ಕಾಂತಾರ ಚಾಪ್ಟರ್ 2 ರಲ್ಲಿ ರಿಷಬ್ ಶೆಟ್ಟಿ ಜೊತೆಗೆ ಟಾಲಿವುಡ್ ಸ್ಟಾರ್ ಜ್ಯೂ.ಎನ್ ಟಿಆರ್ ನಟಿಸಲಿದ್ದಾರೆ ಎಂಬ ಸುದ್ದಿ ಕೇಳಿ ಬರುತ್ತಿದೆ.
ಜ್ಯೂ. ಎನ್ ಟಿಆರ್ ತಾಯಿಯ ಊರು, ರಿಷಬ್ ಶೆಟ್ಟಿ ತವರು ಕುಂದಾಪುರ. ಇಬ್ಬರೂ ಸ್ಟಾರ್ ಗಳೂ ಆತ್ಮೀಯವಾಗಿಯೇ ಕುಶಲೋಪರಿ ನಡೆಸುತ್ತಾರೆ. ಅದೇ ಸ್ನೇಹದಿಂದ ಜ್ಯೂ. ಎನ್ ಟಿಆರ್ ಕಾಂತಾರ ಸಿನಿಮಾದ ಭಾಗವಾಗುತ್ತಿದ್ದಾರೆ ಎಂಬ ಸುದ್ದಿಯಿದೆ.
ಈ ಮೊದಲು ಕಾಂತಾರ ಸಿನಿಮಾವನ್ನು ವೀಕ್ಷಿಸಿ ಜ್ಯೂ ಎನ್ ಟಿಆರ್ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಇದೀಗ ಎರಡನೇ ಸಿನಿಮಾದಲ್ಲಿ ಅವರೇ ಪಾತ್ರ ಮಾಡುವ ಸುದ್ದಿ ಬಂದಿದೆ. ಈ ಬಗ್ಗೆ ಸದ್ಯದಲ್ಲೇ ಅಧಿಕೃತ ಪ್ರಕಟಣೆ ಹೊರ ಬೀಳುವ ಸಾಧ್ಯತೆಯಿದೆ.
https://www.facebook.com/share/p/QYa2b7KX1ZJRzWn8/?mibextid=oFDknk
ಇತ್ತೀಚೆಗೆ ಪ್ರಶಾಂತ್ ನೀಲ್ ಮನೆಯ ಪಾರ್ಟಿಯಲ್ಲಿ ರಿಷಬ್ ಶೆಟ್ಟಿ ಜೊತೆಗೆ ಜ್ಯೂ. ಎನ್ ಟಿಆರ್ ಕಾಣಿಸಿಕೊಂಡಿದ್ದರು. ಇಬ್ಬರೂ ಜೊತೆಯಾಗಿ ಫೋಟೋಗೆ ಪೋಸ್ ನೀಡಿದ್ದು ನೋಡಿ ಅಭಿಮಾನಿಗಳು ಜ್ಯೂ. ಎನ್ ಟಿಆರ್ ಮುಂದಿನ ಸಿನಿಮಾದಲ್ಲಿ ರಿಷಬ್ ಇರಲಿದ್ದಾರಾ ಎಂದು ಅನುಮಾನಿಸಿದ್ದರು.
ಕಾಂತಾರ 2 ರ ಮುಹೂರ್ತ ಈಗಾಗಲೇ ನಡೆದಿದ್ದು, ನಿರ್ದೇಶಕ ರಿಷಬ್ ಶೆಟ್ಟಿ ಅವರು ಪ್ರಿ ಶೂಟಿಂಗ್ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ.
—-

Be the first to comment