ಬಿಗ್ ಬಾಸ್ ಮನೆಗೆ ಮೋಹಕ ನಟಿ?

ಮೋಹಕ ನಟಿ ಜ್ಯೋತಿ ರೈ ಬಿಗ್‌ ಬಾಸ್‌ ಹೊಸ ಸೀಸನ್‌ ಹೋಗಲಿದ್ದಾರೆ ಎಂದು ಹೇಳಲಾಗುತ್ತಿದೆ.

ಜ್ಯೋತಿ ರೈ ಬಿಗ್‌ ಬಾಸ್‌ಗೆ ಬರುತ್ತಾರೆಂಬ ಊಹಾಪೋಹಗಳು ಕಳೆದ ಸೀಸನ್‌ ಸಮಯದಲ್ಲೂ ಕೇಳಿ ಬಂದಿತ್ತು. ಆದರೆ ಜ್ಯೋತಿ ರೈ ಬಿಗ್‌ ಬಾಸ್‌ಗೆ ಬರಲಿಲ್ಲ. ಈ ಬಾರಿಯೂ ಮತ್ತೆ ಜ್ಯೋತಿ ರೈ ಹೆಸರು ಮುನ್ನೆಲೆಯಲ್ಲಿದೆ. ಆದರೆ ಇದನ್ನು ವಾಹಿನಿ ಆಗಲಿ, ಜ್ಯೋತಿ ರೈ ಅವರಾಗಲಿ ಖಾತರಿ ಪಡಿಸಿಲ್ಲ.

ಜ್ಯೋತಿ ರೈ ಅವರ ಜೊತೆ ಸಾಯಿಕಿರಣ್, ಯೂಟ್ಯೂಬರ್ ಶ್ರಾವಣಿ ವರ್ಮ, ಆರ್‌ಜೆ ರಾಜ್, ತೇಜಸ್ವಿನಿ, ಕಲ್ಪಿಕಾ ಗಣೇಶ್, ಕಾವ್ಯ, ಟಿವಿ ಕಲಾವಿದೆ ನವ್ಯ ಸ್ವಾಮಿ, ಟಾಲಿವುಡ್ ನಟ ಛತ್ರಪತಿ ಶೇಖರ್, ಕಿರುತೆರೆ ನಟ ಮುಖೇಶ್ ಗೌಡ  ಮುಂತಾದವರು ಬಿಗ್ ಬಾಸ್ ತೆಲುಗು ಸೀಸನ್ 9 ರ ಸ್ಪರ್ಧಿಗಳಾಗಿ ಆಯ್ಕೆಯಾಗಿದ್ದಾರೆ ಎಂದು ಹೇಳಲಾಗುತ್ತಿದೆ.

ಬಿಗ್ ಬಾಸ್ ತೆಲುಗು ಸೀಸನ್ 9 ಆಗಸ್ಟ್ ಕೊನೆಯ ವಾರದಲ್ಲಿ ಪ್ರಾರಂಭವಾಗುವ ನಿರೀಕ್ಷೆಯಿದೆ.  ನಟ ಅಕ್ಕಿನೇನಿ ನಾಗಾರ್ಜುನ ಈ ಬಾರಿಯೂ ನಿರೂಪಣೆ ಮಾಡಲಿದ್ದಾರೆ. ಬಿಗ್‌ ಬಾಸ್‌ ಹೊಸ ಸೀಸನ್‌ ಸೆಟ್‌ಗಳು ಪೂರ್ಣಗೊಂಡ ನಂತರ ಅಧಿಕೃತವಾಗಿ ಬಿಗ್ ಬಾಸ್ 9 ಲಾಂಚ್ ದಿನಾಂಕವನ್ನು ಘೋಷಿಸುವ ಸಾಧ್ಯತೆಯಿದೆ.

ಹಿಂದಿನ ಸೀಸನ್‌ಗಳಂತೆ ಈ ಬಾರಿಯೂ ವಿಭಿನ್ನ ಕಲ್ಪನೆ ಮತ್ತು ವಿಶೇಷವಾದ ಸೆಟ್‌ ಇರಲಿದೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!