ಚಿತ್ರ: ಕಬಂಧ
ನಿರ್ದೇಶನ: ಸತ್ಯನಾಥ್
ತಾರಾಗಣ: ಪ್ರಸಾದ್ ವಸಿಷ್ಠ, ಪ್ರಿಯಾಂಕ, ಕಿಶೋರ್, ಅವಿನಾಶ್
ರೇಟಿಂಗ್: 3.5/5
ಈಗಾಗಲೇ ನಾವು ವಾಸಿಸುವ ಭೂಮಿ ಸಾಕಷ್ಟು ತೊಂದರೆ ಅನುಭವಿಸುತ್ತಿದೆ. ಇದರಿಂದ ಹಲವಾರು ರೀತಿಯ ಸಮಸ್ಯೆಗಳು ಉಂಟಾಗುತ್ತಿವೆ. ಮನುಷ್ಯ ಸಮೂಹದ ಆತಂಕವನ್ನು ತೋರಿಸುವ ಹಾರರ್ ಮಾದರಿಯ ಚಿತ್ರ ಈ ವಾರ ಬಿಡುಗಡೆ ಆಗಿರುವ ಕದಂಭ.
ಚಿತ್ರದಲ್ಲಿ ನಿರ್ದೇಶಕ ಸತ್ಯನಾಥ್ ಅವರು ನಾನ್ ಲೀನಿಯರ್ ವಿಧಾನವನ್ನು ಬಳಸಿಕೊಂಡು ಕಥೆ ಹೇಳುವ ಪ್ರಯತ್ನವನ್ನು ಮಾಡಿದ್ದಾರೆ. ಚಿತ್ರದ ಮೊದಲ ಅರ್ಧದಲ್ಲಿ ಪ್ರಶ್ನೆಗಳಿವೆ. ದ್ವಿತಿಯಾರ್ಧದಲ್ಲಿ ಪ್ರಶ್ನೆಗಳಿಗೆ ಉತ್ತರವನ್ನು ಕೊಡುವ ಪ್ರಯತ್ನವನ್ನು ನಿರ್ದೇಶಕರು ಮಾಡಿದ್ದಾರೆ. ಹಾರರ್ ಆಗಿ ಮನುಕುಲದ ಮುಂದಿನ ಸಮಸ್ಯೆ ಜೊತೆಗೆ ಸಂದೇಶವನ್ನು ನೀಡುವ ಯತ್ನವನ್ನು ಚಿತ್ರದಲ್ಲಿ ಮಾಡಲಾಗಿದೆ.
ನಾಯಕನಾಗಿ ಪ್ರಸಾದ್ ವಸಿಷ್ಠ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಕಿಶೋರ್, ಅವಿನಾಶ್ ಅವರು ಚಿತ್ರಕ್ಕೆ ತಮ್ಮ ಅಭಿನಯದ ಮೂಲಕ ತೂಕ ತಂದಿದ್ದಾರೆ.
ಪ್ರೇಕ್ಷಕರಿಂದ ತಾಳ್ಮೆಯನ್ನು ಬಯಸುವ ಈ ಚಿತ್ರ ಸಂದೇಶವನ್ನು ನೀಡುವ ಜೊತೆಗೆ ಚಿಂತನೆಯನ್ನು ಹುಟ್ಟು ಹಾಕುತ್ತದೆ.
___
Be the first to comment