‘ಕಬ್ಜ’ ಚಿತ್ರದ ಓಟಿಟಿ ರೈಟ್ಸ್ ಅಮೆಜಾನ್ ಪ್ರೈಮ್‌ಗೆ ಮಾರಾಟಗೊಂಡಿದೆ.
ಎಲ್ಲಾ ಭಾಷೆಯ ಓಟಿಟಿ ಹಕ್ಕುಗಳನ್ನು ಅಮೆಜಾನ್ ಪ್ರೈಮ್ ಖರೀದಿಸಿದೆ ಎಂದು ನಿರ್ದೇಶಕ ಆರ್ ಚಂದ್ರು ಹೇಳಿದ್ದಾರೆ.
‘ಓಟಿಟಿ ಪ್ರಸಾರದ ಹಕ್ಕುಗಳನ್ನು ಅಮೆಜಾನ್ ಪ್ರೈಮ್‌ಗೆ ನೀಡಲಾಗಿದೆ. ದೊಡ್ಡ ಮೊತ್ತಕ್ಕೆ ಮಾರಾಟವಾಗಿದ್ದು, ಎಷ್ಟು ಮೊತ್ತ ಎಂಬುದು ಸಿನಿಮಾ ಬಿಡುಗಡೆ ಆದ ಮೇಲೆ ತಿಳಿಸಲಾಗುವುದು. ನಾನು ನಿರೀಕ್ಷೆ ಮಾಡಿದ್ದಕ್ಕಿಂತ ಹೆಚ್ಚು ಮೊತ್ತಕ್ಕೆ ಹಕ್ಕು ಮಾರಾಟಗೊಂಡಿದೆ. ಪ್ರತಿಷ್ಠಿತ ಸಂಸ್ಥೆ ಚಿತ್ರಕ್ಕೆ ದೊಡ್ಡ ಮೊತ್ತ ಕೊಟ್ಟಿರುವುದು ಚಿತ್ರದ ಮೇಲಿನ ನಿರೀಕ್ಷೆ ಹೆಚ್ಚಿಸಿದೆ. ಒಳ್ಳೆಯ ಸಿನಿಮಾ ಮಾಡಿದರೆ ಒಳ್ಳೆಯ ಪ್ರತಿಕ್ರಿಯೆ ಬರುತ್ತದೆ ಎಂಬುದಕ್ಕೆ ಕಬ್ಜ ಸಿನಿಮಾ ಸಾಕ್ಷಿ’ ಎಂದಿದ್ದಾರೆ ಚಂದ್ರು.
‘ಕಬ್ಜ’ ಚಿತ್ರದ ಟೀಸರ್ ಬಿಡುಗಡೆ ಆದ 24 ಗಂಟೆ ಅವಧಿಯಲ್ಲಿ 10 ಮಿಲಿಯನ್ ಹಿಟ್ಸ್ ಪಡೆದುಕೊಂಡಿದೆ. ಆನಂದ್ ಯೂಟ್ಯೂಬ್ ಚಾನಲ್‌ನಲ್ಲಿ ಟೀಸರ್ ಅಧಿಕೃತವಾಗಿ ಬಿಡುಗಡೆ ಆಗಿದೆ. ಚಿತ್ರದ ಟೀಸರ್ ಸೆ.17ರಂದು ಬಹುಭಾಷಾ ನಟ ರಾಣಾ ದಗ್ಗುಬಾಟಿ ಬಿಡುಗಡೆ ಮಾಡಿದ್ದರು.
ಚಿತ್ರದಲ್ಲಿ ಉಪೇಂದ್ರ, ಸುದೀಪ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರ ಭೂಗತಲೋಕದ ಕಥಾ ಹಂದರ ಹೊಂದಿದೆ. ಚಿತ್ರದ ಬಿಡುಗಡೆ ದಿನಾಂಕ ರಿವೀಲ್ ಆಗಬೇಕಿದೆ.
__
Be the first to comment