ಮಹಿಳಾ ಪ್ರಧಾನ ಸಿನಿಮಾ ಆದ ‘ಜೂಲಿಯಟ್ 2’ ಸಿನಿಮಾ ಫೆಬ್ರವರಿ 24 ರಂದು ಗ್ರ್ಯಾಂಡ್ ಆಗಿ ರಿಲೀಸ್ ಆಗುತ್ತಿದೆ.
ಬೃಂದಾ ಆಚಾರ್ಯ ನಟನೆಯ ‘ಜೂಲಿಯೆಟ್ 2’ ಇದು ಮಹಿಳಾ ಪ್ರಧಾನ ಚಿತ್ರ. ತೊಂದರೆಗೆ ಸಿಲುಕಿದ ಹೆಣ್ಣು ಮಗಳು ಹೇಗೆ ಪ್ರತಿಕಾರ ತೀರಿಸಿಕೊಳ್ಳುತ್ತಾಳೆ ಎಂಬುದು ಇದರ ಪ್ರಮುಖ ಕಥಾಹಂದರ. ಸಾಮಾನ್ಯವಾಗಿ ಜೂಲಿಯೆಟ್ ಎಂದ ತಕ್ಷಣ ಪ್ರೇಮಕಥೆ ಅಂದುಕೊಳ್ಳುತ್ತಾರೆ. ಆದರೆ ಇದು ಲವ್ ಸ್ಟೋರಿ ಸಿನಿಮಾ ಅಲ್ಲ. ಇದರಲ್ಲಿ ರೋಮಿಯೋ ಇರುವುದಿಲ್ಲ. ಇಲ್ಲಿ ತಪ್ಪು ಮಾಡಿದವರಿಗೆ ಇಲ್ಲಿಯೇ ಶಿಕ್ಷೆ ಎಂಬುದನ್ನು ಈ ಸಿನಿಮಾ ಮೂಲಕ ಹೇಳ ಹೊರಟ್ಟಿದ್ದೇವೆ ” ಎಂದು ನಿರ್ದೇಶಕ ವಿರಾಟ್ ಬಿ. ಗೌಡ ಹೇಳಿದ್ದಾರೆ.
ಬೆಳ್ತಂಗಡಿ ಬಳಿಯ ಪಶ್ಚಿಮಘಟ್ಟದ ಕಾಡೊಂದರಲ್ಲಿ ಹೆಚ್ಚಿನ ಚಿತ್ರೀಕರಣ ಮಾಡಿದ್ದೇವೆ. ಇದು ನನ್ನ ಪ್ರಥಮ ಸಿನಿಮಾ’ ಎಂದು ನಿರ್ದೇಶಕರು ತಿಳಿಸಿದ್ದಾರೆ.
ಆನಂದ್ ಆಡಿಯೋ ಮೂಲಕ ಚಿತ್ರದ ಟ್ರೇಲರ್ ಅನಾವರಣ ಆಗಿದೆ. ಟ್ರೇಲರ್ ಮತ್ತು ಹಾಡುಗಳಿಗೆ ಜನರಿಂದ ಮೆಚ್ಚುಗೆ ಸಿಕ್ಕಿರುವುದು ಚಿತ್ರತಂಡಕ್ಕೆ ಖುಷಿ ನೀಡಿದೆ.
ಚಿತ್ರದಲ್ಲಿ ಬೃಂದಾ ಆಚಾರ್ಯ ಜೊತೆ ಅನೂಪ್ ಸಾಗರ್, ಖುಷ್ ಆಚಾರ್ಯ, ರವಿ, ರಾಧೇಶ್ ಶೆಣೈ, ಶ್ರೀಕಾಂತ್ ಮುಂತಾದವರು ನಟಿಸಿದ್ದಾರೆ.
2022ರಲ್ಲಿ ಬಿಡುಗಡೆಯಾದ ‘ಪ್ರೇಮಪೂಜ್ಯಂ’ ಸಿನಿಮಾದಲ್ಲಿ ಬೃಂದಾ ಆಚಾರ್ಯ ಗಮನ ಸೆಳೆದಿದ್ದರು. ಇದು ನೆನಪಿರಲಿ ಪ್ರೇಮ್ ಅವರ 25ನೆಯ ಚಿತ್ರ ಆಗಿತ್ತು.
ಚಿತ್ರಕ್ಕೆ ಲಿಖಿತ್ ಆರ್. ಕೋಟ್ಯಾನ್ ನಿರ್ಮಿಸಿರುವ ಈ ಚಿತ್ರಕ್ಕೆ ಸಚಿನ್ ಬಸ್ರೂರ್ ಹಿನ್ನೆಲೆ ಸಂಗೀತ ನೀಡಿದ್ದಾರೆ.
‘ನಿರ್ದೇಶಕರು ಹೇಳಿದ ಕಥೆ ಇಷ್ಟವಾಯಿತು. ನಾನು ಇದರಲ್ಲಿ ಜೂಲಿಯೆಟ್ ಪಾತ್ರದ ಮಾಡಿದ್ದೇನೆ. ಇದೊಂದು ವಿಭಿನ್ನ ಕಥೆ ಇರುವ ಸಿನಿಮಾ. ಮಹಿಳೆ ಅಬಲೆಯಲ್ಲ, ಆಕೆ ಸಬಲೆ ಎಂದು ಈ ಚಿತ್ರದ ಮೂಲಕ ನಿರ್ದೇಶಕರು ಹೇಳಹೊರಟ್ಟಿದ್ದಾರೆ ‘ ಎಂದು ಬೃಂದಾ ಆಚಾರ್ಯ ಹೇಳಿದ್ದಾರೆ.
___
Be the first to comment