ಕಿರಿಕ್ ಪಾರ್ಟಿ, ಪ್ರೇಮಂ, ಜಾರ್ಲಿ ಹಾಗೂ ಬೆಂಗಳೂರ್ ಡೇಸ್ ಸಿನಿಮಾಗಳು ಪ್ರೇಕ್ಷಕರನ್ನು ಹುಚ್ಚೆಬ್ಬಿಸಿವೆ. ಆದರೆ ಇತ್ತೀಚಿಗೆ ಯುವ ಮನಸ್ಸುಗಳನ್ನು ತಣ್ಣಗೆ ಮಾಡಲು ಯಾವುದೇ ಅಂತಹ ಲವ್ ಕಹಾನಿ ಸಿನಿಮಾ ಸ್ಯಾಂಡಲ್ ವುಡ್ ನಲ್ಲಿ ಕಾಣಿಸಿಲ್ಲ. ಇದೇ ನಿಟ್ಟಿನಲ್ಲಿ ಕೆಲವು ದಿನಗಳಿಂದ ಗಾಂಧಿ ನಗರದಲ್ಲಿ ಸದ್ದು ಮಾಡುತ್ತಿರುವ ಜಿಲ್ಕ ಸಿನಿಮಾದ ಟೀಸರ್ ಜೀ ಸೌತ್ ಮ್ಯೂಸಿಕ್ ನಲ್ಲಿ ಬಿಡುಗಡೆಯಾಗಿದೆ.
ಕನ್ನಡ, ಹಿಂದಿ, ಮರಾಠಿ ಭಾಷೆಗಳಲ್ಲಿ ಏಕಕಾಲದಲ್ಲಿ ನಿರ್ಮಾಣವಾಗಿರುವ ಈ ಸಿನಿಮಾದ ಟೀಸರ್ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ. ಕವೀಶ್ ಶೆಟ್ಟಿ ನಟನೆ, ನಿರ್ದೇಶನ ಮಾಡಿದ ಮೊದಲ ಸಿನಿಮಾ ಇದಾಗಿದೆ.ತನ್ನ ದೇಹದ ತೂಕವನ್ನು ಒಂದೇ ಪಾತ್ರಕ್ಕಾಗಿ ಮೂರು ಬಾರಿ ಹೆಚ್ಚು ಕಡಿಮೆ ಮಾಡಿಕೊಂಡಿರುವ ಕವೀಶ್,
ಈ ಚಿತ್ರದ ಮೂಲಕ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.ಎರಡು ವರ್ಷಗಳಿಂದ ಚಿತ್ರೀಕರಣ ಮಾಡುತ್ತಿದ್ದ ಸಿನಿಮಾ ಜಿಲ್ಕ ಇದೀಗ ಬಿಡುಗಡೆಗೆ ಸಿದ್ಧವಾಗಿದೆ. ಈ ಸಿನಿಮಾದ ಕಥೆ ಚಿತ್ರಕಥೆ ನಿರ್ದೇಶನ ಸಾಹಿತ್ಯದ ಹೊಣೆಯನ್ನು ಕವೀಶ್ ಶೆಟ್ಟಿ ಹೊತ್ತಿದ್ದು, ನಿರ್ಮಾಣದ ಹೊಣೆಯನ್ನು ಕವೀಶ್ ಶೆಟ್ಟಿ ಪ್ರೊಡಕ್ಷನ್ ಮಾಡಿದೆ.
ನಿರ್ಮಾಪಕ ಉದಯ ಶೆಟ್ಟಿ, ಕಿಶೋರ್ ಖುಭ್ ಚಂದಾನಿ, ತೇಹಾ ಸಿಂಗ್ ಸೈನಿ, ಮನೀಶ್ ನಾಗ್ ದೇವ್ ಕವೀಶ್ ಶೆಟ್ಟಿಗೆ ನಿರ್ಮಾಣದಲ್ಲಿ ಸಾಥ್ ನೀಡಿದ್ದಾರೆ. ಕವೀಶ್ ಗೆ ಕನ್ನಡದ ಹೊಸ ಪ್ರತಿಭೆ ಪ್ರಿಯಾ ಹೆಗ್ಡೆ, ಲಕ್ಷ ಶೆಟ್ಟಿ, ಗೋಪಿಕಾ ದಿನೇಶ್ ಸಾಥ್ ನೀಡಿದ್ದು, ಛಾಯಾಗ್ರಾಹಕ ವಿಶ್ವಜಿತ್ ರಾವ್, ಅಜೇಯ್ ಪಾಲ್ ಸಿಂಗ್ ಕೈಚಳಕ ತೋರಿಸಿದ್ದಾರೆ. ಹಾಗೂ ಸಂಗೀತ ಪ್ರಾಂಶು ಜಾ ನೀಡಿದ್ದು, ಸಂಕಲನದ ಹೊಣೆಯನ್ನು ಗಿರಿ ಮಹೇಶ್ ನಿರ್ವಹಿಸಿದ್ದಾರೆ.
LINK>>>>>>>>>https://youtu.be/euZZYAypIKA

Be the first to comment