ರಿಯಲ್ ಸ್ಟಾರ್ ಉಪೇಂದ್ರ ನಟನೆಯ ‘ಕಬ್ಜ’ ಚಿತ್ರದ ವಿದೇಶ ಪ್ರದರ್ಶನದ ಹಕ್ಕಿಗೆ ಭಾರೀ ಬೇಡಿಕೆ ವ್ಯಕ್ತವಾಗಿದೆ.
ಕಬ್ಜಾ 7 ಭಾಷೆಗಳಲ್ಲಿ ಬಿಡುಗಡೆಯಾಗಲಿದ್ದು, ಈಗಾಗಲೇ ಕೆಲವು ಭಾಷೆಗಳ ಸ್ಯಾಟಲೈಟ್ ಹಕ್ಕುಗಳು ಮಾರಾಟವಾಗಿವೆ. ಉಳಿದ ಭಾಷೆಗಳಿಗೆ ನಿರ್ದೇಶಕ ಚಂದ್ರು ಮಾತುಕತೆ ನಡೆಸುತ್ತಿದ್ದಾರೆ.
ಕೆಲವು ಭಾಷೆಗಳ ಡಿಜಿಟಲ್ ಹಕ್ಕುಗಳನ್ನು ಅಮೆಜಾನ್ ಗೆ ಭಾರಿ ಬೆಲೆಗೆ ಮಾರಾಟ ಮಾಡಲಾಗುವುದು ಎಂದು ಹೇಳಲಾಗಿದೆ. ಈ ಕುರಿತು ಹೆಚ್ಚಿನ ವಿವರಗಳನ್ನು ಮುಂದಿನ ದಿನಗಳಲ್ಲಿ ನಿರ್ಮಾಪಕ ಮತ್ತು ನಿರ್ದೇಶಕರು ಹಂಚಿಕೊಳ್ಳಲಿದ್ದಾರೆ.
ಭಾರತದ ಹೊರಗಡೆಯೂ ಚಿತ್ರ ಬಿಡುಗಡೆಯಾಗುತ್ತದೆ. ವಿದೇಶದಲ್ಲಿ ಹೆಚ್ಚಿನ ಸಂಖ್ಯೆಯ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ ಎಂದು ಚಂದ್ರು ತಿಳಿಸಿದ್ದಾರೆ.
ನಟ ನಿತಿನ್ ಅವರ ತಂದೆ, ಹೆಸರಾಂತ ವಿತರಕ ಸುಧಾಕರ್ ರೆಡ್ಡಿ ಕಬ್ಜಾದ ತೆಲುಗು ಹಕ್ಕುಗಳನ್ನು ಪಡೆದಿದ್ದು, ರುಚಿರಾ ಎಂಟರ್ ಟೈನ್ ಮೆಂಟ್ಸ್ ಮತ್ತು ಎನ್ ಸಿನಿಮಾಸ್ ಬ್ಯಾನರ್ ಮೂಲಕ ಚಿತ್ರವನ್ನು ಬಿಡುಗಡೆ ಮಾಡಲಿದ್ದಾರೆ.
ಪ್ಯಾನ್ ಇಂಡಿಯಾ ಸಿನಿಮಾ ‘ಕಬ್ಜ’ ವನ್ನು ಪುನೀತ್ ರಾಜ್ ಕುಮಾರ್ ಅವರ ಜನ್ಮ ದಿನವಾದ ಮಾರ್ಚ್ 17ರಂದು ಬಿಡುಗಡೆ ಮಾಡಲು ನಿರ್ದೇಶಕ ಆರ್. ಚಂದ್ರು ಸಜ್ಜಾಗಿದ್ದಾರೆ. ಉಪೇಂದ್ರ ನಾಯಕ ನಟನಾಗಿ ಅಭಿನಯಿಸಿರುವ ಈ ಬಹುಭಾಷಾ ಚಿತ್ರದಲ್ಲಿ ಸುದೀಪ್ ಪ್ರಮುಖ ಪಾತ್ರದಲ್ಲಿದ್ದಾರೆ.
___

Be the first to comment