ಕಬ್ಜ ಚಿತ್ರದ ಸೆನ್ಸಾರ್ ಮುಕ್ತಾಯಗೊಂಡಿದ್ದು, ಚಿತ್ರಕ್ಕೆ ಯು/ಎ ಸರ್ಟಿಫಿಕೇಟ್ ನ್ನು ಸೆನ್ಸಾರ್ ಮಂಡಳಿ ನೀಡಿದೆ.
ಕಬ್ಜ ಚಿತ್ರದ ರನ್ ಟೈಮ್ ವಿದೇಶದಲ್ಲಿ 2 ಗಂಟೆ 14 ನಿಮಿಷಗಳ ಕಾಲ ಇರಲಿದೆ. ಭಾರತದಲ್ಲಿ 2 ಗಂಟೆ 16 ನಿಮಿಷಗಳು ಇರಲಿದೆ ಎಂದು ತಿಳಿದು ಬಂದಿದೆ.
ಚಿತ್ರ ಇದೇ ತಿಂಗಳ 17 ರಂದು ಕರ್ನಾಟಕ ರತ್ನ ಪುನೀತ್ ರಾಜ್ಕುಮಾರ್ ಅವರ ಹುಟ್ಟುಹಬ್ಬದ ಪ್ರಯುಕ್ತ ಬಿಡುಗಡೆಗೊಳ್ಳಲಿದೆ. ಚಿತ್ರದ ಬಿಡುಗಡೆಗೆ ದಿನಗಣನೆ ಆರಂಭವಾಗಿದೆ.
ಚಿತ್ರದಲ್ಲಿ ಕನ್ನಡ ಚಿತ್ರರಂಗದ ಮೂವರು ಸ್ಟಾರ್ ನಟರಾದ ಉಪೇಂದ್ರ, ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಹಾಗೂ ಶಿವ ರಾಜ್ಕುಮಾರ್ ತೆರೆ ಹಂಚಿಕೊಳ್ಳುತ್ತಿರುವುದು ಅಭಿಮಾನಿಗಳಲ್ಲಿ ಸಾಕಷ್ಟು ಕುತೂಹಲ ಉಂಟು ಮಾಡಿದೆ.
ಐಎಂಡಿಬಿ ವೆಬ್ ತಾಣದಲ್ಲಿ ಕಬ್ಜ ಭಾರತದ ಬಹು ನಿರೀಕ್ಷಿತ ಚಿತ್ರಗಳ ಪಟ್ಟಿಯಲ್ಲಿ ಅಗ್ರಸ್ಥಾನವನ್ನು ಪಡೆದುಕೊಂಡಿದೆ. ಮಾರ್ಚ್ 9ರಂದು ಐಎಂಡಿಬಿ ಟಾಪ್ 10 ಭಾರತದ ಬಹು ನಿರೀಕ್ಷಿತ ಸಿನಿಮಾಗಳ ಪಟ್ಟಿ ಬಿಡುಗಡೆಯಾಗಿದ್ದು, ಈ ಪಟ್ಟಿಯಲ್ಲಿ ಆರ್ ಚಂದ್ರು ನಿರ್ದೇಶನದ ಕಬ್ಜ ಚಿತ್ರ ಇದೆ.
___





Be the first to comment