Jawan: ಒಟಿಟಿಗೆ ಬರ್ತಿದೆ ಜವಾನ್

ಶಾರುಕ್‌ ಖಾನ್  ನ್ಯೂ ಸಿನಿಮಾ ಜವಾನ್‌  ನವೆಂಬರ್ 2 ರಿಂದ ಒಟಿಟಿ ಸ್ಟ್ರೀಮಿಂಗ್‌ ಗೆ ಲಭ್ಯವಾಗಲಿದೆ.

 ನೆಟ್‌ಫ್ಲಿಕ್ಸ್  ಜವಾನ್‌ ಚಿತ್ರದ ಸ್ಟ್ರೀಮಿಂಗ್ ಹಕ್ಕುಗಳನ್ನು ಪಡೆದುಕೊಂಡಿದ್ದು, ಎಲ್ಲಾ ಭಾಷೆಗಳಲ್ಲಿ ಜವಾನ್‌ ಬಿಡುಗಡೆಯಾಗುತ್ತಿದೆ.

ಈ ಸಿನಿಮಾ 150 ಕೋಟಿ ರೂಪಾಯಿಗೂ ಹೆಚ್ಚು ಕಲೆಕ್ಷನ್ ಮಾಡಿದ್ದು ಹಿಂದಿಯಲ್ಲಿ 590 ಕೋಟಿ ರೂಪಾಯಿ ಕಲೆಕ್ಷನ್ ಮಾಡುವ ಮೂಲಕ ಸಾರ್ವಕಾಲಿಕ ದಾಖಲೆ ಸೃಷ್ಟಿಸಿದೆ.

ಜವಾನ್‌  ಮೊದಲ ದಿನವೇ 66.50 ಕೋಟಿ ಗಳಿಕೆ ಕಂಡಿದೆ. ಚಿತ್ರವೊಂದು ಈ ರೇಂಜ್ ನಲ್ಲಿ ಓಪನಿಂಗ್ ಪಡೆಯುತ್ತಿರುವುದು ಇದೇ ಮೊದಲು ಆಗಿದೆ. ಪಠಾಣ್  ಚಿತ್ರದ ಮೊದಲ ದಿನದ ಗಳಿಕೆ 55 ಕೋಟಿ ಆಗಿತ್ತು.  ಶಾರುಖ್ ಇದುವರೆಗೆ ಯಾವ ಚಿತ್ರವೂ ಸಾಧಿಸದ ಮೊದಲ ದಿನದ ಕಲೆಕ್ಷನ್ ದಾಖಲೆಯನ್ನು ಜವಾನ್‌ ಮೂಲಕ ಸಾಧಿಸಿದ್ದಾರೆ.

ಈ ಚಿತ್ರದ ಮೂಲಕ ತಮಿಳಿನ ಖ್ಯಾತ ನಿರ್ದೇಶಕ ಅಟ್ಲೀ ಹಾಗೂ ನಯನತಾರಾ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರು. ವಿಜಯ್ ಸೇತುಪತಿ ವಿಲನ್ ಆಗಿ ನಟಿಸಿರುವ ಈ ಚಿತ್ರ ಸೆಪ್ಟೆಂಬರ್ 7 ರಂದು ಬಿಡುಗಡೆಯಾಗಿತ್ತು. ಈ ಸಿನಿಮಾ ಈಗ ಡಿಜಿಟಲ್ ಪ್ರೀಮಿಯರ್ ಗೆ ರೆಡಿಯಾಗಿರುವುದರಿಂದ ಶಾರುಖ್ ಅಭಿಮಾನಿಗಳು ಖುಷಿಯಾಗಿದ್ದಾರೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!