ಬಿಗಿನಿಂಗ್ರಾಕ್,ಎಂಡಿಂಗ್ ಶಾಕ್.ಇದನ್ನುಕನ್ನಡದಲ್ಲಿ ಮೇಲಿನಂತೆ ಹೇಳುತ್ತಾರೆ. ‘ಜರ್ಕ್’ ಚಿತ್ರದ ಅಡಿಬರಹದಲ್ಲಿ ಇದನ್ನೆ ಹೇಳಲಾಗಿದೆ. ಮೆಟ್ರೋದಲ್ಲಿ ಕೆಲಸ ಮಾಡುತ್ತಾ ಅಂಶಕಾಲಿಕವಾಗಿ ಸಿನಿಮಾಕ್ಕೆ ಕತೆ,ಚಿತ್ರಕತೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿರುವ ಮಹಾಂತೇಶ್ಮದಕರಿಗೆಹೊಸ ಅನುಭವ.
ಇವರಿಗೆಸಮಾಜದ ಅಂಕುಡೊಂಕುಗಳನ್ನು ತಿದ್ದಬೇಕೆಂದು ಮನಸ್ಸುಯಾವಾಗಲೂ ಹೇಳುತ್ತಿತ್ತು. ಇದಕ್ಕಾಗಿ ಸಿನಿಮಾ ಮಾಡಬೇಕೆಂಬ ತುಡಿತವಿತ್ತು. ಬಿಡುವಿನ ಸಮಯದಲ್ಲಿ2500 ಕವಿತೆಗಳನ್ನು ಬರೆದಿದ್ದಾರೆ.ಮುಂದೆಗುರುಗಳು ಜಯತೀರ್ಥಅವರಿಂದಚಿತ್ರರಂಗದ ವಿಭಾಗಗಳನ್ನು ಕಲಿತುಕೊಂಡಿದ್ದಾರೆ.ಸಿನಿಮಾದಲ್ಲಿಒಟ್ಟು 62 ದೃಶ್ಯಗಳು ಇರಲಿದ್ದು, ಪ್ರತಿಯೊಂದಕ್ಕೂ ಸಂದೇಶವಿರುತ್ತದೆ.ಎಲ್ಲರಜೀವನದಲ್ಲಿ ವಿಶ್ವಾಸ, ಅಡತಡೆಗಳು ಇರುತ್ತದೆ.ಅದೇ ನಂಬಿಕೆ ದ್ರೋಹ ಮಾಡಿದಾಗ ಶಾಕ್ಆಗುತ್ತದೆ.ಒಂದೊಂದು ಪಾತ್ರ, ದೃಶ್ಯಕ್ಕೆಜರ್ಕ್ಆಗತ್ತದೆ.ಅದನ್ನು ನಾಯಕನಾದವನು ಹೇಗೆ ಎದುರಿಸುತ್ತಾನೆಎಂಬುದುಕ್ಲೈಮಾಕ್ಸ್ದಲ್ಲಿ ಬಿಚ್ಚಿಕೊಳ್ಳುತ್ತದೆ.ನಾವು ಅಂದುಕೊಂಡಂತೆಒಂದು ಕೆಲಸ ಮಾಡಲು ಹೋದಾಗ ಶೀರ್ಷಿಕೆ ಆಗುತ್ತದೆ.
ಅದನ್ನು ಮೀರಿ ಮುಂದೆ ಹೋದಾಗ ಅಡಚಣೆಗಳು ಆವರಿಸಿಕೊಳ್ಳುತ್ತದೆ.ಅದನ್ನು ಭೇದಿಸಿ ಹೊರಬರುವುದೇಸಿನಿಮಾದ ಸಾರಾಂಶವಾಗಿದೆ. ಮೊದಲರ್ಧಕೂಲ್ ಆಗಿ ಸಾಗಿದರೆ, ನಂತರ ಸೆಸ್ಪನ್ಸ್ ಆಗಿ ಕುತೂಹಲ ಹುಟ್ಟಿಸುತ್ತದೆ.ಬೆಂಗಳೂರು, ದೇವರಾಯನದುರ್ಗ, ಕುಲುಮನಾಲಿಯಲ್ಲಿಚಿತ್ರೀಕರಣ ನಡೆಸಲಾಗಿದೆ.
ದಾವಣಗೆರೆಯಿಂದಕೆಎಎಸ್ಓದಲು ಸಿಟಿಗೆ ಬಂದಾಗಇಲ್ಲಿನಜನರುಯಾವರೀತಿಆದರಿಸುತ್ತಾರೆ. ಮುಂದೆ ಗೆಳತನಕ್ಕೆ ವಾಲಿಕೊಂಡು ಪಯಣಕೈಗೊಂಡಾಗ ಆಗುವ ಅನಾಹುತಗಳಿಂದ ತಪ್ಪಿಸಿಕೊಂಡು ಬರುವ ಪಾತ್ರದಲ್ಲಿ ಬೀದರ್ ಮೂಲದಕೃಷ್ಣರಾಜ್ ನಾಯಕ.ಶ್ರೀಮಂತ ಹುಡುಗನಾಗಿ ಸಚ್ಚಿನ್ಸಿದ್ದು ಮತ್ತೋಂದು ಮುಖ್ಯ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ.ಸಮಾಜದಬಗ್ಗೆ ಚಿಂತನೆ ಮಾಡುತ್ತಾ, ಜನರಿಗೆಅರಿವು ಮೂಡಿಸುವ ನಿತ್ಯಾರಾಜ್ ಹಾಗೂ ಇಂಗ್ಲೀಷ್ ಸ್ಪೀಕಿಂಗ್ ಕೋರ್ಸ್ ಶಿಕ್ಷಕಿಯಾಗಿ ಆಶಾಭಂಡಾರಿ ನಾಯಕಿಯರು.
ಮೊದಲಬಾರಿ ದ್ವಿಪಾತ್ರದಲ್ಲಿಗಡ್ಡಪ್ಪ ಅಭಿನಯಿಸಿರುವುದು ವಿಶೇಷ. ಉಳಿದಂತೆ ಗೆಳೆಯನಾಗಿ ಪವನ್ಕುಮಾರ್, ಕುರಿರಂಗ ನಟನೆಇದೆ. ಊರಲ್ಲಿಆದರ್ಶ ವ್ಯಕ್ತಿತ್ವದ ಮನುಷ್ಯನೆಂದು ಗುರುತಿಸಿಕೊಂಡಿರುವ ನರೇಂದ್ರಬಾಬುಪಾತ್ರವುದ್ವಿತಿಯಾರ್ಧದಲ್ಲಿಅವರ ಮೇಲೆ ಕತೆಯು ಸಾಗುತ್ತದಂತೆ.ನೆಲೆಮನೆರಾಘವೇಂದ್ರ-ಪಾಲ್ಸ್ನಾಗ ಸಾಹಿತ್ಯದ ನಾಲ್ಕು ಹಾಡುಗಳಿಗೆ ಎಡ್ವರ್ಡ್ಷಾ ಸಂಗೀತವಿದೆ. ಬೀದರ್ನರವಿ.ಕೆ.ವಾಡೆದ್ ಮತ್ತುಬಳ್ಳಾರಿಯ ನಾಗರತ್ನಕಂಪಾಲಿ ಜಂಟಿಯಾಗಿಬಂಡವಾಳ ಹೂಡಿರುವಚಿತ್ರವು ಶುಕ್ರವಾರದಂದುರಾಜ್ಯದಂತ ಬಿಡುಗಡೆಯಾಗಲಿದೆ
Pingback: Agile DevOps
Pingback: devsecops