‘ಕಾಣದಂತೆ ಮಾಯವಾದನು’ ಎನ್ನುವ ಚಿತ್ರದ ಹೆಸರು ಸಾರ್ಥಕ ಗೊಳಿಸುವ ಹಾಗೆ ನನ್ನ ಚಿತ್ರ ನೋಡಲು ಬರಬೇಕದಾದ ಪ್ರೇಕ್ಷಕರೇ ಕಾಣದಂತೆ ಮಾಯವಾಗಿದ್ದಾರೆ ಎಂದು ನಿರ್ದೇಶಕ ವಿಕಾಸ್ ನೋವಿನಿಂದ ನುಡಿದರು. ಬಹು ನಿರೀಕ್ಷೆಯ ಚಿತ್ರವನ್ನು ತೆರೆಗೆ ತಂದ ಬಳಿಕ ಪ್ರೇಕ್ಷಕರೇ ಇಲ್ಲದೆ ಹೋದ ನೋವನ್ನು ಅವರು ಮಾಧ್ಯಮಗಳ ಮುಂದೆ ಹೀಗೆ ಹಂಚಿಕೊಂಡರು.
ಜನವರಿ ಕೊನೆಯ ವಾರದಲ್ಲಿ ಬಿಡುಗಡೆಯಾದ ಚಿತ್ರಕ್ಕೆ ಮಾಧ್ಯಮಗಳಿಂದ ಉತ್ತಮವಾದ ವಿಮರ್ಶೆ ಪ್ರತಿಕ್ರಿಯೆಗಳು ಲಭ್ಯವಾಗಿತ್ತು. ಚಿತ್ರ ನೋಡಿದ ಪ್ರೇಕ್ಷಕರು ಕೂಡ ಮೆಚ್ಚುಗೆಯ ಮಾತನಾಡುತ್ತಿದ್ದರು. ಪರಭಾಷೆಯ ಮಂದಿ ಕೂಡಾ ಚಿತ್ರ ನೋಡಿ ತಮ್ಮ ಭಾಷೆಗಳಲ್ಲಿ ಇದರ ರಿಮೇಕ್ ಆಗಬೇಕೆಂದು ಬಯಸಿದ್ದರು. ವಿಪರ್ಯಾಸವೆಂದರೆ ಪ್ರೇಕ್ಷಕರ ಸಂಖ್ಯೆ ಹೆಚ್ಚಲೇ ಇಲ್ಲ. ಆ ಗಾಯಕ್ಕೆ ಉಪ್ಪು ಸವರುವಂತೆ ಬುಕ್ ಮೈ ಶೋ ವರ್ತನೆಯೂ ಇತ್ತು. ಈ ಚಿತ್ರವನ್ನು ತೆರೆಗೆ ತರುವಲ್ಲಿ ತಮ್ಮ ಮತ್ತು ತಂಡದ ಆರು ವರ್ಷಗಳ ಪ್ರಯತ್ನ ವಿತ್ತು. ಮಾಧ್ಯಮಗಳು ನೀಡಿದ ವಿಮರ್ಶೆಯಲ್ಲಿ ಸತ್ಯವಿತ್ತು. ಆದರೂ ಪ್ರೇಕ್ಷಕರು ಬಾರದಿರಲು ಕಾರಣವೇನೆಂದು ಈಗಲೂ ನನಗೆ ಗೊತ್ತಾಗಿಲ್ಲ. ಆದರೆ ನಾನು ಈ ಚಿತ್ರವನ್ನು ಕೈ ಬಿಡಲು ತಯಾರಿಲ್ಲ.
ಈ ವಾರದಿಂದ ಮತ್ತೆ ಸಣ್ಣದೊಂದು ಬದಲಾವಣೆಯ ಮೂಲಕ ತೆರೆಗೆ ತರಲಿದ್ದೇನೆ. ಚಿತ್ರೋದ್ಯಮದಿಂದ ಈ ಸಿನಿಮಾಗೆ ಯಾವುದೇ ಬೆಂಬಲ ಸಿಕ್ಕಿಲ್ಲ. ಇನ್ನಾದರೂ ಪ್ರೇಕ್ಷಕರು ಕೈ ಹಿಡಿಯುತ್ತಾರೆಂದು ನಿರೀಕ್ಷಿಸುತ್ತೇನೆ ಎಂದು ನಿರ್ದೇಶಕ ವಿಕಾಸ್ ಹೇಳಿದರು.
Be the first to comment