Skip to content
ಸುಕೇಶ್ ಚಂದ್ರಶೇಖರ್ ನ 200 ಕೋಟಿ ರೂಪಾಯಿ ವಂಚನೆ ಪ್ರಕರಣ ಸಂಬಂಧ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಅವರಿಗೆ ಮಧ್ಯಂತರ ಜಾಮೀನು ಸಿಕ್ಕಿದೆ.
ಸುಕೇಶ್ ಚಂದ್ರಶೇಖರ್ ಜೊತೆ ಸಂಪರ್ಕ ಹೊಂದಿದ್ದ ಕಾರಣದಿಂದ ಜಾಕ್ವೆಲಿನ್ ಫರ್ನಾಂಡಿಸ್ ಅವರನ್ನು ಆರೋಪಿ ಎಂದು ಹೇಳಲಾಗಿದೆ. ಈಗಾಗಲೇ ಅನೇಕ ಬಾರಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಅವರನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಈಗ ನ್ಯಾಯಾಲಯಮಧ್ಯಂತರ ಜಾಮೀನು ನೀಡಿದೆ. ಅಕ್ಟೋಬರ್ 22ರಂದು ಮುಂದಿನ ವಿಚಾರಣೆ ನಡೆಯಲಿದೆ.
ಕೆಲವೇ ದಿನಗಳ ಹಿಂದೆ ಜಾಕ್ವೆಲಿನ್ ಅವರನ್ನು ಅಧಿಕಾರಿಗಳು 7 ಗಂಟೆಗಳ ಕಾಲ ವಿಚಾರಣೆ ಮಾಡಿದ್ದರು. ಇಡಿ ಸಮನ್ಸ್ ನೀಡಿರುವುದನ್ನು ಜಾಕ್ವೆಲಿನ್ ಪ್ರಶ್ನಿಸಿದ್ದು, ಈ ಕುರಿತು ಸ್ಪಷ್ಟನೆ ನೀಡುವಂತೆ ಅಧಿಕಾರಿಗಳಿಗೆ ಕೋರ್ಟ್ ಸೂಚಿಸಿದೆ.
‘ಸುಕೇಶ್ ಚಂದ್ರಶೇಖರ್ ನಡೆಸುತ್ತಿದ್ದ ಅಕ್ರಮಗಳ ಬಗ್ಗೆ ಜಾಕ್ವೆಲಿನ್ಗೆ ತಿಳಿದಿತ್ತು. ಆದರೂ ಅವರು ಸುಕೇಶ್ನಿಂದ ಆರ್ಥಿಕ ಸಹಾಯವನ್ನು ಪಡೆದುಕೊಳ್ಳುತ್ತಿದ್ದರು. ಜಾಕ್ವೆಲಿನ್ ಅವರ ಕೇಶ ವಿನ್ಯಾಸಕ ಶಾನ್ ಅವರು ಸುಕೇಶ್ ಬಗ್ಗೆ ಮಾಹಿತಿ ನೀಡಿದ್ದರು. ಆದರೆ ಜಾಕ್ವೆಲಿನ್ ಅವರು ಈ ವಿಚಾರವನ್ನು ಕಿವಿಗೆ ಹಾಕಿಕೊಂಡಿರಲಿಲ್ಲ. ಸುಕೇಶ್ ಜತೆ ರಿಲೇಶನ್ಶಿಪ್ ಮುಂದುವರಿಸಿದ್ದರು’ ಎಂದು ಇಡಿ ತನ್ನ ಚಾರ್ಜ್ಶೀಟ್ನಲ್ಲಿ ಉಲ್ಲೇಖ ಮಾಡಿದೆ.
ಜಾಕ್ವೆಲಿನ್ ಮ್ಯಾನೇಜರ್ಗೆ ಸುಕೇಶ್ ನೀಡಿದ್ದ 8 ಲಕ್ಷ ರೂ. ಬೆಲೆಯ ಬೈಕ್ ಅನ್ನು ಇಡಿ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ಜಾಕ್ವೆಲಿನ್ ಅವರು ಇತ್ತೀಚೆಗೆ ಬಿಡುಗಡೆ ಆದ ವಿಕ್ರಾಂತ್ ರೋಣ ಚಿತ್ರದಲಿ ನಟಿಸಿದ್ದಾರೆ.
__
Post Views:
153
Translate »
error: Content is protected !!
Be the first to comment