‘ಜರ್ಕ್’ಗೆ ಗೆಲುವಿನ ತೃಪ್ತಿ

ಉತ್ತಮ ಕಥೆಯಿದ್ದು ಅದಕ್ಕೆ ಒಳ್ಳೆ ಪ್ರಶಂಸೆಗಳು ಸಿಕ್ಕರೇ ಅದು ಸ್ಟಾರ್ ಚಿತ್ರವಾಗಿರಲಿ ಹೊಸಬರ ಚಿತ್ರವೇ ಆಗಲಿ ಪ್ರೇಕ್ಷಕರನ್ನು ಅಪ್ಪಿ ಒಪ್ಪಿಕೊಳ್ಳುತ್ತಾರೆ ಎಂಬ ಮಾತಿಗೆ ಜರ್ಕ್ ಸಿನಿಮಾ ಹೊಸದಾಗಿ ಸೇರ್ಪಡೆಗೊಂಡಿದೆ.ಮಹಂತೇಶ ಮದಕರಿ ನಿರ್ದೇಶಿಸಿರುವ ಈ ಚಿತ್ರಕ್ಕೆ ಆರಂಭದಲ್ಲಿ ಕುಂಟುತ್ತಾ ಸಾಗಿದರೂ ಕೂಡ ನಂತರ ಸಿಕ್ಕ ಉತ್ತಮ ಪ್ರತ್ರಿಕ್ರಿಯೆಯಿಂದ ಸಕ್ಸಸ್ ಹಾದಿಯಲ್ಲಿ ಸಾಗುವ ಮೂಲಕ ಚಿತ್ರತಂಡದವರ ಮೊಗದಲ್ಲಿ ಸಂತಸ ಮೂಡಿಸಿದೆ.

ಮೆಟ್ರೋದಲ್ಲಿ ಟೆಕ್ಷೀಷಿಯನ್ ಕೆಲಸ ಮಾಡುತ್ತಿರುವ ಮಹೇಂತೇಶ್ ಮದಕರಿ ನಿರ್ದಶಿಸಿರುವ ಚೊಚ್ಚಲ ಪ್ರಯತ್ನಕ್ಕೆ ಪ್ರೇಕ್ಷಕರು ಉತ್ತಮ ರೆಸ್ಪಾನ್ಸ್ ನೀಡಿದ್ದರಿಂದಲೇ ಮೂರನೇ ವಾರದಲ್ಲೂ ಕೂಡ 24 ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣುತ್ತಿದ್ದು ಚಿತ್ರತಂಡದವರ ಮೊಗದಲ್ಲಿ ಸಂತಸ ಮೂಡಿಸಿದೆ.ನಂಬಿಕೆ, ವಿಶ್ವಾಸಗಳು ಎಲ್ಲರ ಬದುಕಲು ಬಹುಮುಖ್ಯ ಆದರೆ ಆ ನಂಬಿಕೆಗೆ ದ್ರೋಹವಾದರೆ ಎಷ್ಟು ನೋವಾಗುತ್ತದೆ ಎಂಬ ಕಥಾ ಹಂದರವನ್ನು ಹೊಂದಿರುವ ಜರ್ಕ್ ಚಿತ್ರದ ಕ್ಲೈಮ್ಯಾಕ್ಸ್ ಪ್ರೇಕ್ಷಕರನ್ನು ರಂಜಿಸಿದೆ.

ಉತ್ತರ ಕರ್ನಾಟಕ ಭಾಗದಲ್ಲಿ ಪ್ರವಾಹದಿಂದಾಗಿ, ಚಿತ್ರಮಂದಿರಗಳ ಗಳಿಕೆ ಕಡಿಮೆಯಾಗಿದ್ದರೂ ಜನರ ಬೆಂಬಲ ಚಿತ್ರಕ್ಕೆ ಸಿಕ್ಕಿದೆ ಎಂದು ಚಿತ್ರತಂಡವು ತಮ್ಮ ಸಂತಸವನ್ನು ಹಂಚಿಕೊಂಡಿತು. ಬೀದರ್‍ನ ಕೃಷ್ಣರಾಜ್, ನಿತ್ಯಾರಾಜ್ ನಾಯಕ, ನಾಯಕಿಯರಾಗಿ ಕಾಣಿಸಿಕೊಂಡಿದ್ದಾರೆ.ಇವರಿಬ್ಬರಿಗೂ ಇದು ಮೊದಲ ಚಿತ್ರ. ಸಚಿನ್ ಸಿದ್ದು ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಉಳಿದಂತೆ ಆಶಾ ಭಂಡಾರಿ ಹಾಗು ಗಡ್ಡಪ್ಪ ದ್ವಿಪಾತ್ರದಲ್ಲಿ ಕಾಣಿಸಿಕೊಂಡಿರುವುದು ವಿಶೇಷ. ಚಿತ್ರದಲ್ಲಿ ಪವನ್, ನೆ.ಲ. ನರೇಂದ್ರಬಾಬು, ಕುರಿ ರಂಗ ನಟಿಸಿದ್ದಾರೆ.

ನೆಲೆ ಮನೆ ರಾಘವೇಂದ್ರ ಮತ್ತು ಪಾಲ್ಸï ನಾಗ ಗೀತೆ ರಚಿಸಿದ್ದಾರೆ. ಎಡ್ವರ್ಡ್ ಸಂಗೀತ ನೀಡಿದ್ದಾರೆ. ತಮ್ಮ ಮೊದಲ ಚಿತ್ರದಲ್ಲೇ ವಿಭಿನ್ನ ಕಥೆಯಿಂದ ಪ್ರೇಕ್ಷಕರಿಗೆ ಜರ್ಕ್ ಕೊಟ್ಟು ಸಕ್ಸಸ್ ಹಾದಿಯಲ್ಲಿ ಸಾಗಿರುವ ನಿರ್ದೇಶಕ ಮಹಂತೇಶ ಮದಕರಿ ಮತ್ತಷ್ಟು ಚಿತ್ರಗಳಿಗೆ ಆ್ಯಕ್ಷನ್ ಕಟ್ ಹೇಳುವಂತಾಗಲಿ.

This Article Has 1 Comment
  1. Pingback: fish spatula yourfishguide.com

Leave a Reply

Your email address will not be published. Required fields are marked *

Translate »
error: Content is protected !!