‘ಜುಗಲ್ ಬಂದಿ’ ಶೂಟಿಂಗ್ ಮುನ್ನ ಆಡಿಯೋ ರೈಟ್ಸ್ ಸೋಲ್ಡ್ ಔಟ್

ಹೊಸಬರ ಚಿತ್ರ ‘ಜುಗಲ್ ಬಂದಿ’ ಶುರುವಾಗುವ ಮೊದಲೇ ಆಡಿಯೋ ರೈಟ್ಸ್ ಸೋಲ್ಡ್ ಔಟ್ ಆಗುವ ಮೂಲಕ ದಾಖಲೆ ಮಾಡಿದೆ.

ಹೊಸ ತಂಡದ ಸಿನಿಮಾಕ್ಕೆ ಸಖತ್ ಡಿಮ್ಯಾಂಡ್ ಬಂದಿದೆ. ಸ್ಟಾರ್ ಹೀರೋ ಸಿನಿಮಾಗಳು ಸೆಟ್ಟೇರುವ ಮೊದಲು ಡಿಮ್ಯಾಂಡ್ ಕ್ರಿಯೇಟ್ ಆಗುವುದು ಕಾಮನ್. ಆದರೆ ಹೊಸಬರ ಸಿನಿಮಾದಿಂದಲೂ ಇದು ಖಂಡಿತ ಸಾಧ್ಯ ಎನ್ನುವುದನ್ನು ಜುಗಲ್ ಬಂದಿ ಸಿನಿಮಾ ತಂಡ ಸಾಭೀತು ಮಾಡಿದೆ.

ದಿವಾಕರ್ ಡಿಂಡಿಮ ಆಕ್ಷನ್ ಕಟ್ ಹೇಳಿ ನಿರ್ಮಾಣ ಮಾಡಲು ಸಜ್ಜಾಗಿರುವ ಜುಗಲ್ ಬಂದಿ ಸಿನಿಮಾಕ್ಕೆ ಸಿಕ್ಕಾಪಟ್ಟೆ ಬೇಡಿಕೆ ಸೃಷ್ಟಿಯಾಗಿದೆ. ಜುಗಲ್ ಬಂದಿ ಚಿತ್ರ ಶುರುವಾಗುವ ಮೊದಲೇ ಚಿತ್ರದ ಆಡಿಯೋ ರೈಟ್ಸ್ ಉತ್ತಮ ಮೊತ್ತಕ್ಕೆ ಸೇಲ್ ಆಗಿದೆ.

ಆಡಿಯೋ ರೈಟ್ಸ್ ಸೇಲ್ ಆದ ಖುಷಿಯಲ್ಲಿರುವ ಚಿತ್ರತಂಡ ಶುಭ ಘಳಿಗೆಯಲ್ಲಿ ಅದ್ಧೂರಿಯಾಗಿ‌ ಚಿತ್ರದ ಮುಹೂರ್ತ ನೆರವೇರಿಸಿದೆ. ಬೆಂಗಳೂರಿನ ವರಸಿದ್ದಿ ವಿನಾಯಕ ದೇಗುಲದಲ್ಲಿ ನಡೆದ ಸಿನಿಮಾ ಮುಹೂರ್ತ ಕಾರ್ಯಕ್ರಮದಲ್ಲಿ ನಾಯಕ ಯಶ್ ಶೆಟ್ಟಿ, ಸಂತೋಷ್ ಅಶ್ರಯ್, ಅಶ್ವಿನ್ ರಾವ್ ಪಲ್ಲಕ್ಕಿ, ಅರ್ಚನಾ ಕೊಟ್ಟಿಗೆ ಮಾನಸಿ ಸುಧೀರ್, ನಿರ್ದೇಶಕ ದಿವಾಕರ್ ಡಿಂಡಿಮ ಮುಂತಾದವರು ಭಾಗಿಯಾಗಿದ್ದರು.

ಥ್ರಿಲ್ಲರ್ ಸಬ್ಜೆಕ್ಟ್ ಹೊಂದಿರುವ ಜುಗಲ್ ಬಂದಿ ಸಿನಿಮಾಗೆ ಪ್ರದ್ಯೋತನ್ ಸಂಗೀತ, ಎಸ್ ಕೆ ರಾವ್ ಕ್ಯಾಮೆರಾ ಸಿನಿಮಾದಲ್ಲಿರಲಿದೆ. ಈಗಾಗಲೇ ರಿಲೀಸ್ ಆಗಿರುವ ಫಸ್ಟ್ ಲುಕ್ ಸಿನಿಮಾ ಮೇಲಿನ ನಿರೀಕ್ಷೆಯನ್ನು ದುಪ್ಪಟ್ಟು ಮಾಡಿದೆ. 22ನೇ ತಾರೀಖಿನಿಂದ ಜುಗಲ್ ಬಂದಿ ಸಿನಿಮಾದ ಶೂಟಿಂಗ್ ಶುರುವಾಗಲಿದೆ ಎಂದು ಚಿತ್ರತಂಡ ಹೇಳಿದೆ.
____

Be the first to comment

Leave a Reply

Your email address will not be published. Required fields are marked *

Translate »
error: Content is protected !!