ಮುಂಗಾರು ಸಿನಿಮಾಗೆ ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಕೆಲಸ ಮಾಡಿದ್ದ ಕವೀಶ್ ಶೆಟ್ಟಿ ಈಗ ಜಿಲ್ಕ ಸಿನಿಮಾದ ಮೂಲಕ ನಿರ್ದೇಶಕನಾಗಿಯೂ ನಾಯಕನಾಗಿಯೂ ಎಂಟ್ರಿ ಕೊಡ್ತಿದ್ದಾರೆ. ವಿಷೇಷ ಅಂದ್ರೆ ಈ ಸಿನಿಮಾದಲ್ಲಿ ಕವೀಶ್ ಶೆಟ್ಟಿ ಮೂರು ಶೇಡ್ ನಲ್ಲಿ ಕಾಣಿಸಿಕೊಂಡಿದ್ದು, ತಮ್ಮ ಪಾತ್ರಕ್ಕಾಗಿ ಮೂರು ಬಾರಿ ಬಾಡಿ ವೇಟ್ ಚೇಂಜ್ ಮಾಡ್ಕೊಂಡಿದ್ದಾರೆ.
ಸ್ಕೂಲ್ ಡೇಸ್ ಹುಡ್ಗ, ಕಾಲೇಜ್ ಹುಡ್ಗ ಹಾಗೂ ಮೆಚ್ಯುರ್ಡ್ ಯಂಗ್ ಮ್ಯಾನ್ ಆಗಿ ಟ್ರಿಪಲ್ ಶೇಡ್ ನಲ್ಲಿ ಕಾಣಿಸಿಕೊಳ್ತಿದ್ದು, ಕರೆಂಟ್ ಜನರೇಷನ್ ಕಥೆಯನ್ನ ಜಿಲ್ಕ ಸಿನಿಮಾದ ಮೂಲಕ ಜಾಲಿಯಾಗಿ ತೋರಿಸೋಕೆ ರೆಡಿಯಾಗಿದ್ದಾರೆ.
ಕನ್ನಡ, ಮರಾಠಿ, ಹಿಂದಿ ಮೂರು ಭಾಷೆಯಲ್ಲೂ ಜಿಲ್ಕ ಬರಲಿದ್ದು, ಮೂರು ಭಾಷೆಯಲ್ಲೂ ರೀಶೂಟ್ ಮಾಡಿದೆ ಚಿತ್ರತಂಡ. ಬಹಳಷ್ಟು ಹೋಮ್ ವರ್ಕ್ ಮಾಡ್ಕೊಂಡು ಸ್ಟ್ರಗಲ್ ಮಾಡ್ಕೊಂಡು ಜಿಲ್ಕ ಮೂಲಕ ಜನರೇಷನ್ ಜಲಕ್ ಕೊಡೋಕೆ ಕವೀಶ್ ಶೆಟ್ಟಿ ತಯಾರಾಗಿದ್ದಾರೆ. ಇನ್ನು ಪ್ರಿಯಾಂಕ ಹೆಗ್ಡೆ ಹಾಗೂ ಲಕ್ಷ್ಯ ಶೆಟ್ಟಿ ನಾಯಕಯಿರಾಗಿ ನಟಿಸಿದ್ದಾರೆ.
ಕವೀಶ್ ಶೆಟ್ಟಿ, ಕಿಶೋರ್ ಖುಬ್ ಹಾಗು ಸ್ನೇಹಿತರೊಂದಿಗೆ ಈ ಸಿನಿಮಾ ನಿರ್ಮಾಣ ಮಾಡಿದ್ದು, ಸದ್ಯ ಪೋಸ್ಟರ್ ಮೂಲಕ ಪ್ರೊಮೋಷನ್ ಶುರು ಮಾಡಿಕೊಂಡಿದೆ ಚಿತ್ರತಂಡ. ಪೋಸ್ಟರ್ ಗಳಲ್ಲಿಯೇ ಅಟ್ರ್ಯಾಕ್ಷನ್ ಕ್ರಿಯೇಟ್ ಮಾಡಿರೋ ಕವೀಶ್ ಶೆಟ್ಟಿ ಸದ್ಯದಲ್ಲೇ ಜಿಲ್ಕ ಮೂಲಕ ಥಿಯೇಟರ್ ನಲ್ಲಿ ಜಲಕ್ ತೋರಿಸಲಿದ್ದಾರೆ.
Pingback: Buy Sex Toys Online