ಬಹುಭಾಷೆಗಳಲ್ಲಿ ಕಮಾಲ್ ಮಾಡಲು ಉಪ್ಪಿ-ಚಂದ್ರು ರೆಡಿ..!

ಪ್ಯಾನ್ ಇಂಡಿಯಾ ಮೂಲಕ ವಿಶ್ವದಾದ್ಯಂತ ಭಾರೀ ಸದ್ದನ್ನು ಮಾಡಲು ಹೊರಟಿದ್ದಾರೆ ನಿರ್ದೇಶಕ ಆರ್.ಚಂದ್ರು . ರಿಯಲ್ ಸ್ಟಾರ್ , ಸೂಪರ್ ಸ್ಟಾರ್ ​ ಉಪೇಂದ್ರ ನಾಯಕನಾಗಿ ನಟಿಸುತ್ತಿರೋ ಹೊಸ ಚಿತ್ರವೇ “ಕಬ್ಜ” ಬರೋಬ್ಬರಿ ಏಳು ಭಾಷೆಯ ಕನ್ನಡ , ತಮಿಳು, ತೆಲುಗು, ಹಿಂದಿ, ಮರಾಠಿ, ಬೆಂಗಾಲಿ, ಹಾಗೂ ಮಲಯಾಳಂ ಭಾಷೆಗಳಲ್ಲಿ ಸಿದ್ಧವಾಗಲಿರುವ ಕಬ್ಜ ಚಿತ್ರ ಅಂಡರ್ವಲ್ಡ್ ಕಥಾನಕವನ್ನು ಒಳಗೊಂಡಿದೆ.

ಅಂದು ಓಂ ಚಿತ್ರದ ಮೂಲಕ ನಿರ್ದೇಶಕ ಉಪೇಂದ್ರ ಅವರು ಶಿವಣ್ಣನ ಕೈಯಲ್ಲಿ ಲಾಂಗ್ ಹಿಡಿಸಿದ್ದರು , ಇಂದು ನಿರ್ದೇಶಕ ಆರ್. ಚಂದ್ರು ಕಬ್ಜ ಚಿತ್ರದ ಮೂಲಕ ಉಪೇಂದ್ರ ಕೈಯಲ್ಲಿ ಲಾಂಗ್ ಹಿಡಿಸಿದ್ದಾರೆ. ರೌಡಿಸಂ ಜೊತೆಗೆ ಲವ್ ಅಂಶವೂ ಒಳಗೊಂಡಿದ್ದು , ಕಬ್ಜ ಚಿತ್ರ ಸದ್ಯದಲ್ಲೇ ಸೆಟ್ಟೇರಲಿದೆ.

ಈ ಚಿತ್ರದ ಪೋಸ್ಟರ್ ಬಿಡುಗಡೆ ಸಮಾರಂಭ ಸ್ಟಾರ್ ಹೋಟೆಲ್ ಒಂದರಲ್ಲಿ ನಡೆದಿದ್ದು , ಈ ಚಿತ್ರದ ಟೈಟಲ್​ ಲಾಂಚ್​ ವೇಳೆ ರಾಜ್ ಕುಮಾರ್, ವಿಷ್ಣುವರ್ಧನ್, ರವಿಚಂದ್ರನ್, ದರ್ಶನ್, ಸುದೀಪ್, ಯಶ್, ಶಿವಣ್ಣ, ಪುನೀತ್ ಅಭಿಮಾನಿಗಳ ಸಂಘದ ಮುಖಂಡರು ಹಾಜರಿದ್ದು , ಒಬ್ಬೊಬ್ಬರು ಒಂದೊಂದು ಭಾಷೆಯ ಪೋಸ್ಟರ್ ಲಾಂಚ್ ಮಾಡಿದ್ದು ವಿಶೇಷವಾಗಿತ್ತು.

ಇದೇ ಸಂದರ್ಭದಲ್ಲಿ ನಿರ್ದೇಶಕ ಆರ್. ಚಂದ್ರು ಹಾಗೂ ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ ಐ ಲವ್ ​​​ಯ ಸಿನಿಮಾ ಶತದಿನೋತ್ಸವದ ಸಂಭ್ರಮವು ಅದ್ದೂರಿಯಾಗಿ ನೇರವೇರಿದ್ದು ‘ ಚಿತ್ರತಂಡದ ಹಾಗೂ ಗಣ್ಯರಿಗೆ ಫಲಕವನ್ನು ನೀಡಿ ಗೌರವಿಸಲಾಯಿತು ಹಾಗೂ ಈ ಕಾರ್ಯಕ್ರಮದಲ್ಲಿ ಲಹರಿ ಸಂಸ್ಥೆಯ ವೇಲು , ವಿತರಕರಾದ ಮೋಹನ್ ದಾಸ್ ಪೈ , ಮೋಹನ್ , ಕೆ.ವಿ. ನಾಗೇಶ್ ಕುಮಾರ್ ಸೇರಿದಂತೆ ಹಲವಾರು ಗಣ್ಯರು ಸಮಾರಂಭಕ್ಕೆ ಸಾಕ್ಷಿಯಾಗಿದ್ದರು .

ಇದೇ ವೇಳೆ ನಟ ಉಪೇಂದ್ರ ಅವರಿಗೆ ವಿಶೇಷವಾಗಿ ಸನ್ಮಾನಿಸಲಾಯಿತು. ಈಗಾಗಲೇ ನಿರ್ದೇಶಕ ಆರ್. ಚಂದ್ರು ಹಾಗೂ ರಿಯಲ್ ಸ್ಟಾರ್ ಉಪೇಂದ್ರ ಕಾಂಬಿನೇಷನ್ನಲ್ಲಿ ಬ್ರಹ್ಮ ಹಾಗೂ ಐ ಲವ್ ಯು ಚಿತ್ರಗಳು ಸೆಂಚುರಿಯನ್ನು ಬಾರಿಸಿ ಪ್ರೇಕ್ಷಕರ ಮನಸ್ಸನ್ನು ಗೆದ್ದಿದೆ. ಈಗ ಇವರಿಬ್ಬರ ಹ್ಯಾಟ್ರಿಕ್ ಬಾರಿಸಲು ಕಬ್ಜ ಚಿತ್ರದ ಮೂಲಕ ಅಣಿಯಾಗುತ್ತಿದ್ದಾರೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!