ಉಪೇಂದ್ರ ನಿರ್ದೇಶನದ ಹೊಸ ಚಿತ್ರ ಜೂನ್ 3 ರಂದು ಅದ್ಧೂರಿ ಮುಹೂರ್ತದೊಂದಿಗೆ ಶೂಟಿಂಗ್ ಆರಂಭ ಆಗಲಿದೆ.
ಸಿನಿಮಾ ನಿರ್ದೇಶನಕ್ಕೆ ಉಪೇಂದ್ರ ಅವರ ಪುನರಾಗಮನ ಕೇವಲ ರಿಯಲ್ ಸ್ಟಾರ್ ಅಭಿಮಾನಿಗಳಲ್ಲಿ ಕುತೂಹಲ ಸೃಷ್ಟಿಸಿಲ್ಲ. ಕನ್ನಡ ಚಿತ್ರೋದ್ಯಮದ ಜನರನ್ನು ಉತ್ಸುಕಗೊಳಿಸಿದೆ. ಬಹುಭಾಷಾ ಪ್ರಾಜೆಕ್ಟ್ ಆಗಿರುವ ಈ ಸಿನಿಮಾ ಸಂಚಲನ ಮೂಡಿಸಿದೆ.
ಕೆ ಪಿ ಶ್ರೀಕಾಂತ್ ಅವರ ವೀನಸ್ ಎಂಟರ್ಟೈನರ್ಸ್ ಸಹಯೋಗದೊಂದಿಗೆ ಜಿ ಮನೋಹರನ್ ಅವರ ಲಹರಿ ಫಿಲ್ಮ್ಸ್ ಈ ಚಿತ್ರಕ್ಕೆ ಕೈ ಜೋಡಿಸಿದೆ.
ಮುಹೂರ್ತದ ಬಗ್ಗೆ ಮಾತನಾಡಿರುವ ಕೆಪಿ ಶ್ರೀಕಾಂತ್, ‘ಈ ಯೋಜನೆಯ ಬಗ್ಗೆ ನಾವು ಒಂದು ತಂಡವಾಗಿ ಉತ್ಸಾಹದಿಂದ ಇದ್ದೇವೆ. ‘ಮಾಸ್ಟರ್ ಆಪ್ ಡೈರೆಕ್ಟರ್ಸ್ ‘ ಎಂದು ಪರಿಗಣಿಸುವ ಉಪೇಂದ್ರ ಅವರು ಚಿತ್ರ ನಿರ್ದೇಶಿಸುತ್ತಿದ್ದಾರೆ ಎನ್ನುವುದು ಖುಷಿಯ ವಿಚಾರ” ಎಂದಿದ್ದಾರೆ.
ಶೀರ್ಷಿಕೆ, ವಿಷಯ ಮತ್ತು ತಾಂತ್ರಿಕ ತಂಡದ ಬಗ್ಗೆ ಹೆಚ್ಚಿನ ವಿವರಗಳನ್ನು ನಿರ್ದೇಶಕರೇ ಬಹಿರಂಗಪಡಿಸುವ ನಿರೀಕ್ಷೆಯಿದೆ.
ಉಪೇಂದ್ರ ಅವರು ಆರ್.ಚಂದ್ರ ನಿರ್ದೇಶನದ ಕಬ್ಜ ಸಿನಿಮಾದಲ್ಲಿ ನಟಿಸುತ್ತಿದ್ದು, ಶೂಟಿಂಗ್ ಬಹುತೇಕ ಪೂರ್ಣಗೊಂಡಿದೆ. ಕೆಲ ದಿನಗಳ ಚಿತ್ರೀಕರಣ ಮಾತ್ರ ಬಾಕಿ ಉಳಿದಿದೆ. ಇದಲ್ಲದೇ ಬುದ್ಧಿವಂತ-2 ಸಿನಿಮಾ ಕೂಡ ರಿಲೀಸ್ ಗೆ ಸಿದ್ಧವಾಗಿದೆ.
___

Be the first to comment