ಜೂನ್ 21ರಂದು ಜೀ಼ ಕನ್ನಡದಲ್ಲಿ “ನಾನು ಮತ್ತು ಗುಂಡ” ಚಲನಚಿತ್ರ

ಕನ್ನಡದ ಜನಪ್ರಿಯ ಕಿರುತೆರೆ ವಾಹಿನಿ ಜೀ಼ ಕನ್ನಡ ಪ್ರಪ್ರಥಮ ಬಾರಿಗೆ ಶಿವರಾಜ್ ಕೆ.ಆರ್.ಪೇಟೆ ಹಾಗೂ ಶ್ವಾನದ ಅಪರೂಪದ ಬಾಂಧವ್ಯ ಬಿಂಬಿಸುವ “ನಾನು ಮತ್ತು ಗುಂಡ” ಚಲನಚಿತ್ರ ಪ್ರಸಾರ ಮಾಡಲಿದೆ. ಜೂನ್ 21ರಂದು ಭಾನುವಾರ ಸಂಜೆ 7 ಗಂಟೆಗೆ ಈ ಚಿತ್ರ ಜೀ಼ ಕನ್ನಡದಲ್ಲಿ ಪ್ರಸಾರವಾಗಲಿದೆ.

ಶಂಕರ(ಶಿವರಾಜ್ ಕೆ.ಆರ್.ಪೇಟೆ) ಆಟೊ ಚಾಲಕನಾಗಿದ್ದು ಸಣ್ಣ ಪುಟ್ಟ ಸಮಸ್ಯೆಗಳಿದ್ದರೂ ತನ್ನ ಪತ್ನಿಯೊಂದಿಗೆ ಜೀವಿಸುತ್ತಿರುತ್ತಾನೆ. ಬೆಳಿಗ್ಗೆಯಿಂದ ಕಷ್ಟಪಟ್ಟು ದುಡಿದು ಸಂಜೆ ಕುಡಿತದ ಅಭ್ಯಾಸ ಅವನದು. ಒಮ್ಮೆ ಹೀಗೆ ಕುಡಿಯುತ್ತಿರುವಾಗ ತನ್ನ ಮಾಲೀಕರಿಂದ ತಪ್ಪಿಸಿಕೊಂಡ ನಾಯಿಯೊಂದು ಈತನ ಆಟೊದಲ್ಲಿ ಸೇರಿಕೊಳ್ಳುತ್ತದೆ.

ಮೊದಮೊದಲಿಗೆ ಅದನ್ನು ದೂರ ಮಾಡಲು ಪ್ರಯತ್ನಿಸಿದರೂ ಅದು ಅವನನ್ನು ಬೆನ್ನು ಹತ್ತುತ್ತದೆ. ಇಬ್ಬರ ನಡುವೆ ಬಾಂಧವ್ಯ ಪ್ರಾರಂಭಗೊಳ್ಳುತ್ತದೆ. ಇದನ್ನು ಒಪ್ಪದ ಆತನ ಪತ್ನಿ ಮನೆ ಬಿಟ್ಟು ಹೋಗುತ್ತಾಳೆ.

ಈ ಮಧ್ಯದಲ್ಲಿ ಶಂಕರ ಪ್ರಾಣಿಗಳ ಅಂಗಾಂಗದ ಮಾಫಿಯಾಗೆ ಸಿಲುಕಿಕೊಳ್ಳುತ್ತಾನೆ. ಈ ಮಾಫಿಯಾದಿಂದ ಗುಂಡನನ್ನು ರಕ್ಷಿಸಿಕೊಳ್ಳುತ್ತಾನೋ ಸ್ವತಃ ಶಂಕರನೇ ಸಂಕಷ್ಟಕ್ಕೆ ಒಳಗಾಗುತ್ತಾನೆಯೇ ಎನ್ನುವ ಕುತೂಹಲಕರ ಕಥೆ ಹೊಂದಿದೆ.
ಈ ಚಿತ್ರದಲ್ಲಿ ನಟಿಸಿದ ಶ್ವಾನ ಸಿಂಬ ತನ್ನ ನಟನೆಗೆ ತಾನೇ ಧ್ವನಿ ನೀಡಿದೆ. ಇದು ಚಲನಚಿತ್ರ ಇತಿಹಾಸದಲ್ಲಿಯೇ ಪ್ರಥಮವಾಗಿದೆ. ಸಂಯುಕ್ತಾ ಹೊರನಾಡು ಮತ್ತೊಂದು ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.
ಶ್ರೀನಿವಾಸ್ ತಿಮ್ಮಯ್ಯ ನಿರ್ದೇಶನದ ಈ ಚಲನಚಿತ್ರಕ್ಕೆ ಕಾರ್ತಿಕ್ ಶರ್ಮಾ ಸಂಗೀತ ನಿರ್ದೇಶನ ಮಾಡಿದ್ದಾರೆ. ರಘು ಹಾಸನ್ ನಿರ್ಮಾಪಕರಾಗಿದ್ದಾರೆ.

ಜೂನ್ 21 2020 ರಂದು ಭಾನುವಾರ ಸಂಜೆ 7 ಗಂಟೆಗೆ ಪ್ರಸಾರವಾಗಲಿದೆ. ಇನ್ನೇಕೆ ತಡ ಮನೆಯಲ್ಲಿ ಮನೆ ಮಂದಿ ಜೊತೆ ಕುಳಿತು ಸಮಯ ಕಳೆಯುವ ಇದೇ ಹೊತ್ತಿನಲ್ಲಿ ಮತ್ತೊಮ್ಮೆ ನಿಮ್ಮ ನೆಚ್ಚಿನ ಜೀ಼ ಕನ್ನಡ ವಾಹಿನಿಯಲ್ಲಿ “ನಾನು ಮತ್ತು ಗುಂಡ” ಚಿತ್ರ ಕುಟುಂಬದ ಜೊತೆ ನೋಡಆನಂದಿಸಿ.

This Article Has 2 Comments
  1. Pingback: DevOps

  2. Pingback: 홀덤사이트

Leave a Reply

Your email address will not be published. Required fields are marked *

Translate »
error: Content is protected !!