ಸಾಕಷ್ಟು ಭರವಸೆ ಹುಟ್ಟಿಸುವ ಕಿರುಚಿತ್ರಗಳು ಕನ್ನಡದಲ್ಲಿ ಬರುತ್ತಿದೆ. ಆ ಸಾಲಿಗೆ ಸೇರಿರುವ ಮತ್ತೊಂದು ಟೆಲಿಚಿತ್ರ ‘ಕೆ 3’32 ನಿಮಿಷಗಳ ಈ ಟೆಲಿಚಿತ್ರವನ್ನು ಶ್ರೀಸಾಯಿ ವೆಂಕಟೇಶ್ವರ ಟಾಕೀಸ್ ಲಾಂಛನದಲ್ಲಿ ಶಿಲ್ಪ ಶ್ರೀನಾಥ್ ಅವರು ನಿರ್ಮಿಸಿದ್ದಾರೆ.
ಡ್ರಗ್ಸ್(ಔಷಧಿ) ಸಮಸ್ಯೆ ಸುತ್ತಲ್ಲಿನ ಕಥಾ ಹಂದರ ಹೊಂದಿರುವ ಈ ಕಿರುಚಿತ್ರವನ್ನು ಸಂಜಯ್ ಕೆ ನಿರ್ದೇಶಿಸಿದ್ದಾರೆ. ಆರ್.ಚಂದ್ರು ಅವರ ನಿರ್ದೇಶನ ತಂಡದಲ್ಲಿದ್ದ ಸಂಜಯ್ ಮೊದಲ ಪ್ರಯತ್ನವಾಗಿ ಈ ಟೆಲಿಚಿತ್ರವನ್ನು ನಿರ್ದೇಶಿಸಿದ್ದಾರೆ.
ನನಗೆ ಹಿರಿತೆರೆ ಚಿತ್ರಗಳನ್ನು ನಿರ್ದೇಶಿಸುವ ಆಸೆ ಇದೆ. ಆದರೆ ನಿರ್ಮಾಪಕರಿಗೆ ನಮ್ಮ ನಿರ್ದೇಶನದ ಸಾಮರ್ಥ್ಯ ತಿಳಿದಿರುವುದಿಲ್ಲ. ಮೊದಲ ಹೆಜ್ಜೆಯಾಗಿ ಉತ್ತಮ ಗುಣಮಟ್ಟವಿರುವ ಈ ಟೆಲಿಚಿತ್ರವನ್ನು ನಾನು ನಿರ್ದೇಶಿಸಿದ್ದು, ಸಾಕಷ್ಟು ನಿರ್ಮಾಪಕರಿಗೆ ಈ ಟೆಲಿಚಿತ್ರವನ್ನು ತೋರಿಸಿ, ಹಿರಿತೆರೆ ಚಿತ್ರಗಳ ನಿರ್ದೇಶನದ ಅವಕಾಶ ಕೇಳಬಹುದು. ನಿರ್ಮಾಪಕರಿಗೂ ಇದರ ವೀಕ್ಷಣೆಯ ನಂತರ ನಿರ್ದೇಶಕನ ಸಾಮರ್ಥ್ಯ ತಿಳಿದಿರುತ್ತದೆ ಎನ್ನುವುದು ಸಂಜಯ್ ಅವರ ಅಭಿಪ್ರಾಯ.
ತಾಂತ್ರಿಕತೆಯಲ್ಲಿ ಹಿರಿತೆರೆಯ ಯಾವುದೇ ಚಿತ್ರಕ್ಕೂ ಕಡಿಮೆಯಿಲ್ಲದಂತೆ ‘ಕೆ 3’ ಟೆಲಿಚಿತ್ರ ಮೂಡಿಬಂದಿದೆ. ನಿರ್ದೇಶಕ ಹಾಗೂ ಗೀತರಚನೆಕಾರ ಚೇತನ್ ಕುಮಾರ್ ಹಾಗೂ ಹಲವು ನಿರ್ಮಾಪಕರು ಈ ಟೆಲಿಚಿತ್ರವನ್ನು ವೀಕ್ಷಿಸಿ ಮೆಚ್ಚುಗೆ ಸೂಚಿಸಿದ್ದಾರೆ. ಈ ಬಾರಿ ಸೈ ಗೂ ಈ ಟೆಲಿಚಿತ್ರ ಆಯ್ಕೆಯಾಗಿದೆ. ಯೂಟ್ಯೂಬ್‌ನಲ್ಲೂ K 3 ಯ ಟೀಸರ್ ಸದ್ದು ಮಾಡುತ್ತಿದೆ.
ರಿತ್ವಿಕ್ ಮುರಳಿಧರ್ ಸಂಗೀತ ನಿರ್ದೇಶನ, ಸಂತೋಷ್ ವಿಜಯ್‌ಕುಮಾರ್ ಛಾಯಾಗ್ರಹಣ ಹಾಗೂ ಮಹೇಶ್ ತೊಗಟ ಅವರ ಸಂಕಲನವಿರುವ ಈ ಟೆಲಿಚಿತ್ರದ ತಾರಾಬಳಗದಲ್ಲಿ ಯುಗ ಚಂದ್ರು, ಶ್ರೀನಾಥ್ ಗೌಡ, ಲೋಕೇಶ್ ಗೌಡ, ಪಿ.ಕೆ, ಸುವಿನ್ ಮುಂತಾದವರಿದ್ದಾರೆ.
Pingback: https://livedarknet.com