕಿಚ್ಚ ಸುದೀಪ್, ಶಿವರಾಜ್ ಕುಮಾರ್, ಉಪೇಂದ್ರ ಇದ್ದು ಸಾಕಷ್ಟು ನಿರೀಕ್ಷೆ ಹುಟ್ಟು ಹಾಕಿದೆ.
ಕಬ್ಜ ಚಿತ್ರ ದೊಡ್ಡಮಟ್ಟದಲ್ಲಿ ರಿಲೀಸ್ ಆಗುತ್ತಿದೆ. ಕನ್ನಡ, ತೆಲುಗು, ತಮಿಳು, ಹಿಂದಿ, ಮಲೆಯಾಳಂ ಸೇರಿದಂತೆ ಒಟ್ಟು 7 ಭಾಷೆಯಲ್ಲಿ ಕನ್ನಡದ ಕಬ್ಜ ಸಿನಿಮಾ ರಿಲೀಸ್ ಆಗುತ್ತಿದೆ.
ನಾಲ್ಕು ಸಾವಿರ ಥಿಯೇಟರ್ನಲ್ಲಿ ಕಬ್ಜ ರಿಲೀಸ್ ಆಗಲಿದೆ. ಈಗಾಗಲೇ ಟಿಕೆಟ್ ಬುಕಿಂಗ್ ಆರಂಭ ಆಗಿದ್ದು, ಸಿನಿಪ್ರಿಯರು ಮಾರ್ಚ್ 17 ರ ಫಸ್ಟ್ ಡೇ ಫಸ್ಟ್ ಶೋಗೆ ಕಾಯುತ್ತಿದ್ದಾರೆ.
___

Be the first to comment