ಜಾತಸ್ಯ ಅಗರಬತ್ತಿ ಲೋಕಾರ್ಪಣೆ ಮಾಡಿದ ರಾಜೇಶ್ ಕೃಷ್ಣನ್

ನೈಸರ್ಗಿಕವಾಗಿ ತಯಾರಾದ ಸಪ್ತ ರೀತಿಯ ಪರಿಮಳಯುಕ್ತ ಜಾತಸ್ಯ ಅಗರಬತ್ತಿಯನ್ನು ಖ್ಯಾತ ಹಿನ್ನೆಲೆ ಗಾಯಕ ರಾಜೇಶ್ ಕೃಷ್ಣನ್ ಅವರು ಲೋಕಾರ್ಪಣೆ ಮಾಡಿದರು.

ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಎಸ್ಆರ್ ವಿ ಥಿಯೇಟರ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಗರಬತ್ತಿ ಅನಾವರಣ ಮಾಡಿ ಮಾತಾಡಿದ ರಾಜೇಶ್ ಕೃಷ್ಣನ್ ಅವರು, ಸಂಗೀತದ ಸಪ್ತ ಸ್ವರದಂತೆ ಇರುವ ಹೊಸ ಅಗರಬತ್ತಿಯ ಪರಿಮಳ ಎಲ್ಲೆಡೆ ಹರಡಲಿ. ಪೂಜೆ ಸಂದರ್ಭದಲ್ಲಿ ಉತ್ತಮ ಪದಾರ್ಥಗಳನ್ನು ಬಳಕೆ ಮಾಡುವುದರಿಂದ ಉತ್ತಮ ಫಲಿತಾಂಶ ಸಿಗುತ್ತದೆ. ಈ ಅಗರಬತ್ತಿ ಆಧ್ಯಾತ್ಮಿಕ ಪರಿಮಳವನ್ನು ಕೊಡಲಿ ಎಂದು ಹಾರೈಸಿದರು.

ಜಾತಸ್ಯ ಅಗರಬತ್ತಿಯ ವೆಬ್ಸೈಟ್ ನ್ನು ನಿರ್ಮಾಪಕ ಭಾ. ಮ. ಹರೀಶ್ ಅವರು ಉದ್ಘಾಟಿಸಿದರು. www.Jatasya.in ಈ ವೇಳೆ ಅವರು, ಚಿತ್ರಗಳ ಟ್ರೈಲರ್ ಬಿಡುಗಡೆ ಮಾಡುತ್ತಿದ್ದ ನನಗೆ ಇದು ಹೊಸ ಅನುಭವ ನೀಡಿದೆ. ಅಗರಬತ್ತಿ ಯಶಸ್ಸು ಕಾಣಲಿ ಎಂದು ಹೇಳಿದರು.

ಸಿಇಒ ಮಂಜುನಾಥ್ ಗುಂಡಾಲ್ ಮಾತನಾಡಿ, ಅಗರಬತ್ತಿಯನ್ನು ಆಕಳದ ಸಗಣಿ ಹಾಗೂ ಗಂಜಲವನ್ನು ಬೆಳಸಿ ಸಾವಯವವಾಗಿ ತಯಾರು ಮಾಡಲಾಗಿದೆ. ಇದಕ್ಕೆ ನೈಸರ್ಗಿಕ ಹೂಗಳನ್ನು ಸಹ ಬಳಕೆ ಮಾಡಲಾಗಿದೆ. ಸುಮಾರು ಒಂದುವರೆ ವರ್ಷದಿಂದ ಯೋಜನೆ ರೂಪಿಸಿ ಕಾರ್ಯಗತಗೊಳಿಸಲಾಗಿದೆ. ಅಗರಬತ್ತಿಯನ್ನು ಬೇರೆಡೆ ರಫ್ತು ಮಾಡಲಾಗುವುದು ಎಂದು ಹೇಳಿದರು.

ಸುಂಗಂಧ ಭರಿತ ಹಾಗೂ ಭಕ್ತಿ ಸಿಂಚನದ ‘ಜಾತಸ್ಯ’ ಅಗರಬತ್ತಿಯನ್ನು ಭಾರತದಲ್ಲಿ ಅದರಲ್ಲೂ ಪ್ರಪ್ರಥಮವಾಗಿ ಕರ್ನಾಟಕದಲ್ಲಿ ಮಾರುಕಟ್ಟೆಗೆ ತರಲಾಗಿದೆ.

ಸಿನಿಮಾ, ಸಂಗೀತ ಹಾಗೂ ಜಾಹೀರಾತು ಕ್ಷೇತ್ರದಲ್ಲಿ ತನ್ನದೇ ಆದ ವಿಶಿಷ್ಠ ಛಾಪನ್ನು ಮೂಡಿಸಿರುವ ಬೆಂಗಳೂರಿನ ಪ್ರಖ್ಯಾತ ” ನೆರಳು ಮೀಡಿಯಾ” ಸಂಸ್ಥೆ ‘ಜಾತಸ್ಯ’ ಅಗರ ಬತ್ತಿಯ ಪ್ರಚಾರ ಕಾರ್ಯವನ್ನು ಕರ್ನಾಟಕದಾದ್ಯಂತ ಮಾಡಲು ಮುಂದಾಗಿದೆ. ಇದರ ಜೊತೆಯೇ ‘ಜಾತಸ್ಯ’ ಅಗರ ಬತ್ತಿಯ ಬೆಂಗಳೂರಿನ ವಿತರಣೆಯ ಜವಾಬ್ದಾರಿಯನ್ನು ” ನೆರಳು ಮೀಡಿಯ” ಸಂಸ್ಥೆಯ ಮುಖ್ಯಸ್ಥರಾದ ಶ್ರೀ ಹನುಮೇಶ್ ಪಾಟೀಲ್ ರವರು ವಹಿಸಿಕೊಂಡಿದ್ದಾರೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!