Jawan: ಜವಾನ್ ಚಿತ್ರದ ದೃಶ್ಯ ಲೀಕ್

ಬಾಲಿವುಡ್‌ನ ಬಾದ್‌ಶಾಹ್‌ ಶಾರುಖ್‌ ಖಾನ್‌ ಅಭಿನಯದ ಬಹುನಿರೀಕ್ಷಿತ ಚಿತ್ರ ʻಜವಾನ್‌ʼ ಶೂಟಿಂಗ್‌ ಮಧ್ಯೆ ಶಾರುಖ್‌ ಖಾನ್‌ ಅವರ ದೃಶ್ಯವೊಂದು ಲೀಕ್‌ ಆಗಿದ್ದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ವೈರಲ್‌ ಆಗಿರುವ ದೃಶ್ಯದಲ್ಲಿ ಶಾರುಖ್‌, ಬಾಯಲ್ಲಿ ಸಿಗರೇಟ್‌ ಕಚ್ಚಿಕೊಂಡು ಗೂಂಡಾನಿಗೆ ಬೆಲ್ಟ್‌ನಿಂದ ಹೊಡೆಯುತ್ತಿರುವುದು ಕಂಡು ಬಂದಿದೆ. ಶಾರುಖ್‌ ಮಾಸ್‌ ಲುಕ್‌ ಅಭಿಮಾನಿಗಳಲ್ಲಿ ಎದೆಬಡಿತ ಹೆಚ್ಚಿಸಿದೆ.

ಆಟ್ಲಿ ಅವರು ಈ ಚಿತ್ರವನ್ನು ನಿರ್ದೇಶಿಸಿದ್ದು, ಜೂನ್‌ 2ರಂದು ತೆರೆ ಕಾಣಲಿದೆ. ಕಳೆದ ವರ್ಷ ಸಿನೆಮಾ ಘೋಷಣೆಯಾದ ಬಳಿಕ ಶಾರೂಖ್‌ ಅವರನ್ನು ಹೊಸ ಅವತಾರದಲ್ಲಿ ಕಾಣಲು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.

ಶಾರುಖ್‌ ಖಾನ್‌ ಅಭಿನಯದ ಪಠಾಣ್‌ ಸಿನಿಮಾ ಬಾಕ್ಸ್‌ಆಫಿಸ್‌ ಧೂಳೀಪಟ ಮಾಡಿದ ಬಳಿಕ ಈ ಚಿತ್ರದ ಮೇಲೆ ಸಾಕಷ್ಟು ನಿರೀಕ್ಷೆ ಇದೆ.
__

Be the first to comment

Leave a Reply

Your email address will not be published. Required fields are marked *

Translate »
error: Content is protected !!