ಜಾಕ್ವೆಲಿನ್ ಆಪ್ತೆಯ ವಿಚಾರಣೆ

ಸುಕೇಶ್ ಚಂದ್ರಶೇಖರ್ ನ 200 ಕೋಟಿ ರೂಪಾಯಿ ವಂಚನೆ ಪ್ರಕರಣದಲ್ಲಿ ಪೊಲೀಸರು ನಟಿ ಜಾಕ್ವೆಲಿನ್ ಫರ್ನಾಂಡೀಸ್ ಅಪ್ತೆಯ ವಿಚಾರಣೆಯನ್ನು ನಡೆಸಿದ್ದಾರೆ.

ಸುಕೇಶ್ ಚಂದ್ರಶೇಖರ್ ನ್ನು ಜಾಕ್ವೆಲಿನ್‌ಗೆ ಪರಿಚಯಿಸಿದ್ದ ಪಿಂಕಿ ಇರಾನಿಯನ್ನು ಈಗಾಗಲೇ ವಿಚಾರಣೆ ನಡೆಸಿರುವ ದೆಹಲಿ ಪೊಲೀಸರು, ಜಾಕ್ವೆಲಿನ್‌ನ ಸ್ಟೈಲಿಸ್ಟ್ ಲೀಪಾಕ್ಷಿ ಎಲ್ಲವಾಡಿ ಎಂಬುವರನ್ನು ವಿಚಾರಣೆ ಮಾಡಿದೆ.

ಜಾಕ್ವೆಲಿನ್‌ಗೆ ಯಾವ ಬಟ್ಟೆ ಇಷ್ಟ, ಆಕೆ ಧರಿಸುವ ಬ್ರ್ಯಾಂಡ್, ಸ್ಟೈಲ್ ಇನ್ನಿತರೆ ಮಾಹಿತಿಗಳನ್ನು ಸುಕೇಶ್, ಲೀಪಾಕ್ಷಿ ಎಲ್ಲವಾಡಿಯಿಂದ ಪಡೆಯುತ್ತಿದ್ದ ಎನ್ನಲಾಗಿದೆ. ಈ ಕಾರಣದಿಂದ ದೆಹಲಿ ಪೊಲೀಸರು ಲೀಪಾಕ್ಷಿ ಎಲ್ಲವಾಡಿಯನ್ನು ವಿಚಾರಣೆಗೆ ಒಳಪಡಿಸಿದ್ದಾರೆ.

ಸುಕೇಶ್ ಹಾಗೂ ಜಾಕ್ವೆಲಿನ್‌ ಸಂಬಂಧದ ಬಗ್ಗೆ ತನಗೆ ಗೊತ್ತಿತ್ತು ಎಂದು ಪೊಲೀಸರ ಬಳಿ ಹೇಳಿರುವ ಲೀಪಾಕ್ಷಿ, ಸುಕೇಶ್ ಹಾಗೂ ಜಾಕ್ವೆಲಿನ್ ಎಷ್ಟು ತಿಂಗಳಿನಿಂದ ಆಪ್ತವಾಗಿದ್ದಾರೆ, ಯಾವಾಗ ಭೇಟಿ ಮಾಡಿದ್ದರು, ಸ್ಥಳದ ಮಾಹಿತಿ ಇನ್ನಿತರ ಮಾಹಿತಿಗಳನ್ನು ಪೊಲೀಸರ ಮುಂದೆ ಹೇಳಿದ್ದಾರೆ ಎನ್ನಲಾಗಿದೆ.

ಸುಕೇಶ್ ಚಂದ್ರಶೇಖರ್ ವಂಚಕನಾಗಿದ್ದು, ತಮಿಳಿನ ಜನಪ್ರಿಯ ರಾಜಕಾರಣಿಯೊಬ್ಬರನ್ನು ವಂಚಿಸಿದ ಕಾರಣಕ್ಕೆ ಕೆಲ ವರ್ಷಗಳಿಂದ ತಿಹಾರ್ ಜೈಲಿನಲ್ಲಿದ್ದ. ಅಲ್ಲಿದ್ದು ತನ್ನ ಕಸುಬು ಮುಂದುವರೆಸಿದ್ದ ಸುಕೇಶ್, ರ್ಯಾನ್‌ಬಾಕ್ಸಿ ಸಂಸ್ಥೆಯ ಮಾಜಿ ಮಾಲೀಕ ಶಿವೇಂಧರ್ ಸಿಂಗ್‌ನ ಪತ್ನಿ ಅದಿತಿ ಸಿಂಗ್ ಅವರಿಂದ 200 ಕೋಟಿ ರೂಪಾಯಿ ವಸೂಲಿ ಮಾಡಿದ್ದ ಆರೋಪ ಎದುರಿಸುತ್ತಿದ್ದಾನೆ.

ಸುಕೇಶ್‌ ಚಂದ್ರಶೇಖರ್‌ ಒಬ್ಬ ವಂಚಕ ಎಂದೂ ಅಪರಾಧ ಕೃತ್ಯಗಳಿಂದ ಹಣ ಗಳಿಸುತ್ತಿದ್ದಾನೆ ಎಂದು ಗೊತ್ತಿದ್ದರೂ ಜಾಕ್ವೆಲಿನ್ ಆತನೊಟ್ಟಿಗೆ ಸಂಪರ್ಕ ಇಟ್ಟುಕೊಂಡಿದ್ದರು. ಆತನಿಂದ ದುಬಾರಿ ಬೆಲೆಯ ಉಡುಗೊರೆಗಳನ್ನು ಪಡೆದುಕೊಂಡಿದ್ದರು ಎಂದು ಇಡಿ ಆರೋಪಿಸಿದೆ.

ಸುಕೇಶ್, ಜಾಕ್ವೆಲಿನ್ ಫರ್ನಾಂಡೀಸ್ ಮಾತ್ರವೇ ಅಲ್ಲದೆ ನಟಿ ನೋರಾ ಫತೇಹಿ, ನಟಿ ನಿಕ್ಕಿ ತಾಂಬೋಲಿ, ಆರುಷಿ ಖನ್ನಾ ಸೇರಿದಂತೆ ಇನ್ನೂ ಕೆಲವು ಮಾಡೆಲ್‌ಗಳಿಗೆ ಉಡುಗೊರೆಗಳನ್ನು ನೀಡಿದ್ದ. ಇವರಿಗೆ ದೆಹಲಿ ಪೊಲೀಸರು ಸಮನ್ಸ್ ನೀಡಿದ್ದು ವಿಚಾರಣೆ ನಡೆಸುತ್ತಿದ್ದಾರೆ.
__

Be the first to comment

Leave a Reply

Your email address will not be published. Required fields are marked *

Translate »
error: Content is protected !!