Kabzaa: ಸೌಂಡ್ ಮಾಡುತ್ತಿದೆ ನಮಾಮಿ ಹಾಡು

ಕಬ್ಜ ಸಿನಿಮಾದ ನಮಾಮಿ‌ ಸಾಂಗ್ ರಿಲೀಸ್ ಆಗಿದ್ದು ಭರ್ಜರಿಯಾಗಿ ಸೌಂಡ್ ಮಾಡುತ್ತಿದೆ.

ಹಾಡು ಯಾವುದೇ ಬಾಲಿವುಡ್ ಸಾಂಗ್ ಗೂ ಕಮ್ಮಿ ಇಲ್ಲ ಅನ್ನೋ ಲೆವೆಲ್ಲಿಗೆ ಹವಾ ಕ್ರಿಯೇಟ್ ಮಾಡುತ್ತಿದೆ.

ಸಖತ್ ರಿಚ್ ಆಗಿ ಮೂಡಿ ಬಂದಿರೋ ಸಾಂಗ್ ನೋಡುಗರಿಗೆ ಖುಷಿ ನೀಡುತ್ತಿದೆ. ನಾಯಕಿ ಶ್ರೀಯಾ ನಟರಾಜನನ್ನು ಆರಾಧಿಸುವ ಹಾಡು ಇದಾಗಿದೆ.

ನಾಯಕಿ ಶ್ರೀಯಾ ಲುಕ್ ಮತ್ತು ಡ್ಯಾನ್ಸ್ ತುಂಬಾ ಅದ್ಭುತವಾಗಿ ಮೂಡಿ ಬಂದಿದೆ ರವಿಬಸ್ರೂರು ಸಂಗೀತ ನಿರ್ದೆಶನದ ಈ ಹಾಡು ಪ್ರೇಕ್ಷಕರ ಮನಗೆಲ್ಲುವಲ್ಲಿ ಯಶಸ್ವಿ ಆಗಿದೆ.

ಕಿನ್ನಲ್ ರಾಜ್ ಈ ಹಾಡಿಗೆ ಸಾಹಿತ್ಯ ,ಐಶ್ವರ್ಯ ರಂಗರಾಜನ್ ಹಾಡಿದ್ದಾರೆ.

ಆರ್ ಚಂದ್ರು ಆಕ್ಷನ್ ಕಟ್ ಹೇಳಿರುವ ಕಬ್ಜ ಸಿನಿಮಾ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹುಟ್ಟುಹಬ್ಬವಾದ ಮಾರ್ಚ್ 17ರಂದು ರಿಲೀಸ್ ಆಗುತ್ತಿದೆ. ಕಬ್ಜ ಸಿನಿಮಾಗೆ ಜನರು ಕಾದು ಕುಳಿತಿದ್ದಾರೆ.

ಕಬ್ಜದಲ್ಲಿ ಉಪೇಂದ್ರಗೆ ನಾಯಕಿಯಾಗಿ ಶ್ರೀಯಾ ಶರಣ್ ಕಾಣಿಸಿಕೊಂಡಿದ್ದಾರೆ. ನವಾಬ್ ಷಾ, ಕಬೀರ್ ಸಿಂಗ್ ದುಹಾನ್, ಪ್ರಮೋದ್ ಶೆಟ್ಟಿ, ಮುರಳಿ ಶರ್ಮ ಮುಂತಾದವರು ಅಭಿನಯಿಸಿದ್ದಾರೆ.

‘ಕೆಜಿಎಫ್’ ಖ್ಯಾತಿಯ ಸಂಗೀತ ನಿರ್ದೇಶಕ ರವಿ ಬಸ್ರೂರು ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದಾರೆ. ಎಜೆ ಶೆಟ್ಟಿ ಅವರು ಛಾಯಾಗ್ರಹಣ, ‘ಕೆಜಿಎಫ್’ ಖ್ಯಾತಿಯ ಶಿವಕುಮಾರ್ ಕಲಾ ನಿರ್ದೇಶನ ಮಾಡಿದ್ದಾರೆ.

ಇದು ಸ್ವಾತಂತ್ರ್ಯಪೂರ್ವದ ಭೂಗತ ಲೋಕದ ಕಥೆಯಾಗಿದೆ. ಕಿಚ್ಚ ಸುದೀಪ್ ಕೂಡಾ ಪ್ರಮುಖ ಪಾತ್ರದಲ್ಲಿದ್ದಾರೆ.
__

Be the first to comment

Leave a Reply

Your email address will not be published. Required fields are marked *

Translate »
error: Content is protected !!