ಸ್ಯಾಂಡಲ್‌ವುಡ್ ನಟಿ ಜ್ಯೋತಿ ರೈ ತಮ್ಮ ಹೊಸ ಸಿನಿಮಾ ‘ಕಿಲ್ಲರ್’ ಪೋಸ್ಟರ್ ನ್ನು ಹಂಚಿಕೊಂಡಿದ್ದಾರೆ.
ಕನ್ನಡದ ಕಿರುತೆರೆಯಲ್ಲಿ ಜನಪ್ರಿಯರಾಗಿ ಬಳಿಕ ತೆಲುಗು ಭಾಷೆಯಲ್ಲೂ ಮಿಂಚಿದ್ದ ನಟಿ ಜ್ಯೋತಿ ರೈ ಕೈಯಲ್ಲಿ ಕೊಡಲಿ ಹಿಡಿದು ನೀಡಿರುವ ರಗಡ್ ಲುಕ್ ನ್ನು ಫ್ಯಾನ್ಸ್ ಮೆಚ್ಚಿದ್ದಾರೆ.
ಕಿಲ್ಲರ್‌ನ ಮೊದಲ ಶೆಡ್ಯುಲ್ ಯಶಸ್ವಿಯಾಗಿ ಕಂಪ್ಲೀಟ್ ಆಗಿದೆ. ಇಡೀ ಟೀಮ್‌ನಲ್ಲಿ ಸಖತ್ ಶಕ್ತಿ ತುಂಬಿದೆ. ಈ ಸಿನಿಮಾದ ಎಕ್ಸ್ಪೀರಿಯನ್ಸ್ ಶೀಘ್ರದಲ್ಲೇ ನಿಮಗೆ ತಿಳಿಯಲಿದೆ. ಅದಕ್ಕಾಗಿ ಸರಿಯಾದ ಸಮಯ ಬರಬೇಕಷ್ಟೇ. ಅದ್ಭುತ ಕ್ರಿಯೇಟಿವ್ ವರ್ಕ್ ನಡೆಯುತ್ತಿದೆ ಎಂದು ಜ್ಯೋತಿ ರೈ ಬರೆದುಕೊಂಡಿದ್ದಾರೆ.
‘ಕಿಲ್ಲರ್’ ಚಿತ್ರಕ್ಕೆ ಜ್ಯೋತಿ ರೈ ಪತಿ ಸುಕು ಪೂರ್ವಜ್ ನಿರ್ದೇಶನ ಮಾಡಿದ್ದಾರೆ. ನಿರ್ದೇಶನದ ಜೊತೆ ಒಂದು ಪ್ರಮುಖ ಪಾತ್ರದಲ್ಲಿ ಕೂಡಾ ನಟಿಸುತ್ತಿದ್ದಾರೆ. ಪದ್ಮನಾಭರೆಡ್ಡಿ ಜೊತೆ ಸೇರಿ ಪೂರ್ವಜ್ ಕಿಲ್ಲರ್ ಸಿನಿಮಾವನ್ನು ನಿರ್ಮಾಣ ಕೂಡಾ ಮಾಡುತ್ತಿದ್ದಾರೆ.
ಕನ್ನಡದಲ್ಲಿ ಜೋಗುಳ, ಜೋಕಾಲಿ, ಕಿನ್ನರಿ ಸೀರಿಯಲ್ ಮೂಲಕ ಮನೆ ಮಾತಾಗಿದ್ದ ಜ್ಯೋತಿ ರೈ ತೆಲುಗಿನ ಟಿವಿ ಸೀರಿಯಲ್ ಗಳಲ್ಲಿ ಜನಪ್ರಿಯತೆ ಪಡೆದಿದ್ದಾರೆ. ಜ್ಯೋತಿ ರೈ ಮಾಡಲಿಂಗ್ ಕ್ಷೇತ್ರದಲ್ಲಿ ಮಿಂಚುತ್ತಿದ್ದಾರೆ.
ಜ್ಯೋತಿ ರೈ ತಮ್ಮ 20ನೇ ವಯಸ್ಸಿಗೆ ಪದ್ಮನಾಭ್ ಎಂಬುವವರನ್ನು ಮದುವೆಯಾಗಿದ್ದರು. ಕಾರಣಾಂತರಗಳಿಂದ ಈ ಜೋಡಿ ಬೇರೆಯಾಗಿದೆ. ಈ ದಂಪತಿಗೆ 10 ವರ್ಷದ ಮಗನೂ ಇದ್ದಾನೆ. ವಿಚ್ಛೇದನದ ಬಳಿಕ ಸಿನಿಮಾ, ಸೀರಿಯಲ್ಗಳಲ್ಲಿ ಅವಕಾಶ ಗಿಟ್ಟಿಸಿಕೊಂಡ ಜ್ಯೋತಿ ರೈ ಬೋಲ್ಡ್ ಫೋಟೋಶೂಟ್ ಮೂಲಕ ಮಿಂಚುತ್ತಿದ್ದಾರೆ.






Be the first to comment