ಕಿರೀಟಿ

ಡಿಎಸ್‌ಪಿ ಮ್ಯೂಸಿಕ್‌ಗೆ ಕುಣಿದು ಕುಪ್ಪಳಿಸಿದ ಕಿರೀಟಿ-ಶ್ರೀಲೀಲಾ

ಕಿರೀಟಿ ಚಿತ್ರರಂಗದಲ್ಲಿ ಛಾಪೂ ಮೂಡಿಸಲು ಸಜ್ಜಾಗಿದ್ದು, ಚೊಚ್ಚಲ ಚಿತ್ರ ಜೂನಿಯರ್‌ ಟೀಸರ್‌ ಈಗಾಗಲೇ ಭಾರೀ ಸದ್ದು ಮಾಡಿದೆ. ಇದೀಗ ಜೂನಿಯರ್‌ ಸಿನಿಮಾದ ಎರಡನೇ ಹಾಡು ಇಂದು ಅನಾವರಣಗೊಂಡಿದೆ. ಆದಿತ್ಯ ಮ್ಯೂಸಿಕ್‌ ಕನ್ನಡದಲ್ಲಿ ವೈರಲ್‌ ವಯ್ಯರಿ ಎಂಬ ಡ್ಯಾನ್ಸಿಂಗ್‌ ನಂಬರ್‌ ಅನಾವರಣಗೊಂಡಿದೆ.

ವೈರಲ್‌ ವಯ್ಯರಿ ಹಾಡಿಗೆ ಪವನ್‌ ಭಟ್‌ ಸಾಹಿತ್ಯ ಬರೆದಿದ್ದು, ಹರಿಪ್ರಿಯಾ ಮತ್ತು ದೀಪಕ್‌ ಬ್ಲೂ ಧ್ವನಿಯಾಗಿದ್ದಾರೆ. ದೇವಿಶ್ರೀ ಪ್ರಸಾದ್‌ ಮ್ಯೂಸಿಕ್‌ ಕಿಕ್‌ಗೆ ಕಿರೀಟಿ ಶ್ರೀಲೀಲಾ ಬೊಂಬಾಟ್‌ ಆಗಿ ಕುಣಿದಿದ್ದಾರೆ. ಇವರಿಬ್ಬರ ಎನರ್ಜಿ ಹೈಲೆವೆಲ್‌ನಲ್ಲಿದೆ.

ಕಿರೀಟಿ

ಈ ಬಹುನಿರೀಕ್ಷಿತ ಜೂನಿಯರ್‌ ಸಿನಿಮಾದಲ್ಲಿ ಕಿರೀಟಿ ಜೊತೆಗೆ ಕ್ರೇಜಿಸ್ಟಾರ್ ರವಿಚಂದ್ರನ್, ಜೆನಿಲಿಯಾ ಡಿಸೋಜಾ, ಶ್ರೀಲೀಲಾ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಪುನೀತ್ ರಾಜ್‌ಕುಮಾರ್ ನಿರ್ಮಿಸಿದ್ದ ‘ಮಾಯಾಬಜಾರ್’ ಸಿನಿಮಾದ ನಿರ್ದೇಶಕ ರಾಧಾಕೃಷ್ಣ ರೆಡ್ಡಿ ಈ ಸಿನಿಮಾಗೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಬಾಹುಬಲಿ, ಆರ್‌ಆರ್‌ಆರ್ ಅಂತಹ ಬ್ಲಾಕ್ಬಸ್ಟರ್ ಸಿನಿಮಾಗಳಿಗೆ ಕ್ಯಾಮರಾ ವರ್ಕ್ ಮಾಡಿರುವ ಕೆ.ಕೆ.ಸೆಂಥಿಲ್ ಕುಮಾರ್ ಅವರ ಕ್ಯಾಮರಾ ಕೈಚಳಕ ಈ ಚಿತ್ರದಲ್ಲಿದೆ.

ಸಿನಿಮಾಗೆ ಖ್ಯಾತ ಆ್ಯಕ್ಷನ್ ಕೊರಿಯೋಗ್ರಾಫರ್ ಪೀಟರ್ ಹೆನ್ಸ್ ಸಾಹಸ ಸಂಯೋಜಿಸಿದ್ದಾರೆ. ದಕ್ಷಿಣ ಚಿತ್ರರಂಗದ ರಾಕ್‌ ಸ್ಟಾರ್‌ ದೇವಿಶ್ರೀ ಪ್ರಸಾದ್‌ ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡಿದ್ದಾರೆ. ಸಿನಿಮಾ ಪ್ರಾರಂಭವಾದಾಗ ನಿರ್ದೇಶಕ ರಾಜಮೌಳಿ ಮುಹೂರ್ತಕ್ಕೆ ಆಗಮಿಸಿ ಶುಭಾಶಯ ತಿಳಿಸಿದ್ದರು. ಜುಲೈ 18ಕ್ಕೆ ಜೂನಿಯರ್‌ ಸಿನಿಮಾ ಕನ್ನಡ, ತೆಲುಗು, ತಮಿಳು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!