ಜೂನಿಯರ್ ಗಣೇಶ್ ಚಿತ್ರರಂಗಕ್ಕೆ ಎಂಟ್ರಿ

ಗೋಲ್ಡನ್ ಸ್ಟಾರ್ ಗಣೇಶ್ ಅವರ ಮಗ ವಿಹಾನ್ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದು, ಚಿತ್ರದ ಪೋಸ್ಟರ್ ರಿಲೀಸ್ ಆಗಿದೆ.

ಗಣೇಶ್ ಅಭಿನಯಿಸುತ್ತಿರುವ ಸಖತ್ ಸಿನಿಮಾದಲ್ಲಿ ಗಣೇಶ್ ಅವರ ಚಿಕ್ಕ ವಯಸ್ಸಿನ ಪಾತ್ರದಲ್ಲಿ ವಿಹಾನ್ ಅಭಿನಯಿಸುತ್ತಿದ್ದಾರೆ. ಇದಲ್ಲದೇ ಗಾಳಿಪಟ-2 ಸಿನಿಮಾದಲ್ಲಿಯೂ ವಿಹಾನ್ ಅಭಿನಯಿಸಲಿದ್ದಾರೆ ಎನ್ನುವ ಮಾಹಿತಿ ಹೊರಬಿದ್ದಿದೆ.

ಗಣೇಶ್, ಮಗನ ಹುಟ್ಟುಹಬ್ಬದ ಪ್ರಯುಕ್ತ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಸಖತ್ ಸಿನಿಮಾದ ಪೋಸ್ಟರ್ ಶೇರ್ ಮಾಡಿದ್ದಾರೆ. ನಟ ದುನಿಯಾ ವಿಜಯ್, ಬುಲೆಟ್ ಪ್ರಕಾಶ್ ಸೇರಿದಂತೆ ಹಲವು ನಟರ ಪುತ್ರರು ಈಗಾಗಲೇ ಸ್ಯಾಂಡಲ್ ವುಡ್ ನಲ್ಲಿ ಮಿಂಚಲು ರೆಡಿಯಾಗಿದ್ದು ಈ ಸಾಲಿಗೆ ಗಣೇಶ್ ಪುತ್ರ ಸೇರಿದ್ದಾರೆ.
ವಿಹಾನ್ ಗಣೇಶ್ ಸಖತ್ ಸಿನಿಮಾದಲ್ಲಿ ಜೂನಿಯರ್ ಬಾಲು ಆಗಿ ತೆರೆಯ ಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿರುವ ಗಣೇಶ್, ” ಮೊಳಕೆಯ ಬೆಳೆಯುವ ಸಿರಿಯನು ತೆರೆಯ ಮೇಲೆ ನೀವೇ ನೋಡಿ ಹರಸಿ ಹಾರೈಸಿ ಆಶೀರ್ವದಿಸಿ. ಹುಟ್ಟುಹಬ್ಬದ ಶುಭಾಶಯಗಳು ಮಗನೇ” ಎಂದು ಸಂತಸದಿಂದ ಹೇಳಿದ್ದಾರೆ.

ಪೋಸ್ಟರ್ ನಲ್ಲಿ ಜೂನಿಯರ್ ಬಾಲು ಚೆಂಡು ಹಿಡಿದಿರುವ, ಪುಟ್ಬಾಲ್ ಆಡುವ, ಓಡುವ ಫೋಟೋಗಳಿವೆ. ಬಾಲ್ಯದ ಆಟದ ಬದುಕು ಈ ಪಾತ್ರದಲ್ಲಿ ಇರುವಂತೆ ಕಾಣುತ್ತಿದೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!