ಹರ್ಷಿಕಾ ಪೂಣಚ್ಚ ಅಭಿನಯದ ‘ಕಾಲನಾಗಿಣಿ’ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ನ್ನು ಅಶ್ವಿನಿ ಪುನೀತ್ ರಾಜ್‌ಕುಮಾರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದ್ದಾರೆ.
ಕಾಲನಾಗಿಣಿ ಚಿತ್ರದ ಫಸ್ಟ್ ಲುಕ್ ಪೋಸ್ಟರ್‌ನಲ್ಲಿ ಹರ್ಷಿಕಾ ಹಾವಿನ ಆಕಾರದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರವು ಎಮೋಷನ್ಸ್, ಆ್ಯಕ್ಷನ್ ಮತ್ತು ಸಸ್ಪೆನ್ಸ್‌ನ ಮಿಶ್ರಣವಾಗಿದ್ದು, ಜೂನ್‌ನಲ್ಲಿ ಬಿಡುಗಡೆಯಾಗಲಿದೆ.
‘ಕಾಲನಾಗಿಣಿ’ ಚಿತ್ರದ ಚಿತ್ರೀಕರಣ ಮುಕ್ತಾಯಗೊಂಡಿದ್ದು, ಬಿಡುಗಡೆಗೆ ಸಿದ್ಧವಾಗಿದೆ. ಫ್ಯಾಂಟಸಿ ಡ್ರಾಮಾ ಕಾಲನಾಗಿಣಿ ಚಿತ್ರವನ್ನು ವಿಶ್ರುತ್ ನಾಯಕ್ ನಿರ್ದೇಶಿಸಿದ್ದಾರೆ. ಮಧುರಾ ಮೂವೀಸ್ ಬ್ಯಾನರ್ ಅಡಿಯಲ್ಲಿ ರಕ್ಷಿತಾ ಗೌಡ ನಿರ್ಮಿಸಿದ್ದಾರೆ. ಮಧು ಮರಿಸ್ವಾಮಿ ಯೋಜನಾ ಮುಖ್ಯಸ್ಥರಾಗಿದ್ದಾರೆ.
ಚಿತ್ರದಲ್ಲಿ ಹರ್ಷಿಕಾ ಪೂಣಚ್ಚ ಜೊತೆಗೆ ಅರ್ಜುನ್ ವೇದಾಂತ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಪೋಷಕ ಪಾತ್ರವರ್ಗದಲ್ಲಿ ಅವಿನಾಶ್, ಶರತ್ ಲೋಹಿತಾಶ್ವ, ಉಗ್ರಂ ಮಂಜು, ವಿಜಯ್ ಚೆಂಡೂರ್ ಇದ್ದಾರೆ.
‘ಕಾಲನಾಗಿಣಿ’ ಚಿತ್ರಕ್ಕೆ ಅರುಣ್ ಸುರೇಶ್ ಅವರ ಛಾಯಾಗ್ರಹಣ, ಸತೀಶ್ ಬಾಬು ಅವರ ಸಂಗೀತ ಸಂಯೋಜನೆ ಇದೆ. ಎಂಎನ್ ವಿಶ್ವ ಅವರು ಸಂಕಲನ, ನರಸಿಂಹ ಸಾಹಸ ನೃತ್ಯ ಸಂಯೋಜನೆ, ಧನಕುಮಾರ್ ನೃತ್ಯ ಸಂಯೋಜನೆ ಮತ್ತು ಲಕ್ಷವೇದ್ ಸಂಗಮೇಶ್ ವಿಎಫ್‌ಎಕ್ಸ್ ಇದೆ.
—-

Be the first to comment