ಈ ಹಿಂದೆ ತಲೆ ಬಾಚ್ಕೊಳಿ ಪೌಡರ್ ಹಾಕ್ಕೊಳಿ ಎಂಬ ಹಾಸ್ಯಚಿತ್ರ ನಿರ್ಮಿಸಿದ್ದ ವಿಕ್ರಮ ಆರ್ಯ ಗ್ಯಾಪ್ ನಂತರ ಮತ್ತೊಮ್ಮೆ ತೆರೆಮೇಲೆ ನಾಯಕನಾಗಿ ಎಂಟ್ರಿ ಕೊಡುತ್ತಿದ್ದಾರೆ. ಮಹಿಳಾಪ್ರದಾನ ಕಥಾಹಂದರ ಹೊಂದಿರುವ ಈ ಚಿತ್ರದಲ್ಲಿ ಮೇಘನಾರಾಮ್ ನಾಯಕಿಯಾಗಿ ನಟಿಸಿದ್ದಾರೆ. ಆ ಚಿತ್ರದ ಹೆಸರು ಪದ್ಮಾವತಿ. ರಾವ್ ಅಂಡ್ ರಾವ್ ಸಿನಿಮಾಸ್ ಲಾಂಛನದಲ್ಲಿ ದಾಮೋದರ್‌ರಾವ್, ನಾಮದೇವ ಭಟ್ಟರ್ ನಿರ್ಮಿಸಿರುವ ಈ ಚಿತ್ರವು ಇದೇ ಶುಕ್ರವಾರ ರಾಜ್ಯಾದ್ಯಂತ ತೆರೆಕಾಣುತ್ತಿದ್ದು, ಮಿಥುನ್ ಚಂದ್ರಶೇಖರ್ ಅವರು ಕಥೆ, ಚಿತ್ರಕಥೆ ರಚಿಸಿ ನಿರ್ದೇಶನ ಮಾಡಿದ್ದಾರೆ.
ಈಚೆಗೆ ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ
ವಿಕ್ರಂಆರ್ಯ ಹೊಸಬರಾದರೂ ಮಾದ್ಯಮಗಳಿಂದ ನಮಗೆ ಉತ್ತಮ ಪ್ರೋತ್ಸಾಹ ಬೆಂಬಲ ಸಿಗುತ್ತಿದೆ. ಒಂದು ಹಿಟ್ ಸಿನಿಮಾ ಕೊಡುವ ಆಸೆಯನ್ನು ಈ ಚಿತ್ರ ಈಡೇರಿಸುತ್ತದೆಂಬ ಭರವಸೆಯಿದೆ, ಅಂಥಾ ಅದ್ಭುತವಾದ ಕಂಟೆಂಟ್ ನಮ್ಮ ಚಿತ್ರದಲ್ಲಿದೆ. ನಿರ್ದೇಶಕರು ಒಂದು ಹೆಣ್ಣಿನ ಜೀವನದ ಕಥೆಯನ್ನು ಅದ್ಭುತವಾಗಿ, ಅರ್ಥಪೂರ್ಣವಾಗಿ ಹೇಳಿದ್ದಾರೆ. ತಾಯ್ತನದ, ಸಂಸಾರದ, ಸುಖವನ್ನು ಅನುಭವಿಸಬೇಕೆಂಬ ಆಸೆ ಪ್ರತಿ ಹೆಣ್ಣಿಗೂ ಇರುತ್ತದೆ, ಚಿತ್ರದ ಕಥೆ ಎಲ್ಲರ ಮನಸಿಗೂ ಫೀಲ್ ಆಗುತ್ತದೆ. ನಾನು ಈ ಚಿತ್ರದಲ್ಲಿ ಕ್ಯಾಪ್ಟನ್ ಪಾತ್ರ ಮಾಡಿದ್ದೇನೆ. ಚೈಲ್ಡ ಹುಡ್ ಲವ್‌ಸ್ಟೋರಿ, ಬಾಲ್ಯದಲ್ಲಿ ಪ್ರಾರಂಭವಾಗಿ ಯವ್ವನದಲ್ಲಿ ಸ್ಟಾಪ್ ಆಗುತ್ತದೆ, ನಂತರ ವೃದ್ದಾಪ್ಯದಲ್ಲಿ ಕಂಟಿನ್ಯೂ ಆಗುತ್ತದೆ, ಒಂದೇ ಸೀನನ್ನು ಮೂರು ಥರದಲ್ಲಿ ಕ್ರಿಯೇಟ್ ಮಾಡಿದ್ದೇವೆ. ಉತ್ತಮ ಹಾಡುಗಳು, ಆಕ್ಷನ್ ಹೀಗೆ ಎಲ್ಲಾ ರೀತಿಯ ಕಮರ್ಷಿಯಲ್ ಎಲಿಮೆಂಟ್ಸ್ ಇರುವ ಚಿತ್ರವಿದು, ಜೊತೆಗೆ ನಾವು ಶೂಟ್ ಮಾಡಿರುವ ಲೊಕೇಶನ್‌ಗಳು ಒಂದಕ್ಕಿಂತ ಒಂದು ಅದ್ಭುತವಾಗಿವೆ ಎಂದು ಹೇಳಿದರು.
ನಾಯಕಿ ಮೇಘನಾರಾಮ್ ಮಾತನಾಡಿ ಇದೇ ಶುಕ್ರವಾರ ನಮ್ಮ ಚಿತ್ರ ರಿಲೀಸಾಗುತ್ತಿದೆ, ತುಂಬಾ ವರ್ಷಗಳ ನಂತರ ವಿಭಿನ್ನ ಚಿತ್ರ ಬರುತ್ತಿದೆ. ನಾಯಕಿ ಪ್ರಧಾನ ಚಿತ್ರದ ಟೈಟಲ್ ರೋಲ್‌ನಲ್ಲಿ ನಾನು ಕಾಣಿಸಿಕೊಂಡಿದ್ದೇನೆ. ಹೆಣ್ಣಿನ ಕುರಿತಾದ ಕಥಾಹಂದರ ಇಟ್ಟುಕೊಂಡು ಸಿನಿಮಾ ಮಾಡೋಡು ಕಮ್ಮಿ. ನನ್ನ ಪಾತ್ರಕ್ಕೂ ೩ ಶೇಡ್ಸ್ ಇದೆ. ಎಲ್ಲರಿಗೂ ಇಂಥ ಪಾತ್ರಗಳು ಸಿಗೋದಿಲ್ಲ ಎಂದು ಹೇಳಿದರು.
ನಿರ್ದೇಶಕ ಮಿಥುನ್ ಚಂದ್ರಶೇಖರ್ ಮಾತನಾಡಿ ಮಹಿಳಾಪ್ರದಾನ ಕಥೆಯಾದರೂ ಎಲ್ಲ ರೀತಿಯ ಕಮರ್ಷಿಯಲ್ ಎಲಿಮೆಂಟ್ಸ್ ಚಿತ್ರದಲ್ಲಿವೆ,
ಜೊತೆಗೆ ಎಲ್ಲಾ ಕಡೆ ಉತ್ತಮ ಥೇಟರ್‌ಗಳು ಸಿಕ್ಕಿವೆ ಎಂದು ಹೇಳಿದರು. ಮಂಗಳಮುಖಿ ಪಾತ್ರ ಮಾಡಿರುವ ಮೈಸೂರು ರಮಾನಂದ್ ತಮ್ಮಪಾತ್ರದ ಕುರಿತು ಹೇಳಿಕೊಂಡರು.
ಶೋಯಬ್ ಅಹ್ಮದ್ ಅವರ ಛಾಯಾಗ್ರಹಣ ಹಾಗೂ
ದಿನೇಶ್ ಕುಮಾರ್ ಅವರ ಸಂಗೀತ ಸಂಯೋಜನೆ, ಈಶ್ವರ್ ಅವರ ಸಂಕಲನ, ಥ್ರಿಲ್ಲರ್ ಮಂಜು ಅವರ ಸಾಹಸ ನಿರ್ದೇಶನ, ತ್ರಿಭುವನ್ ಅವರ ನೃತ್ಯ ನಿರ್ದೇಶನ, ಪ್ರೇಮ್ ಸಾಯಿ ಅವರ ಸಾಹಿತ್ಯವೂ ಈ ಚಿತ್ರಕ್ಕಿದೆ. ಲತಾ ಎಸ್. ಅವರು ಈ ಚಿತ್ರದ ಕಥೆ ಹಾಗೂ ಚಿತ್ರಕತೆಯನ್ನು ರಚಿಸಿದ್ದಾರೆ. ವಿಕ್ರಮ್‌ಆರ್ಯ, ಮೇಘನಾರಾಮ್,
ದಾಮೋದರ್‌ರಾವ್, ರಾಘವ ಕಲಾಲ್, ಸುರೇಶ್ ಸಾಯಿರಾಮ್, ಅಭಿಲಾಷ್, ಶರಣ್ ಗಿನಕೇರಿ, ಶಿವಮೊಗ್ಗ ರಾಮಣ್ಣ, ಸಿ.ಎನ್.ಪ್ರೀತಿ, ರಾಜೇಶ್ವರಿಪಾಂಡೆ, ಅರ್ಚನಾ ಶೆಟ್ಟಿ ಸೇರಿದಂತೆ ಮುಂತಾದವರ ತಾರಾಗಣ ಈ ಚಿತ್ರಕ್ಕಿದೆ.
Be the first to comment