ಆರ್.ಚಂದ್ರು ನಿರ್ಮಾಣ ಹಾಗೂ ನಿರ್ದೇಶನದ ಬಹುಕೋಟಿ ವೆಚ್ಚದ ‘ಕಬ್ಜ’ ಚಿತ್ರದ ಚಿತ್ರೀಕರಣ ಆರಂಭವಾಗಿದೆ. ಈ ಚಿತ್ರಕ್ಕಾಗಿ 9 ಸೆಟ್ ಹಾಕಲು ಚಂದ್ರು ನಿರ್ಧರಿಸಿದ್ದು, ಈಗಾಗಲೇ ಮಿನರ್ವ ಮಿಲ್ನಲ್ಲಿ 4 ಸೆಟ್ಗಳು ತಲೆ ಎತ್ತಿವೆ. ಮಿನರ್ವ ಮಿಲ್ನಲ್ಲಿ ಹಾಕಲಾದ ಸೆಟ್ನಲ್ಲಿ ಚಿತ್ರೀಕರಣ ನಡೆಯುತ್ತಿದೆ. ರೆಟ್ರೋ ಸ್ಟೈಲ್ ಸಿನಿಮಾ ಇದಾಗಿದ್ದು, ಬಹುತೇಕ ಶೂಟಿಂಗ್ ಸೆಟ್ ನಲ್ಲಿ ನಡೆಯಲಿದೆ.
ಆರ್.ಚಂದ್ರು ನಿರ್ಮಾಣ ಹಾಗೂ ನಿರ್ದೇಶನದ ಬಹುಕೋಟಿ ವೆಚ್ಚದ ‘ಕಬ್ಜ’ ಚಿತ್ರದ ಚಿತ್ರೀಕರಣ ಆರಂಭವಾಗಿದೆ. ರಿಯಲ್ ಸ್ಟಾರ್ ಉಪೇಂದ್ರ ನಟಿಸುತ್ತಿರುವ ಕಬ್ಜ ಸಿನಿಮಾದ ಚಿತ್ರೀಕರಣ ಭರದಿಂದ ಸಾಗುತ್ತಿದೆ ಬಹಳ ಅಪರೂಪದ ಅನುಭವ ಆಗ್ತಿದೆ. 100 ಪರ್ಸೆಂಟ್ ಶೂಟಿಂಗ್ ಜರ್ನಿ ಎಂಜಾಯ್ ಮಾಡ್ತಿದೀನಿ ಎಂದ ರಿಯಲ್ ಸ್ಟಾರ್ ಸೆಟ್ನಲ್ಲಿ ಎಲ್ಲರೂ ಎಂಜಾಯ್ ಮಾಡುತ್ತಾ ಕೆಲಸ ಮಾಡ್ತಿದ್ದೀವಿ ಎಂದ ಉಪ್ಪಿ. ದೊಡ್ಡ ಮಟ್ಟದಲ್ಲಿ ಎಲ್ಲ ಪ್ರೇಕ್ಷಕರನ್ನು ಕಬ್ಜ ಮಾಡ್ಬೇಕು ಅಂತಿದೆ ಚಿತ್ರತಂಡ ಈ ಚಿತ್ರಕ್ಕಾಗಿ 9 ಸೆಟ್ ಹಾಕಲು ಚಂದ್ರು ನಿರ್ಧರಿಸಿದ್ದು, ಈಗಾಗಲೇ ಮಿನರ್ವ ಮಿಲ್ನಲ್ಲಿ 4 ಸೆಟ್ಗಳು ತಲೆ ಎತ್ತಿವೆ. ಒಂದೂವರೆ ಕೋಟಿಗಿಂತಲೂ ಅಧಿಕ ವೆಚ್ಚದಲ್ಲಿ ಈ ಸೆಟ್ಗಳನ್ನು ನಿರ್ಮಿಸಲಾಗಿದೆಯಂತೆ ಜೊತೆಗೆ ‘ಕೆಜಿಎಫ್’ ಕಲಾ ನಿರ್ದೇಶಕ ಶಿವಕುಮಾರ್ ಅವರ ಕಲ್ಪನೆಯಲ್ಲಿ ಸೆಟ್ ಮೂಡಿಬಂದಿವೆ
ಮಿನರ್ವ ಮಿಲ್ನಲ್ಲಿ ಹಾಕಲಾದ ಸೆಟ್ನಲ್ಲಿ ಚಿತ್ರೀಕರಣ ನಡೆಯುತ್ತಿದೆ. ರೆಟ್ರೋ ಸ್ಟೈಲ್ ಸಿನಿಮಾ ಇದಾಗಿದ್ದು, ಬಹುತೇಕ ಶೂಟಿಂಗ್ ಸೆಟ್ನಲ್ಲೇ ನಡೆಯಲಿದೆ. ಈ ಚಿತ್ರದ ಶೂಟಿಂಗ್ನಲ್ಲಿ ಭಾಗವಹಿಸಿರುವ ಅವರಿಗೆ ಓಂ ಸಿನಿಮಾ ನೆನಪಾಗುತ್ತಿದೆಯಂತೆ. ಅದಕ್ಕೆ ಕಾರಣವೇ ಮೇಕಿಂಗ್. ಯಾವೆಲ್ಲ ವಿಚಾರಗಳಲ್ಲಿ ಇದು ಓಂ ಚಿತ್ರಕ್ಕೆ ಹೋಲಿಕೆ ಆಗುತ್ತಿದೆ ಎಂಬ ಬಗ್ಗೆ ಉಪೇಂದ್ರ ಮಾತನಾಡಿದ್ದಾರೆ. ಅಂದಹಾಗೆ ‘ಕಬ್ಜ’ ಪ್ಯಾನ್ ಇಂಡಿಯಾ ಸಿನಿಮಾವಾಗಿದ್ದು, ಸುಮಾರು ಏಳು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಯುವ ಛಾಯಾಗ್ರಹಕ ಎ ಜೆ ಶೆಟ್ಟಿಅವರ ಕ್ಯಾಮೆರಾದಲ್ಲಿ ಸೆರೆಯಾಗಿರುವ ಉಪೇಂದ್ರ ಅವರ ಡಾನ್ ಲುಕ್ಗೆ ಎಲ್ಲರು ಫಿದಾ ಆಗಿದ್ದಾರೆ ಬ್ಯುಸಿನೆಸ್ ಮ್ಯಾನ್ ಲುಕ್ಕು, ಕೈಯಲ್ಲಿ ಪಿಸ್ತೂಲು, ಎಕೆ 47 ಹಿಡಿದ ಉಪೇಂದ್ರ ಗೆಟಪ್ ನೋಡುಗರಲ್ಲಿ ಕುತೂಹಲ ಮೂಡಿಸಿದೆ
Pingback: sexual repression in america