Shivarajkumar: ‘ಕಬ್ಜ’ ಹೊಸ ಪೋಸ್ಟರ್ ರಿಲೀಸ್

‘ಕಬ್ಜ’ಸಿನಿಮಾದಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್​ಕುಮಾರ್ ನಟಿಸುತ್ತಿದ್ದು, ಹೊಸ ಪೋಸ್ಟರ್ ರಿವೀಲ್ ಆಗಿದೆ.

ಇಂದು ರಿಲೀಸ್ ಆದ ಪೋಸ್ಟರ್​ನಲ್ಲಿ ಶಿವರಾಜ್​ಕುಮಾರ್ ಅವರು ನಾಡ ಬಂದೂಕು ಹಿಡಿದು ನಿಂತಿದ್ದಾರೆ. ಸುದೀಪ್ ಅವರು ಸಣ್ಣ ಗನ್​ ಹಿಡಿದ್ದಾರೆ. ಬ್ಯಾಕ್​ಗ್ರೌಂಡ್​ನಲ್ಲಿ ಉಪೇಂದ್ರ ಕೂಡ ಇದ್ದಾರೆ.

‘ಕಬ್ಜ’ ಸಿನಿಮಾ ಮಾರ್ಚ್​ 17ರಂದು ರಿಲೀಸ್ ಆಗುತ್ತಿದೆ. ಇದು ಪ್ಯಾನ್ ಇಂಡಿಯಾ ಸಿನಿಮಾ ಆಗಿದೆ. ಕನ್ನಡದ ಜೊತೆ ಹಿಂದಿ, ತೆಲುಗು, ತಮಿಳು ಹಾಗೂ ಮಲಯಾಳಂನಲ್ಲೂ ಸಿನಿಮಾ ಬಿಡುಗಡೆ ಆಗುತ್ತಿದೆ.

ಮಾರ್ಚ್ 4ರಂದು ಚಿತ್ರದ ಟ್ರೇಲರ್ ರಿಲೀಸ್ ಆಗಲಿದೆ. ಈ ಟ್ರೇಲರ್​ನಲ್ಲಿ ಸಿನಿಮಾದ ಕಥೆ ಬಗ್ಗೆ ಕುತೂಹಲದ ಸಂಗತಿ ತಿಳಿಯುವ ಸಾಧ್ಯತೆ ಇದೆ.

ಆರ್​.ಚಂದ್ರು ಅವರು ‘ಕಬ್ಜ’ ಚಿತ್ರವನ್ನು ನಿರ್ಮಾಣ ಮಾಡಿ, ನಿರ್ದೇಶನ ಮಾಡಿದ್ದಾರೆ. ಉಪೇಂದ್ರ ಅವರಿಗೆ ಜೊತೆಯಾಗಿ ಶ್ರೀಯಾ ಶರಣ್ ನಟಿಸಿದ್ದಾರೆ. ಸಿನಿಮಾದ ಹಾಡುಗಳು ಈಗಾಗಲೇ ರಿಲೀಸ್ ಆಗಿ ಮೆಚ್ಚುಗೆ ಪಡೆದುಕೊಂಡಿವೆ.
___

Be the first to comment

Leave a Reply

Your email address will not be published. Required fields are marked *

Translate »
error: Content is protected !!