Kabzaa: ಬೆಂಗಳೂರಿನಲ್ಲಿ ಕಬ್ಜ ಪ್ರಿ-ರಿಲೀಸ್ ಈವೆಂಟ್

ಕಬ್ಜ ಚಿತ್ರತಂಡದಿಂದ ಮಂಗಳವಾರ ಬೆಂಗಳೂರಿನಲ್ಲಿ ಗ್ರ್ಯಾಂಡ್ ಪ್ರಿ-ರಿಲೀಸ್ ಈವೆಂಟ್‍ನ ಹಮ್ಮಿಕೊಳ್ಳಲಾಗಿದೆ.

ಸಂಜೆ 6.30ಕ್ಕೆ ಶುರುವಾಗುವ ಈ ಸಮಾರಂಭದಲ್ಲಿ ಉಪ್ಪಿ-ಸುದೀಪ್-ಶಿವಣ್ಣ ಭಾಗಿ ಅಗಲಿದ್ದಾರೆ. ಸ್ಯಾಂಡಲ್‍ವುಡ್ ನ ಮತ್ತಷ್ಟು ತಾರೆಯರಿಗೂ ಆಹ್ವಾನ ನೀಡಲಾಗಿದೆ. ಹಲವು ತಾರೆಯರು ಪಾಲ್ಗೊಂಡು ಕಬ್ಜ ಈವೆಂಟ್ ಗೆ ಮೆರಗು ತುಂಬಲಿದ್ದಾರೆ.

ಕಬ್ಜ ಸಿನಿಮಾ ಮಾರ್ಚ್ 17ರಂದು ತೆರೆಗೆ ಬರಲಿದೆ. ಈಗಾಗಲೇ ಅಡ್ವಾನ್ಸ್ ಬುಕಿಂಗ್ ಕೂಡ ಸ್ಟಾರ್ಟ್ ಆಗಿದೆ. ಅಡ್ವಾನ್ಸ್ ಬುಕಿಂಗ್ ಗೆ ಸಿನಿಮಾ ಪ್ರೇಮಿಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಆರ್ ಚಂದ್ರು ನಿರ್ದೇಶನದ ಚಿತ್ರದಲ್ಲಿ ನಾಯಕನಾಗಿ ಉಪೇಂದ್ರ, ನಾಯಕಿಯಾಗಿ ಶ್ರೇಯಾ ಶರಣ್ ತಾರಾಗಣದಲ್ಲಿದ್ದಾರೆ. ಕಿಚ್ಚ ಸುದೀಪ್ ಹಾಗೂ ಶಿವ ರಾಜ್‌ಕುಮಾರ್ ಪ್ರಮುಖ ಪಾತ್ರಗಳನ್ನು ನಿರ್ವಹಿಸಲಿದ್ದಾರೆ.

ಇನ್ನುಳಿದಂತೆ ಮುರಳಿ ಶರ್ಮಾ, ನವಾಬ್ ಶಾ, ಕೋಟ ಶ್ರೀನಿವಾಸ್ ರಾವ್, ಪೊಸಾನಿ ಕೃಷ್ಣ ಮುರಳಿ, ಸುಧಾ, ಕಬೀರ್ ದುಹಾನ್ ಸಿಂಗ್, ಜಾನ್ ಕೊಕ್ಕೆನ್, ದೇವ್ ಗಿಲ್, ಕಾಮರಾಜನ್, ದನೀಶ್ ಅಖ್ತರ್, ಲಕ್ಕಿ ಲಕ್ಷ್ಮಣ್, ಪ್ರಮೋದ್ ಶೆಟ್ಟಿ, ತಾಹಾ ಶಾ, ಅವಿನಾಶ್, ಸುನಿಲ್ ಪಟ್ನಾಯಕ್, ಅನೂಪ್, ಬಿ ಸುರೇಶ್, ಅಶ್ವತ್ಥ್ ನೀನಾಸಂ, ಸಂದೀಪ್ ಮಲಾನಿ, ಮಾಸ್ಟರ್ ಚಿರು ಹಾಗೂ ಮಾಸ್ಟರ್ ಜ್ಞಾನ್ ನಟಿಸಿದ್ದಾರೆ.
___

Be the first to comment

Leave a Reply

Your email address will not be published. Required fields are marked *

Translate »
error: Content is protected !!