ನಿರ್ದೇಶನ: ಕೆಎಂ ರಘು
ನಿರ್ಮಾಣ: ಕೆ ವಿ ಶಶಿಧರ್
ತಾರಾಗಣ: ಶ್ರೀ, ಪ್ರಣತಿ, ರಂಗಾಯಣ ರಘು, ಸುಚೇಂದ್ರ ಪ್ರಸಾದ್ ಇತರರು
ರೇಟಿಂಗ್: 3.5/5
ಈ ವಾರ ತೆರೆಗೆ ಬಂದಿರುವ ಜಸ್ಟ್ ಪಾಸ್ ವಿದ್ಯಾರ್ಥಿಗಳಿಗಾಗಿ ತೆರೆದ ಕಾಲೇಜಿನ ಕಥೆಯ ‘ಜಸ್ಟ್ ಪಾಸ್’ ಸಿನಿಮಾ ಕಮರ್ಷಿಯಲ್ ಸಿನಿಮಾದ ಸಿದ್ಧ ಸೂತ್ರದ ಹಾದಿ ಹಿಡಿದಿರುವ ಕಾರಣ ಪ್ರೇಕ್ಷಕರ ಮನಸ್ಸಿನಲ್ಲಿ ಜಸ್ಟ್ ಪಾಸ್ ಆಗಿ ಹೊರಟು ಹೋಗುತ್ತದೆ.
ನಿವೃತ ಪ್ರಾಧ್ಯಾಪಕ ಆದ ರಂಗಾಯಣ ರಘು ಜಸ್ಟ್ ಪಾಸ್ ಆದ ವಿದ್ಯಾರ್ಥಿಗಳಿಗಾಗಿ ತೆರೆಯುವ ಡಿಗ್ರಿ ಕಾಲೇಜಿನ ಕಥೆಯೊಂದಿಗೆ ಚಿತ್ರ ಆರಂಭವಾಗುತ್ತದೆ. ಈ ಕಥೆ ಆರಂಭದಲ್ಲಿ ಕುತೂಹಲ ಉಂಟು ಮಾಡಿದರೂ ಚಿತ್ರಕಥೆ ಪ್ರೇಕ್ಷಕರನ್ನು ಹಿಡಿದಿಡುವಲ್ಲಿ ಸಿನಿಮಾ ಪ್ರೇಕ್ಷಕರಿಗೆ ಬೋರ್ ಅನಿಸುವದಿಲ್ಲ. ದ್ವಿತಿಯಾರ್ಧದಲ್ಲಾದರೂ ಸಿನಿಮಾ ಪ್ರೇಕ್ಷಕರಿಗೆ ಹೊಸ ಅನುಭವ ನೀಡುತ್ತದೆ. ಇದು ಎಲ್ಲರ ಲೈಫಿನಲ್ಲಿ ಆಗಿರುವ ಕತೆ. ಹೀಗಾಗಿ ಎಲ್ಲರಿಗೂ ಸಿನಿಮಾ ಕನೆಕ್ಟ್ ಆಗುತ್ತದೆ.
ಕಾಲೇಜು ವಿದ್ಯಾರ್ಥಿಗಳ ತಮಾಷೆ, ತರಲೆ ಪ್ರಸಂಗಗಳು ಮನಸ್ಸಿಗೆ ತಾಗುವುದಿಲ್ಲ. ಕಾರಣವಿಲ್ಲದೆ ಫೈಟ್ ನಡೆಯುತ್ತದೆ. ಅನಗತ್ಯವಾಗಿ ಪೋಲಿ ಜೋಕ್ಸ್ ತುರುಕಲಾಗಿದೆ. ಒಟ್ಟಾರೆ ಸಿನಿಮಾ ಶೀರ್ಷಿಕೆಯಂತೆ ಜಸ್ಟ್ ಪಾಸ್ ಆಗುತ್ತದೆ.
ಸಂದೇಶಗಳನ್ನು ಹೇಳುವ ಉದ್ದೇಶದಿಂದ ನಿರ್ದೇಶಕರು ಹೇಳಿದ ಕಥೆ ಜಾಳಾಗಿದೆ. ಕಥೆ ನಿರೀಕ್ಷಿತ ಮಟ್ಟದಲ್ಲಿ ಇಲ್ಲದೆ ಇರುವ ಕಾರಣ ಕಲಾವಿದರಿಗೆ ನಟನೆಗೆ ಹೆಚ್ಚಿನ ಅವಕಾಶ ಇಲ್ಲ. ಈ ನಡುವೆಯೂ ಪ್ರಾಧ್ಯಾಪಕನ ಪಾತ್ರದಲ್ಲಿ ರಂಗಾಯಣ ರಘು ಮಿಂಚಿದ್ದಾರೆ. ಆದರೆ ಕಾಮಿಡಿ ಕಿಂಗ್ ಸಾಧುಕೋಕಿಲ ಪಾತ್ರ ನಗುತರಿಸುವಲ್ಲಿ ವಿಫಲ ಆಗಿದೆ. ಸಂಭಾಷಣೆಗಳಲ್ಲಿ ಚುರುಕುತನ ಇಲ್ಲದಿರುವುದೇ ಇದಕ್ಕೆ ಕಾರಣವಾಗಿದೆ.
ಸಿನಿಮಾದ ಕಥೆಯ ಜೊತೆ ಸಾಹಿತ್ಯ, ಸಂಗೀತ, ಛಾಯಾಗ್ರಹಣ ಅಷ್ಟಕಷ್ಟೇ ಅನಿಸುತ್ತದೆ.
___
Be the first to comment