ರೊಮ್ಯಾಂಟಿಕ್ ಕಾಮಿಡಿ, ಆಕ್ಷನ್, ಎಂಟರ್ ಟೈನರ್ ಕಥಾಹಂದರ ಒಳಗೊಂಡ ‘ಕಾಲವೇ ಮೋಸಗಾರ’ ಚಿತ್ರಕ್ಕೆ ಜೂ. 20ಕ್ಕೆ ರಾಜ್ಯಾದ್ಯಂತ ತೆರೆ ಕಾಣಲಿದೆ.
ಈ ಚಿತ್ರಕ್ಕೆ ಸಂಜಯ್ ಎಸ್. ಪುರಾಣಿಕ್ ಅವರು ಕಥೆ, ಚಿತ್ರಕಥೆ ಬರೆದು ಆಕ್ಷನ್ ಕಟ್ ಹೇಳಿದ್ದಾರೆ. ಚಿತ್ರದಲ್ಲಿ ಭರತ್ ಸಾಗರ್ ನಾಯಕ, ಯಶಸ್ವಿನಿ ರವೀಂದ್ರ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ವಸ್ಪಂದನ ಪ್ರೊಡಕ್ಷನ್ಸ್ ಪ್ರೈ.ಲಿ. ಅಡಿಯಲ್ಲಿ ರಜತ್ ದುರ್ಗೋಜಿ ಸಾಳುಂಕೆ ಅವರ ನಿರ್ಮಾಣದಲ್ಲಿ ಅದ್ದೂರಿಯಾಗಿ ಚಿತ್ರ ತಯಾರಾಗಿದೆ.
ಚಿತ್ರದ ಹಾಡುಗಳಿಗೆ ಕೆ.ಲೋಕೇಶ್ ಅವರು ಸಂಗೀತ ಸಂಯೋಜನೆ ಮಾಡಿದ್ದಾರೆ. ಡಾ.ನಾಗೇಂದ್ರಪ್ರಸಾದ್, ಸಂಜಯ್ ಅವರ ಸಾಹಿತ್ಯವಿದೆ. ಗಾಯಕರಾದ ಆಂಟೊನಿದಾಸ್, ಸಂಚಿತ್ ಹೆಗ್ಡೆ ಅವರು ದನಿಯಾಗಿದ್ದಾರೆ. ಕ್ರಾಂತಿ ಕುಮಾರ್ ಅವರ ಛಾಯಾಗ್ರಹಣ ಈ ಚಿತ್ರಕ್ಕಿದೆ. ಕಾಲವೇ ಮೋಸಗಾರ ಚಿತ್ರದ ಉಳಿದ ತಾರಾಗಣದಲ್ಲಿ ಶಂಕರ್ ಮೂರ್ತಿ, ದರ್ಶನ್ ವರ್ಣೇಕರ್, ಕುರಿ ಪ್ರತಾಪ್, ವಿಜಯ್ ಚೆಂಡೂರ್, ಬ್ಯಾಂಕ್ ಜನಾರ್ಧನ್ ನಟಿಸಿದ್ದಾರೆ.
ಈಗಾಗಲೇ ಕಾಲವೇ ಮೋಸಗಾರ ಚಿತ್ರ ತನ್ನ ಟೀಸರ್, ಹಾಡುಗಳ ಮೂಲಕ ಸಿನಿರಸಿಕರ ಮನ ಗೆದ್ದಿದೆ. ಚಿತ್ರ ತನ್ನ ವಿಶಿಷ್ಠ ಶೀರ್ಷಿಕೆಯ ಮೂಲಕ ಪ್ರೇಕ್ಷಕರನ್ನು ಆಕರ್ಷಿಸುತ್ತಿವೆ.
—-

Be the first to comment