ಪುಷ್ಪ 2 ಸಿನಿಮಾದಲ್ಲಿ 19 ವರ್ಷಗಳ ಹಿಂದಿನ ‘ಜೋಗಿ’ ಟ್ರೆಂಡ್ ನ್ನು ರೀಕ್ರಿಯೇಟ್ ಮಾಡಲಾಗಿದೆ ಎಂದು ಚರ್ಚೆ ನಡೆಯುತ್ತಿದೆ.
ಅಲ್ಲು ಅರ್ಜುನ್ ಪು ಪ್ಪ 2 ಸಿನಿಮಾದ ಪುಷ್ಪ, ಪುಷ್ಪ ಹಾಡನ್ನು ನೋಡಿದ ಜನರಿಗೆ ‘ಜೋಗಿ’ ಸಿನಿಮಾ ನೆನಪಾಗಿದೆ. ಅಲ್ಲು ಅರ್ಜುನ್ ತೊಟ್ಟ ಡ್ರೆಸ್ ಹಾಗೂ ‘ಜೋಗಿ’ ಚಿತ್ರದಲ್ಲಿ ಶಿವರಾಜ್ಕುಮಾರ್ ಧರಿಸಿದ್ದ ಕಾಸ್ಟ್ಯೂಮ್ಗೂ ಹೋಲಿಕೆ ಇದೆ ಎನ್ನಲಾಗಿದೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಹಾಗೂ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಎರಡು ಸಿನಿಮಾಗಳ ಸ್ಟೈಲ್ ಬಗ್ಗೆ ಚರ್ಚೆ ನಡೆಯುತ್ತಿದೆ.
ಅಲ್ಲು ಅರ್ಜುನ್ ಅಭಿನಯದ ಪುಷ್ಪ2 ಸಿನಿಮಾ ಟೈಟಲ್ ಸಾಂಗ್ ರಿಲೀಸ್ ಆಗಿದ್ದು ಭರ್ಜರಿ ಸದ್ದು ಮಾಡ್ತಿದೆ. 6 ಭಾಷೆಗಳಲ್ಲಿ ಈ ಸಾಂಗ್ ಬಿಡುಗಡೆ ಆಗಿದೆ. ಯೂಟ್ಯೂಬ್ ನಲ್ಲಿ ಮಿಲಿಯನ್ಗಟ್ಟಲೆ ವೀವ್ಸ್ ಪಡೆದುಕೊಂಡಿದೆ.
ಟೈಟಲ್ ಸಾಂಗ್ ಕೊನೆಯಲ್ಲಿ ಅಲ್ಲು ಅರ್ಜುನ್ ತೊಟ್ಟಿರುವ ಶರ್ಟ್ ಡಿಸೈನ್ ನಲ್ಲಿ ರಕ್ತದ ಅಂಗೈ ಗುರುತು ಇದೆ. 19 ವರ್ಷಗಳ ಹಿಂದೆ ತೆರೆಕಂಡ ಜೋಗಿ ಸಿನಿಮಾದಲ್ಲೂ ಶಿವಣ್ಣ ರಕ್ತದ ಅಂಗೈ ಗುರುತು ಇರುವ ಟೀ ಶರ್ಟ್ ಧರಿಸಿದ್ರು. ಜೋಗಿ ಸಿನಿಮಾ ಹಿಟ್ ಆದ ಬಳಿಕ ಶಿವಣ್ಣ ತೊಟ್ಟ ಡಿಸೈನರ್ ಟೀ ಶರ್ಟ್ಗೆ ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆ ಇತ್ತು.
‘ಪುಷ್ಪ’ ಚಿತ್ರದಲ್ಲಿ ‘ಜೋಗಿ’ ಡಿಸೈನ್ ಕಾಪಿ ಮಾಡಲಾಗಿದೆ ಎಂದು ಕೆಲವರು ಕಮೆಂಟ್ ಮಾಡುತ್ತಿದ್ದಾರೆ. ಕನ್ನಡದ ‘ಜೋಗಿ’ ಚಿತ್ರದಿಂದ ಸ್ಪೂರ್ತಿ ಪಡೆದು ನಿರ್ದೇಶಕ ಸುಕುಮಾರ್ ‘ಪುಷ್ಪ’-2 ಚಿತ್ರದಲ್ಲಿ ಇದನ್ನು ಬಳಸಿದ್ದಾರೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಆಗ್ತಿದೆ. ಈ ಬಗ್ಗೆ ಮೀಮ್ಸ್ ಕ್ರಿಯೇಟ್ ಮಾಡಿ ಕೆಲವರು ವೈರಲ್ ಮಾಡುತ್ತಿದ್ದಾರೆ.
ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ ‘ಪುಷ್ಪ: ದಿ ರೂಲ್’ ಬಹುನಿರೀಕ್ಷಿತ ಚಿತ್ರಗಳಲ್ಲಿ ಒಂದಾಗಿದೆ. ಪುಷ್ಪ 2: ದಿ ರೂಲ್ ಆಗಸ್ಟ್ 15 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.
Be the first to comment