ಜಾಸ್ ಸ್ಟುಡಿಯೋ ವತಿಯಿಂದ ಆಲ್ಬಮ್ ಶೂಟ್

ಜಾಸ್ ಸ್ಟುಡಿಯೋ ವತಿಯಿಂದ ಇತ್ತೀಚೆಗೆ ಆಲ್ಬಮ್ ಶೂಟ್ ನಡೆಯಿತು. ಇದರಲ್ಲಿ ಮಕ್ಕಳು ಉತ್ಸಾಹದಿಂದ ಭಾಗವಹಿಸಿದ್ದರು.

ಜಾಸ್ ಫ್ಯಾಶನ್ ಕಾರ್ಯಕ್ರಮಗಳು, ಮಾಡಲಿಂಗ್, ಆಕ್ಟಿಂಗ್, ಫ್ಯಾಶನ್ ಪೋರ್ಟ್ ಫೋಲಿಯೋ, ಕಾರ್ಪೊರೇಟ್ ಶೂಟ್ ನಲ್ಲಿ ಹೆಸರು ಪಡೆದಿದೆ.

ಬಾಡಿ ಬಿಲ್ಡಿಂಗ್ ನಲ್ಲಿ ಅಖಿಲ ಭಾರತ ಮಟ್ಟದಲ್ಲಿ ಚಿನ್ನದ ಪದಕ ಪಡೆದ ಜೋಸ್ನಾ ವೆಂಕಟೇಶ್, ಫ್ಯಾಶನ್ ಫೋಟೋಗ್ರಾಫರ್ ಶಬರೀಶ್ ಬಾಲಕೃಷ್ಣ ನಾಯ್ಡು ಅವರು ಜಾಸ್ ಸ್ಟುಡಿಯೋವನ್ನು ಸ್ಥಾಪಿಸಿದರು.

ಜೋಸ್ನಾ ಅವರು ಫ್ಯಾಶನ್ ಇಂಡಸ್ಟ್ರಿಯಲ್ಲಿ 26 ವರ್ಷಗಳ ಅನುಭವವನ್ನು ಹೊಂದಿದ್ದಾರೆ. ಇವರು ಒಂದು ಸಾವಿರಕ್ಕೂ ಹೆಚ್ಚು ಮಾಡೆಲ್ ಗಳನ್ನು ರೂಪಿಸಿದ್ದಾರೆ. ಶಬರೀಶ್ ಬಾಲಕೃಷ್ಣ ನಾಯ್ಡು ಅವರು ಟೈಮ್ಸ್ ಬಿಸಿನೆಸ್ ಪ್ರಶಸ್ತಿ ಪಡೆದಿದ್ದಾರೆ. ಇವರು ಫ್ಯಾಶನ್ ಫೋಟೋಗ್ರಫಿಯಲ್ಲಿ 31 ವರ್ಷಗಳ ಅನುಭವವನ್ನು ಹೊಂದಿದ್ದಾರೆ.

ಜಾಸ್ ಸ್ಟುಡಿಯೋ ಲಾಕ್ ಡೌನ್ ಬಳಿಕ ಮಕ್ಕಳಿಗೆ ಫ್ಯಾಶನ್ ವಿಶೇಷ ಕಾರ್ಯಕ್ರಮವನ್ನು ರೂಪಿಸಿದ ಮೊದಲ ಕಂಪನಿ ಆಗಿದೆ. ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಮೂರರಿಂದ 18 ವರ್ಷ ವಯಸ್ಸಿನವರು 1000ಕ್ಕೂ ಹೆಚ್ಚು ಅರ್ಜಿಗಳನ್ನು ಸಲ್ಲಿಸಿದ್ದರು. ಇವರಲ್ಲಿ 200 ಮಕ್ಕಳನ್ನು ಶಾರ್ಟ್ ಲಿಸ್ಟ್ ಮಾಡಿ, ನೂರು ಮಕ್ಕಳು ಟ್ಯಾಲೆಂಟ್ ಹಂಟ್ 2022ರ ಫೈನಲ್ ಗೆ ಭಾಗವಹಿಸಲು ಅರ್ಹತೆ ಪಡೆದರು. ಇವರಲ್ಲಿ ಉತ್ತಮ 30 ಪ್ರತಿಭೆಗಳಿಗೆ ತರಬೇತಿಯನ್ನು ನೀಡಿ ಮ್ಯೂಸಿಕ್ ಆಲ್ಬಮ್ ನಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಮಕ್ಕಳು ನೃತ್ಯ ಹಾಗೂ ಫ್ಯಾಷನ್ ಕೊರಿಯೋಗ್ರಾಫಿಯಲ್ಲಿ ಹೆಸರು ಪಡೆದ ಗಣ್ಯರಿಂದ ತರಬೇತಿ ಪಡೆದರು.

ಜಾಸ್ ವತಿಯಿಂದ ಕರ್ನಾಟಕ ಗ್ರೇಶಿಯಸ್ ಫ್ಯಾಶನ್ ವೀಕ್ 2022ರ ಸೀಸನ್ 2 ಕಾರ್ಯಕ್ರಮ ಶೀಘ್ರವೇ ನಡೆಯಲಿದೆ. ಇದರಲ್ಲಿ 18ರ ವಯೋಮಾನದ ಮೇಲ್ಪಟ್ಟ ಯುವಕ ಹಾಗೂ ಯುವತಿಯರು ಭಾಗವಹಿಸಲು ಅವಕಾಶ ಇರುತ್ತದೆ. ಇದರಲ್ಲಿ ಪ್ರತಿಭೆಗೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ಆಯೋಜಕರು ತಿಳಿಸಿದ್ದಾರೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!